Online Desk
ನವದೆಹಲಿ: ಪೋಷಕರ ಕಾರಣದಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಲೋಚನೆ ನಡುವೆ ಸಂಘರ್ಷಣೆ ಇದೆ ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿ ಅವರು ಇಟಾಲಿಯನ್ ತಾಯಿ ಮತ್ತು ಭಾರತೀಯ ತಂದೆಯ ನಡುವೆ ಬೆಳೆದ ಕಾರಣ, ಅವರು ಒಂದು ಭಾರತವನ್ನು ನೋಡುವ ಬದಲು ಎರಡು ಭಾರತಗಳನ್ನು ನೋಡುತ್ತಿದ್ದಾರೆ.
ರಾಹುಲ್ ಗಾಂಧಿ ಅವರು ಎರಡು ರೀತಿಯ ಸಂಸ್ಕೃತಿಗಳ ನಡುವೆ ಬೆಳೆದ ಕಾರಣ ಒಂದೇ ಭಾರತದಲ್ಲಿ ಎರಡು ಭಾರತವನ್ನು ನೋಡುವುದು ಸಹಜ. ತಾಯಿ ಸೋನಿಯಾ ಗಾಂಧಿ ಇಟಾಲಿಯನ್ ಹಾಗೂ ತಂದೆ ರಾಜೀವ್ ಗಾಂಧಿ ಭಾರತದವರಾಗಿದ್ದು, ಇಟಲಿ ಹಾಗೂ ಭಾರತದ ಸಂಸ್ಕೃತಿ ನಡುವೆ ಬೆಳೆದರು. ಹಾಗಾಗಿ ಅವರ ಚಿಂತನೆಯಲ್ಲಿ ಯಾವಾಗಲೂ ಸಂಘರ್ಷಗಳು ಇದ್ದೆ ಇರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಎರಡು ಭಾರತ ಸೃಷ್ಟಿ, ಒಂದು ಶ್ರೀಮಂತರಿಗೆ ಮತ್ತೊಂದು ಬಡವರಿಗೆ; ದೇಶ ಇಬ್ಭಾಗವಾಗಿದೆ: ರಾಹುಲ್ ಗಾಂಧಿ
ಬುಧವಾರ ರಾಹುಲ್ ಗಾಂಧಿ ಅವರು ಶ್ರೀಮಂತರಿಗೆ ಮತ್ತು ಬಡವರಿಗೆ ಎಂದು ಎರಡು ರೀತಿಯ ಭಾರತವನ್ನು ರಚಿಸಲಾಗಿದೆ ಮತ್ತು ಅವುಗಳ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದರು.
ಸರ್ಕಾರದ ನೀತಿಗಳ ಕುರಿತು ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡುವಾಗ ಭಾರತದ ಸಂಪತ್ತಿನ ಶೇಕಡಾ 40 ರಷ್ಟು ಆಯ್ದ ಕೆಲವರಿಗೆ ಹೋಗಿದೆ. ಆದರೆ ಶೇಕಡಾ 84 ರಷ್ಟು ಜನಸಂಖ್ಯೆಯು ಬಡತನದ ಅಂಚಿನಲ್ಲಿದ್ದಾರೆ. ಈ ಸರ್ಕಾರ ರಚಿಸಿದ ಉಭಯ ಭಾರತಗಳನ್ನು ಒಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಹುಲ್ ಗಾಂಧಿ ಕರೆ ನೀಡಿದರು.
Read more
[wpas_products keywords=”deal of the day”]