News
ಟೆಸ್ಲಾ ಯುನೈಟೆಡ್ ಸ್ಟೇಟ್ಸ್‌ನಲ್ಲಿ 817,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಹಿಂಪಡೆಯುತ್ತಿದೆ. ವಾಹನಗಳನ್ನು ಪ್ರಾರಂಭಿಸಿದ ಬಳಿಕ ಸೀಟ್-ಬೆಲ್ಟ್ ರಿಮೈಂಡರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಟೆಸ್ಲಾ ಈಗ ಸುಮಾರು 817,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಹಿಂದಕ್ಕೆ ಪಡೆಯಲಾಗುತ್ತಿದೆ.
ಸುರಕ್ಷತಾ ನಿಯಂತ್ರಕರು ಗುರುವಾರ ಪೋಸ್ಟ್ ಮಾಡಿದ ದಾಖಲೆಗಳ ಪ್ರಕಾರ, 2021 ಮತ್ತು 2022 ಮಾಡೆಲ್ S ಸೆಡಾನ್ ಮತ್ತು ಮಾಡೆಲ್ X SUV ಯನ್ನು ಹಿಂದಕ್ಕೆ ಪಡೆಯಲಾಗುತ್ತಿದೆ. ಹಾಗೆಯೇ 2017 ರಿಂದ 2022 ಮಾಡೆಲ್ 3 ಸೆಡಾನ್ ಮತ್ತು 2020 ರಿಂದ 2022 ಮಾಡೆಲ್ Y SUV ಗಳನ್ನು ಕೂಡಾ ವಾಪಸ್ ಪಡೆಯಲಾಗುತ್ತಿದೆ.
ಮೆಟಾ ಷೇರು ಇತಿಹಾಸದಲ್ಲೇ ಮೊದಲ ಬಾರಿಗೆ ಕುಸಿತ: 230 ಬಿಲಿಯನ್ ಡಾಲರ್‌ಗೂ ಅಧಿಕ ನಷ್ಟ
ಫೆಡರಲ್ ಮೋಟಾರು ವಾಹನ ಸುರಕ್ಷತಾ ಕಾನೂನುಗಳು ವಾಹನಗಳನ್ನು ಪ್ರಾರಂಭಿಸಿದಾಗ ಬೆಲ್ ಆಗಬೇಕು. ಹಾಗೆಯೇ ಮುಂಭಾಗದ ಬೆಲ್ಟ್‌ಗಳನ್ನು ಹಾಕಿದ ಬಳಿಕ ಈ ಧ್ವನಿ ನಿಲ್ಲುತ್ತದೆ. ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್ (ಎನ್‌ಎಚ್‌ಟಿಎಸ್‌ಎ) ಪೋಸ್ಟ್ ಮಾಡಿದ ಈ ಹಿಂಪಡೆಯುವಿಕೆಯ ದಾಖಲೆಗಳ ಪ್ರಕಾರ, ಈ ಸಮಸ್ಯೆಯು ಕೆಲವು ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಟೆಸ್ಲಾ ಈ ತಿಂಗಳ ಆರಂಭದಲ್ಲಿ ಈ ಸಮಸ್ಯೆಯನ್ನು ಪರಿಹಾರ ಮಾಡುವ ಪ್ರಯತ್ನ ಮಾಡಿದೆ. ಈ ಸೀಟ್ ಬೆಲ್ಟ್ ತೆಗೆದಾಗ, ಹಾಕಿದಾಗ ಧ್ವನಿ ಬರದಿದ್ದರೆ, ಸೀಟ್ ಬೆಲ್ಟ್ ಸರಿಯಾಗಿ ಹಾಕಲಾಗಿದೆಯೇ ಎಂದು ಚಾಲಕರಿಗೆ ತಿಳಿಯುವುದಿಲ್ಲ. ಇದರಿಂದಾಗಿ ಅಪಘಾತದ ಸಮಯದಲ್ಲಿ ಗಾಯ ಉಂಟಾಗುವ ಅಪಾಯ ಅಧಿಕವಾಗಿದೆ ಎಂದು ಸುರಕ್ಷತಾ ಸಂಸ್ಥೆ ಹೇಳುತ್ತದೆ.
“ಯಾವುದೇ ಅಪಘಾತಗಳ ಬಗ್ಗೆ ದಾಖಲಾಗಿಲ್ಲ”
ಸಮಸ್ಯೆಯಿಂದಾಗಿ ಯಾವುದೇ ಅಪಘಾತಗಳು ಅಥವಾ ಗಾಯಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಕಂಪನಿಯು ದಾಖಲೆಗಳಲ್ಲಿ ಹೇಳುತ್ತದೆ. ಜನವರಿ 6 ರಂದು ದಕ್ಷಿಣ ಕೊರಿಯಾದ ಆಟೋಮೊಬೈಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ ಈ ಸಮಸ್ಯೆಯನ್ನು ಕಂಡುಹಿಡಿದಿದೆ. ಜನವರಿ 25 ರಂದು ಮರುಪಡೆಯುವಿಕೆ ಅಗತ್ಯವಿದೆ ಎಂದು ಟೆಸ್ಲಾ ತನಿಖಾ ವರದಿ ನಿರ್ಧಾರ ಮಾಡಿದೆ.
ಶೇ.34 ಲಾಭಕ್ಕಾಗಿ ಈ ಪೆಟ್ರೋಲಿಯಂ ಸ್ಟಾಕ್ ಖರೀದಿಸಿ!
ವಾಹನಗಳು 22km/h (13.7mph) ಕ್ಕಿಂತ ಹೆಚ್ಚು ವೇಗದಲ್ಲಿ ಹೋದರೆ ಮತ್ತು ಚಾಲಕನ ಬೆಲ್ಟ್ ಸರಿಯಾಗಿ ಹಾಕದಿದ್ದರೆ ಇನ್ನು ಸೌಂಡ್ ಆಗಲಿದೆ. ಇದರಿಂದಾಗಿ ಬೆಲ್ಟ್ ಹಾಕಲಾಗಿದೆಯೇ ಇಲ್ಲವೇ ಎಂದು ತಿಳಿಯಲಿದೆ. ಈ ವಾರ ಟೆಸ್ಲಾ ಸುಮಾರು 54,000 ಕಾರುಗಳು ಮತ್ತು SUV ಗಳನ್ನು ಹಿಂಪಡೆಯುತ್ತದೆ ಎಂದು ಹೇಳಿದೆ. ಟೆಸ್ಲಾ ಸಾಫ್ಟ್‌ವೇರ್ ಅಪ್‌ಡೇಟ್ ಆದ ಬಳಿಕ ಈ ಸಮಸ್ಯೆ ಸರಿಯಾಗಲಿದೆ ಎಂದು ಮಂಗಳವಾರ ದಾಖಲೆಗಳಲ್ಲಿ ಟೆಸ್ಲಾ ಹೇಳಿದೆ. ಮರುಪಡೆಯಲಾದ ವಾಹನಗಳಲ್ಲಿ ಸಾಫ್ಟ್‌ವೇರ್ ದೋಷವು ಕೆಲವು ಸಂದರ್ಭಗಳಲ್ಲಿ ವಾಹನ ಪ್ರಾರಂಭವಾದಾಗ ಆಗುವ ಸದ್ದಿಗೆ ತೊಂದರೆ ಉಂಟು ಮಾಡಬಹುದು ಎಂದು ಟೆಸ್ಲಾ ಹೇಳಿದೆ.
ಕೆಲವು ಬಾರಿ ಮಾತ್ರ ಈ ಸಮಸ್ಯೆ
ಸಮಸ್ಯೆಯು ಸಂದರ್ಭಗಳಿಗೆ ಸೀಮಿತವಾಗಿದೆ ಎಂದು ವಾಹನ ತಯಾರಕರು ಹೇಳಿದರು. ಕೆಲವು ಸಂದರ್ಭಗಳಲ್ಲಿ ಮಾತ್ರ ಈ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ. ವಾಹನವು 22 ಕಿಮೀ/ಗಂಟೆಯನ್ನು ಮೀರಿದಾಗ ಮತ್ತು ಡ್ರೈವರ್ ಸೀಟ್ ಬೆಲ್ಟ್ ಅನ್ನು ಹಾಕಿದ್ದಾರೆಯೇ ಎಂದು ಸರಿಯಾಗಿ ಪರಿಶೀಲನೆ ಮಾಡಿದರೂ ತಿಳಿಯದಿದ್ದರೆ ಇದು ಸಮಸ್ಯೆ ಆಗಬಹುದು ಎಂದು ಟೆಸ್ಲಾ ಸೇರಿಸಿದೆ. ಟೆಸ್ಲಾ “ರೋಲಿಂಗ್ ಸ್ಟಾಪ್” ಕಾರ್ಯವನ್ನು ನಿಷ್ಕ್ರಿಯಗೊಳಿಸುವ ಪ್ರಸಾರದ ಸಾಫ್ಟ್ವೇರ್ ಅನ್ನು ನವೀಕರಿಸಲಿದೆ ಎಂದು ಎನ್ಎಚ್‌ಟಿಎಸ್ಎ ಹೇಳಿದೆ. ಕಳೆದ ವಾರ ಮಸ್ಕ್, ಅಮೆರಿಕದಲ್ಲಿ ಎಫ್ಎಸ್ಡಿ ಬೀಟಾ ಹೊಂದಿರುವ ಟೆಸ್ಲಾ ವಾಹನಗಳ ಸಂಖ್ಯೆಯು ಸೆಪ್ಟೆಂಬರ್ ಅಂತ್ಯದ ವೇಳೆಗೆ ಸುಮಾರು 60,000 ಕ್ಕೆ ಏರಿದೆ ಎಂದು ಹೇಳಿದ್ದರು ಎಂಬುವುದನ್ನು ಇಲ್ಲಿ ಸ್ಮರಿಸಬಹುದು.
English summary
Tesla recalls over 8 lakh electric cars in U.S. over seat belt alert
Tesla recalls over 8 lakh electric cars in U.S. over seat belt alert.
Story first published: Friday, February 4, 2022, 15:57 [IST]
Read more…
[wpas_products keywords=”deal of the day”]