ನದಿ ಜೋಡಣೆ ಯೋಜನೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಮಂಡಿಸಿದ ಬಜೆಟ್‌ನಲ್ಲಿ ದಕ್ಷಿಣದ ನದಿಗಳನ್ನ ಜೋಡಣೆ ಮಾಡುತ್ತೇವೆ. ಅದಕ್ಕೆ 46 ಸಾವಿರ ಕೋಟಿ ರೂ. ಮೀಸಲಿಡುವುದಾಗಿ ಹೇಳಿದ್ದಾರೆ. ಇದು ಕಾರ್ಯಸಾಧನೆಯ ಹೇಳಿಕೆ ಅಲ್ಲ. ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು ಆಗಿರುವುದರಿಂದ ಈ ರೀತಿ ಚರ್ಚೆ ಮಾಡಿದ್ದಾರೆ. ನಮ್ಮ ರಾಜ್ಯದವರ ಜೊತೆಗೆ ಚರ್ಚೆ ಮಾಡಿದಂತೆ ಕಾಣುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಗೋದಾವರಿ, ಕೃಷ್ಣಾ, ಪೆನ್ನಾರ್ ಹಾಗೂ ಕಾವೇರಿ ನದಿಗಳು ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ತಮಿಳುನಾಡಿನ ವ್ಯಾಪ್ತಿಯಲ್ಲಿ ಬರುತ್ತವೆ. ನ್ಯಾಷನಲ್ ವಾಟರ್ ಡೆವಲಪ್ಮೆಂಟ್ ಏಜೆನ್ಸಿಯಲ್ಲಿ ಸಭೆ ನಡೆದಿದೆ. ಅಲ್ಲಿ ನದಿ ಜೋಡಣೆ ಮಾಡ್ಬೇಕು ಅಂತ ತೀರ್ಮಾನ ಮಾಡಿದ್ದಾರೆ. ರಾಜಸ್ಥಾನ ಬಿಟ್ಟರೆ, ಕರ್ನಾಟಕದಲ್ಲಿ ಹೆಚ್ಚಿನ ಒಣ ಭೂಮಿ ಇದೆ. ಆದ್ದರಿಂದ ಕರ್ನಾಟಕಕ್ಕೆ ನ್ಯಾಯ ಸಿಗ್ಬೇಕು. ನದಿ ಜೋಡಣೆ ಮಾಡುವುದರಿಂದ ಹೆಚ್ಚಿನ ನೀರು ತಮಿಳುನಾಡಿಗೆ ಹೋಗುತ್ತದೆ ಎಂದರು. ಯಾವ ರಾಜ್ಯಕ್ಕೆ ಎಷ್ಟೆಷ್ಟು ನೀರು ಕೊಡ್ಬೇಕು ಅಂತ ಕರ್ನಾಟಕದ ಜೊತೆ ಚರ್ಚೆ ಮಾಡ್ಬೇಕು. ಆದರೆ, ಚರ್ಚೆ ಮಾಡದೇ ತೀರ್ಮಾನ ಮಾಡಿದ್ದಾರೆ. ಎಲ್ಲಾ ರಾಜ್ಯಗಳನ್ನು ಕರೆದು, ಸರ್ವಪಕ್ಷಗಳ ಸಭೆ ಕರೆದು ಚರ್ಚೆ ಮಾಡಬೇಕು. ಯಾವ ರಾಜ್ಯಗಳಿಗೆ ಎಷ್ಟೆಷ್ಟು ನೀರು ಸಿಗುತ್ತೆ ಅಂತ ಗೊತ್ತಾಗ್ಬೇಕು ಎಂದು ಕೇಂದ್ರ ಸರ್ಕಾರವನ್ನು ಸಿದ್ದರಾಮಯ್ಯ ಆಗ್ರಹಿಸಿದರು.
ಹಿಜಾಬ್ ಮೊದಲಿನಿಂದಲೂ ಇತ್ತು, ಕೇಸರಿ ಶಾಲು ಮೊದಲಿನಿಂದ ಹಾಕ್ತಿದ್ರಾ?; ಸಿದ್ದರಾಮಯ್ಯ
ನದಿ ಜೋಡಣೆ ಯೋಜನೆಗೆ ನಾನು ರಾಜಕೀಯ ಬಣ್ಣ ಹಚ್ಚಲು ಹೋಗಲ್ಲ. ಆದರೆ, ರಾಜ್ಯದಲ್ಲಿ ಬಿಜೆಪಿಯ 25 ಜನ ಸಂಸದರಿದ್ದಾರೆ. ಯಾವತ್ತಾದ್ರೂ ಒಂದು ದಿನ ನದಿ ಜೋಡಣೆ ಬಗ್ಗೆ ಮಾತನಾಡಿದ್ದಾರಾ? ರಾಜ್ಯ ಸರ್ಕಾರ ಹಾಗೂ ಎಂಪಿಗಳು ಮಾತನಾಡಿದ್ದಾರಾ? ಇವರು ರಾಜ್ಯದ ಹಿತ ಎಲ್ಲಿ ಕಾಪಾಡುತ್ತಾರೆ, ರಾಜ್ಯದ ರಕ್ಷಣೆ ಎಲ್ಲಿ ಮಾಡ್ತಾರೆ. ರಾಜ್ಯ ಸರ್ಕಾರ ಶೀಘ್ರ ಸರ್ವಪಕ್ಷ ಸಭೆ ಕರೆದು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕು. ನದಿ ಜೋಡಣೆ ಯೋಜನೆಯ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಜಮೀರ್ ಅಹಮದ್, ಯುಟಿ ಖಾದರ್ ಇದ್ದರು.
Read more
[wpas_products keywords=”deal of the day sale today offer all”]