ಕಾರ್ಯಕ್ರಮದ ಕೇಂದ್ರ ಬಿಂದುವಾಗಿ ಆಗಮಿಸಿದ್ದ ಪ್ರಸಿದ್ಧ ಬೆಂಗಳೂರಿನ ಖ್ಯಾತ ಮನೋಶಾಸ್ತ್ರಜ್ಞರಾದ ಡಾ.ಕೆ ಸಿ ಸದಾನಂದ್ ಅವರು ಮನಸ್ಥಿತಿ ಹಾಗು ಮನೋಧರ್ಮದ ಪದರುಗಳನ್ನು ಸವಿವರವಾಗಿ ಹೊರನಾಡ ಕನ್ನಡಿಗರಿಗೆ ತಿಳಿಸಿದರು. ಪಿಎಚ್‌ಡಿ ಪದವೀಧರರಾದ ಡಾ.ಕೆ ಸಿ ಸದಾನಂದ್, ಎರಡು ದಶಕ ಕಾಲ ತಮ್ಮ ಕಾರ್ಯಾವಧಿಯಲ್ಲಿ 5000ಕ್ಕೂ ಹೆಚ್ಚು ಮನೋರೋಗಿಗಳನ್ನು ಗುಣಮುಖರಾಗಿಸಿದ ಖ್ಯಾತಿಯನ್ನು ಗಳಿಸಿದ್ದಾರೆ. ಬೆಂಗಳೂರಿನಲ್ಲಿ ‘Deaddiction and counselling’ ಎಂಬ ಸಂಸ್ಥೆಯ ಮುಖಾಂತರ ಅನೇಕ ವ್ಯಸನಿಗಳ ದುಶ್ಚಟಗಳನ್ನು ಬಿಡಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ಜಯನಗರದಲ್ಲಿ ಕೋಲ್ಡ್ ಸೆಂಟರ್ ನಡೆಸುತ್ತಿರುವ ಇವರು ಮಾತು ಮಷೀನ್ ಮೂಲಕ ದೇಹ ಹಾಗು ಮನಸ್ಸಿನ ನೋವು ನಿವಾರಣೆಯ ಹೊಸ ಯತ್ನದಲ್ಲಿ ಅತಿಯಾದ ಸಫಲತೆಯನ್ನು ಕಂಡಿರುತ್ತಾರೆ.
ಸಿಂಗನ್ನಡಿಗರನ್ನು ಕುರಿತು ಮಾತು ಆರಂಭಿಸಿದ ಡಾ.ಕೆ ಸಿ ಸದಾನಂದ್, ಮನೋರೋಗ ಹಾಗು ಮನೋಸ್ಥೈರ್ಯದ ಕುರಿತು ಅನೇಕ ಸೂಕ್ಷ್ಮ ವಿಷಯಗಳನ್ನು ಚರ್ಚಿಸಿದರು. ಒತ್ತಡ ಖಿನ್ನತೆಯನ್ನು ಹೋಗಲಾಡಿಸಿ ಸುಖಮಯ ಜೀವನ ನಡೆಸುವಲ್ಲಿ ಆಹಾರ ಪದ್ಧತಿ ಹಾಗು ಪರಿವಾರದ ಪ್ರೀತಿ ಮತ್ತು ಆಪ್ತಸಲಹೆಯ ಅವಶ್ಯಕತೆಯ ಬಗ್ಗೆ ಎಲ್ಲರಿಗು ತಿಳಿ ಹೇಳಿದರು. ಕೋವಿಡ್ ಕಾರಣವಾಗಿ ಹೆಚ್ಚಿರುವ ತಳಮಳವನ್ನು ನಿಭಾಯಿಸುವ ಸುಲಭ ಸೂತ್ರಗಳನ್ನು ಸೂಚಿಸಿದ್ದಾರೆ. ಪ್ರತಿ ಮನೆಯ ಕ್ರಿಮಿಯಾಗಿರುವ ಮೊಬೈಲ್ ಬಳಕೆಯಿಂದಾಗುವ ಋಣಾತ್ಮಕ ಪರಿಣಾಮಗಳನ್ನು ಕುರಿತು ತಿಳಿ ಹೇಳಿದರು. ಸಾಮಾಜಿಕ ಮಾಧ್ಯಮವು ಜನರ ಮನಸ್ಸಿನ ಮೇಲೆ ಸೃಷ್ಟಿಸುತ್ತಿರುವ ಪ್ರತಿಕೂಲ ಪರಿಣಾಮ ಮತ್ತು ಅಂತಹ ಚಟವನ್ನು ಹೇಗೆ ಜಯಿಸುವುದು ಎಂಬುದರ ಬಗ್ಗೆ ವಿವರಿಸಿದರು.

ವೆಬಿನಾರ್ ಸರಣಿಯಲ್ಲಿ ಪಾಲ್ಗೊಂಡ ಸಿಂಗನ್ನಡಿಗರು
ಜನರ ಜೀವನದಲ್ಲಿ ಹಣದ ಪ್ರಾಮುಖ್ಯತೆಯು ಜನರು ತಮ್ಮ ಮೇಲೆ ಒತ್ತಡವನ್ನು ಹೇರಿಸಿಕೊಳ್ಳಲು ಪ್ರೇರೇಪಿಸುತ್ತದೆ, ಅಂದರೆ ಹಣವನ್ನು ಹೇಗೆ ಗಳಿಸುವುದು ಮತ್ತು ಹಣವನ್ನು ಹೊಂದಿರುವವರು ಅದನ್ನು ಸುರಕ್ಷಿತವಾಗಿರಿಸುವುದು ಹೇಗೆ ಎಂದು ಯೋಚಿಸುತ್ತಾರೆ. ಎರಡೂ ಸಂದರ್ಭಗಳಲ್ಲಿ ಜನರು ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಕ್ರಮೇಣ ಮಾನಸಿಕ ಅಸ್ವಸ್ಥತೆಯನ್ನು ಬೆಳೆಸಿಕೊಳ್ಳುತ್ತಾರೆ. ಅಂತೆಯೇ ಅನೇಕ ಉದಾಹರಣೆಗಳನ್ನು ನೀಡುತ್ತ ನಾವು ಆರಿಸುವ ಜೀವನ ಶೈಲಿಯು ಹೇಗೆ ನಮ್ಮ ಜೀವನದಮೇಲೆ ಒತ್ತಡವನ್ನು ಹೇರುವುದು ಮತ್ತು ಸರಳ ಜೀವನದ ಆಯ್ಕೆಯು ಹೇಗೆ ಸಂತೋಷವನ್ನು ತರುತ್ತದೆ ಎಂದು ಸಿಂಗನ್ನಡಿಗರಿಗೆ ತಿಳಿಸಿ ಕೊಟ್ಟರು.
ಕನ್ನಡ ಸಂಘದ ಸದಸ್ಯೆ ಶ್ರೀಮತಿ ಶಮಾ ಅಲಿ ಅವರು ಸಂವಾದದ ಸಾರಾಂಶವನ್ನು ತಿಳಿಸಿದರು. ಕನ್ನಡ ಸಂಘ (ಸಿಂಗಪುರ) ಕಾರ್ಯಕಾರಿ ಸಮಿತಿ ಸದಸ್ಯೆ ರಮ್ಯಾ ಅವರು ಸಮಾರೋಪ ನುಡಿಗಳನ್ನಾಡುವುದರ ಜೊತೆಗೆ ಪ್ರಶ್ನೋತ್ತರ ವಿಭಾಗವನ್ನು ನಡೆಸಿದರು. ಶಮಾ ಅಲಿ ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದ ಸಿಂಗನ್ನಡಿರನ್ನು ಅತಿಥಿ ಉಪನ್ಯಾಸಕ ಡಾ. ಸದಾನಂದ ಕೆ.ಸಿ ಅವರಿಗೆ ಪರಿಚಯಿಸಿ ಸ್ವಾಗತ ಭಾಷಣ ಮಾಡಿದರು.
ವರದಿ: ಶಮಾ ಅಲಿ
ಕನ್ನಡ ಸಂಘ (ಸಿಂಗಪುರ)
Read more
[wpas_products keywords=”deal of the day sale today offer all”]