Karnataka news paper

ಕೋವಿಡ್‌ ಲಸಿಕೆ ಪಡೆಯದ ಉದ್ಯೋಗಿಗಳಿಗೆ ಬಿಗ್‌ ಶಾಕ್‌ ನೀಡಿದ ಗೂಗಲ್‌!


ಗೂಗಲ್‌

ಹೌದು, ಗೂಗಲ್‌ ತನ್ನ ಉದ್ಯೋಗಿಗಳು ಕೋವಿಡ್‌ ನಿಯಮ ಪಾಲನೆ ಮಾಡದಿದ್ದರೆ ವೇತನವನ್ನು ನೀಡುವುದಿಲ್ಲ ಎಂದು ಹೇಳಿದೆ. ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಆದೇಶ ಹೊರಡಿಸಿದೆ. ಕೋವಿಡ್‌ ವ್ಯಾಕ್ಸಿನೇಷನ್ ಡೋಸ್‌ಗಳನ್ನು ಪಡೆಯದಿದ್ದರೆ ಅದರ ಪರಿಣಾಮಗಳ ಬಗ್ಗೆ ತನ್ನ ಉದ್ಯೋಗಿಗಳಿಗೆ ಮೆಮೊವನ್ನು ನೀಡಿದೆ ಎಂದು ವರದಿಯಾಗಿದೆ. ಹಾಗಾದ್ರೆ ಗೂಗಲ್‌ ತನ್ನ ಉದ್ಯೋಗಿಗಳಿಗೆ ನೀಡಿದ ಸಂದೇಶ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್

ಜಾಗತಿಕವಾಗಿ ಕೊರೊನಾ ವೈರಸ್‌ನ ಆರ್ಭಟ ಇನ್ನು ಕುಡ ಜೊರಾಗಿದೆ. ಇಂತಹ ಸಮಯದಲ್ಲಿ ಕೋವಿಡ್‌ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಆದರೂ ಕೆಲವು ಕಡೆ ಕೋವಿಡ್‌ ನಿಯಮಗಳು ಪಾಲನೆ ಸರಿಯಾಗಿ ನಡೆಯುತ್ತಿಲ್ಲ. ಇದೇ ಕಾರಣಕ್ಕೆ ಗೂಗಲ್ ಕೂಡ ತನ್ನ ಉದ್ಯೋಗಿಗಳು ಕೋವಿಡ್‌ ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ ಎದುರಸಿಬೇಕಾಗುತ್ತದೆ ಎಂಬ ಸಂದೇಶವನ್ನು ನೀಡಿದೆ. ಅದರಲ್ಲೂ ವೇತನ ನೀಡದಿರುವ ಬಗ್ಗೆ ಕೂಡ ಮಾಹಿತಿ ನೀಡಿದೆ.

ಗೂಗಲ್‌ನಲ್ಲಿ

ಗೂಗಲ್‌ನಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೋವಿಡ್‌ ಲಸಿಕೆಯನ್ನು ಪಡೆಯುವುದು ಕಡ್ಡಾಯವಾಗಿದೆ. ತಾವು ಪಡೆದ ಲಸಿಕೆ ವಿವರಗಳನ್ನು ಸಲ್ಲಿಸಲು ಈಗಾಗಲೇ ಗಡುವು ನೀಡಿದೆ. ನೀಡಿದ ಗಡುವಿನಲ್ಲಿ ತಮ್ಮ ವ್ಯಾಕ್ಸಿನೇಷನ್ ಸ್ಟೇಟಸ್‌ ಬಗ್ಗೆ ಯಾವುದೇ ದಾಖಲೆಗಳನ್ನು ಸಲ್ಲಿಸಲು ವಿಫಲರಾದ ಉದ್ಯೋಗಿಗಳನ್ನು ಕಂಪನಿಯು ವೈಯಕ್ತಿಕವಾಗಿ ಸಂಪರ್ಕಿಸುತ್ತದೆ ಎಂದು ಮೆಮೊ ಹೇಳಿದೆ. ಜನವರಿ 18 ರೊಳಗೆ ಲಸಿಕೆ ನಿಯಮಗಳನ್ನು ಅನುಸರಿಸಲು ವಿಫಲರಾದ ಉದ್ಯೋಗಿಗಳನ್ನು 30 ದಿನಗಳವರೆಗೆ “ಪಾವತಿಸಿದ ಆಡಳಿತಾತ್ಮಕ ರಜೆ” ಯಲ್ಲಿ ಇರಿಸಲಾಗುವುದು ಎಂದು ಗೂಗಲ್ ಮೆಮೊದಲ್ಲಿ ಹೇಳಿದೆ. ನಂತರವೂ ಅವರು ಲಸಿಕೆಯನ್ನು ಪಡೆಯದಿದ್ದರೆ, ಅವರನ್ನು ಕಂಪನಿಯನ್ನು ತೊರೆಯಲು ಕೇಳಲಾಗುತ್ತದೆ ಎಂದು ಹೇಳಲಾಗಿದೆ.

ಗೂಗಲ್‌

ಗೂಗಲ್‌ ತನ್ನ ಮೆಮೊ ಬಗ್ಗೆ ಯಾವುದೇ ರೀತಿಯ ನಿರಾಕರಣೆ ಮಾಡಿಲ್ಲ. ಗೂಗಲ್‌ ಕಂಪನಿಯ ವಕ್ತಾರ ಲೋರಾ ಲೀ ಎರಿಕ್ಸನ್ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಾವು ಮೊದಲೇ ಹೇಳಿದಂತೆ, ಕೋವಿಡ್‌ ನಿಯಮಗಲನ್ನು ನಮ್ಮ ಉದ್ಯೋಗಿಗಳನ್ನು ಸುರಕ್ಷಿತವಾಗಿಸುವ ಕ್ರಮವಾಗಿದೆ. ಕೋವಿಡ್‌ ವ್ಯಾಕ್ಸಿನೇಷನ್ ಅವಶ್ಯಕತೆ ಎಲ್ಲರಿಗೂ ಇದೆ. ಲಸಿಕೆಯನ್ನು ಪಡೆಯಬಹುದಾದ ನಮ್ಮ ಉದ್ಯೋಗಿಗಳಿಗೆ ಸಹಾಯ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾವು ಬದ್ಧರಾಗಿದ್ದೇವೆ. ಆದರೆ ವ್ಯಾಕ್ಸಿನ್‌ ಪಡೆಯದ ಉದ್ಯೋಗಿಗಳ ವಿಚಾರದಲ್ಲಿ ನಾವು ಯಾವುದೇ ಉದಾರತೆ ತೋರುವುದಿಲ್ಲ ಎಂದು ಹೇಳಿದ್ದಾರೆ.

ಗೂಗಲ್

ಇನ್ನು ಗೂಗಲ್ ಇತ್ತೀಚೆಗೆ ತನ್ನ ರಿಟರ್ನ್-ಟು-ಆಫೀಸ್ ಯೋಜನೆಗಳನ್ನು ಉದ್ಯೋಗಿಗಳಿಗೆ ಮುಂದೂಡಿದೆ. ಗೂಗಲ್ ತನ್ನ ಉದ್ಯೋಗಿಗಳನ್ನು ಜನವರಿ 2022 ರ ವೇಳೆಗೆ ಕಚೇರಿಗೆ ಹಿಂತಿರುಗಿಸಬೇಕಾಗಿತ್ತು. ಆದಾಗ್ಯೂ, ಓಮಿಕ್ರಾನ್ ಪ್ರಕರಣಗಳ ಹಠಾತ್ ಏರಿಕೆಯು ಅನೇಕ ದೊಡ್ಡ ಟೆಕ್ ಕಂಪನಿಗಳು ತಮ್ಮ ಕಚೇರಿಯ ಯೋಜನೆಗಳಿಗೆ ಹಿಂತಿರುಗುವಂತೆ ಒತ್ತಾಯಿಸಿದೆ. ಜನವರಿ 10 ರೊಳಗೆ ಉದ್ಯೋಗಿಗಳು ಕಚೇರಿಗೆ ಮರಳಲು ಅಗತ್ಯವಿರುವ ಹೈಬ್ರಿಡ್ ಕೆಲಸದ ಮಾದರಿಯನ್ನು ಯಾವುದೇ US ಕಚೇರಿಗಳು ಅಳವಡಿಸಿಕೊಳ್ಳುವುದಿಲ್ಲ ಎಂದು ಇಮೇಲ್ ಬಹಿರಂಗಪಡಿಸಿದೆ.

ಗೂಗಲ್‌

ಇದಲ್ಲದೆ ಇತ್ತೀಚಿಗೆ ಗೂಗಲ್‌ ಕ್ರೋಮ್‌ ಬಳಸುವವರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಏಕೆಂದರೆ ಗೂಗಲ್‌ ಕ್ರೋಮ್‌ ಸಿಸ್ಟಂನಲ್ಲಿ ಅನಿಯಂತ್ರಿತ ಕೋಡ್ ಅನ್ನು ಕಾರ್ಯಗತಗೊಳಿಸಲು ಹ್ಯಾಕರ್‌ಗಳು ಬಳಸಿಕೊಳ್ಳಬಹುದಾದ ಹಲವಾರು ದೋಷಗಳು ಪತ್ತೆಯಾಗಿದೆ. ಇದರಿಂದ ಹ್ಯಾಕರ್‌ಗಳು ವೈಯಕ್ತಿಕ ವಿವರಗಳಿಗೆ ಪ್ರವೇಶವನ್ನು ಪಡೆಯಬಹುದು. ಅಲ್ಲದೆ ಉದ್ದೇಶಿತ ಪಿಸಿಯಲ್ಲಿ ಸ್ನೂಪ್ ಮಾಡಲು ಮಾಲ್‌ವೇರ್ ಅನ್ನು ಸೇರಿಸಬಹುದು ಎಂದು ಹೇಳಲಾಗಿದೆ. ಈ ದೋಷವನ್ನು ಸರಿಪಡಿಸಲು ಗೂಗಲ್‌ ಕೂಡ ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ಹೊಸ ಅಪ್ಡೇಟ್‌ ಅನ್ನು ಸಹ ಬಿಡುಗಡೆ ಮಾಡಿದೆ. ಇದರಿಂದ ಹೊಸ ಸಾಫ್ಟ್‌ವೇರ್ ಅಪ್ಡೇಟ್‌ ಅನ್ನು ಅಪ್ಡೇಟ್‌ ಮಾಡಿಕೊಳ್ಳಬೇಕು ಎಂದು ಸರ್ಕಾರ ಹೇಳಿದೆ. ಇನ್ನು ಗೂಗಲ್‌ ಕ್ರೋಮ್‌ ನ ಹೊಸ ಅಪ್ಡೇಟ್‌ 22 ಭದ್ರತಾ ಪರಿಹಾರಗಳನ್ನು ಒಳಗೊಂಡಿದೆ ಎಂದು ಟೆಕ್ ದೈತ್ಯ ಹೇಳಿದೆ.



Read more…