Karnataka news paper

ಬಿಜೆಪಿ ಸಂಸದನಿಗೆ ಮಾತನಾಡಲು ಅವಕಾಶ ನೀಡುತ್ತೇನೆ ಎಂದ ರಾಹುಲ್ ಗಾಂಧಿ: ಅನುಮತಿಸಲು ನೀವು ಯಾರು?- ಸ್ಪೀಕರ್ ಗರಮ್


Online Desk

ನವದೆಹಲಿ: ಲೋಕಸಭೆ ಸ್ಪೀಕರ್ ಓಮ್ ಬಿರ್ಲಾ, ಸರಿಯಾದ ಸಂಸದೀಯ ವರ್ತನೆಯನ್ನು ಪಾಲಿಸದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಕಲಾಪದಲ್ಲಿ ಪಾಠ ಮಾಡಿದ್ದಾರೆ. 

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ ಮಾತನಾಡುತ್ತಾ ತಮ್ಮ ಮಾತು ಮುಗಿದ ಬಳಿಕ ಮತ್ತೋರ್ವ ಸಂಸದನಿಗೆ ಮಾತನಾಡಲು ಅನುಮತಿ ನೀಡುವುದಾಗಿ ಹೇಳಿದರು. 

ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಓಮ್ ಬಿರ್ಲಾ, ಅನುಮತಿ ನೀಡಲು ನೀವು ಯಾರು? ನೀವು ಅನುಮತಿ ನೀಡುವಂತಿಲ್ಲ, ಸಂಸದರಿಗೆ ಮಾತನಾಡಲು ಅನುಮತಿ ನೀಡುವುದು ನನ್ನ ಹಕ್ಕು ಎಂದು ಗರಮ್ ಆಗಿದ್ದಾರೆ. 

ಇದನ್ನೂ ಓದಿ: ಎರಡು ಭಾರತ ಸೃಷ್ಟಿ, ಒಂದು ಶ್ರೀಮಂತರಿಗೆ ಮತ್ತೊಂದು ಬಡವರಿಗೆ; ದೇಶ ಇಬ್ಭಾಗವಾಗಿದೆ: ರಾಹುಲ್ ಗಾಂಧಿ

ಇಲ್ಲಿ ಬೇರೆಯವರಿಗೆ ಅನುಮತಿ ನೀಡಲು ನಿಮಗೆ ಯಾವುದೇ ಹಕ್ಕು ಇಲ್ಲ. ಸಭಾಧ್ಯಕ್ಷರು ಮಾತ್ರ ಆ ಕೆಲಸ ಮಾಡುತ್ತಾರೆ” ಎಂದು ಬಿರ್ಲಾ ರಾಹುಲ್ ಗಾಂಧಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 

ರಾಹುಲ್ ಗಾಂಧಿ ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸಿ ಏನನ್ನೋ ಹೇಳಲು ಮುಂದಾದರು ಆದರೆ ರಾಹುಲ್ ಗಾಂಧಿ ತಮ್ಮ ಮಾತು ಮುಗಿಸಿ ಅವರಿಗೆ ಮಾತನಾಡಲು ಅನುಮತಿಸುತ್ತೇನೆ ಎಂದು ಹೇಳಿದರು. 

ನಾನು ಪ್ರಜಾಸತ್ತಾತ್ಮಕ ವ್ಯಕ್ತಿ ಹಾಗೂ ನಾನು ಬೇರೆ ವ್ಯಕ್ತಿಗಳಿಗೆ ಮಾತನಾಡಲು ಅನುಮತಿ ನೀಡುತ್ತೇನೆ” ಎಂದಾಗ ಬಿರ್ಲಾ ರಾಹುಲ್ ಗಾಂಧಿಗೆ ಸಂಸದೀಯ ವರ್ತನೆಯನ್ನು ಪಾಲಿಸುವ ಪಾಠ ಮಾಡಿದ್ದಾರೆ. 



Read more

[wpas_products keywords=”deal of the day”]