Karnataka news paper

ಸಮವಸ್ತ್ರ ಗೊಂದಲ ರಾಜ್ಯದಾದ್ಯಂತ ವಿಸ್ತರಿಸಿದರೆ ದೊಡ್ಡ ಸಮಸ್ಯೆ: ಸತೀಶ ಕಳವಳ


ಬೆಳಗಾವಿ: ‘ಸಮವಸ್ತ್ರ ವಿಷಯದಲ್ಲಿ ಗೊಂದಲಗಳು ಉಂಟಾಗಬಾರದು. ಉಡುಪಿಯ ಕಾಲೇಜುಗಳಲ್ಲಿ ಆಗಿರುವುದು ರಾಜ್ಯದಾದ್ಯಂತ ವಿಸ್ತರಿಸಿದರೆ ಬಹಳಷ್ಟು ದೊಡ್ಡ ಸಮಸ್ಯೆಗಳಾಗುತ್ತವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಶಾಲೆ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಮವಸ್ತ್ರದ ವಿಚಾರದಲ್ಲಿ ಅಹಿತಕರ ಬೆಳವಣಿಗೆಗಳು ನಡೆಯಬಾರದು. ಅವರವರ ಜಾತಿ, ಧರ್ಮ ಜೊತೆಯಲ್ಲೇ ಇರುತ್ತದೆ. ಅದನ್ನೇನೂ ಮಾಡಲಾಗದು. ಆದರೆ, ಶಿಕ್ಷಣ ಸಂಸ್ಥೆಗಳಲ್ಲಿ ಗೊಂದಲಗಳಾಗದಂತೆ ಸರ್ಕಾರ ಇನ್ನಾದರೂ ತಡೆಯಬೇಕು’ ಎಂದು ಕೋರಿದರು.

‘ಧರ್ಮಗಳನ್ನು ಪೂರ್ಣ ತಿಳಿದುಕೊಳ್ಳಬೇಕು. ಕೇಸರಿ ಶಾಲು ಹಾಕಿರೆಂದು ಧರ್ಮದಲ್ಲಿ ಹೇಳಿಲ್ಲ.  ಧರ್ಮಗಳು ಒಳ್ಳೆಯದನ್ನೇ ಹೇಳಿವೆ. ಆದರೆ, ಕೆಲವು ಸಂಘಟನೆಗಳಿಂದ ದಾರಿ ತಪ್ಪಿಸುವ ಪ್ರಯತ್ನ ಆಗುತ್ತದೆ. ಕಲಿಯುವ ಮತ್ತು ಜ್ಞಾನ ಪಡೆಯುವ ವಯಸ್ಸಿನಲ್ಲಿ ಧರ್ಮ, ಜಾತಿ ಬಂದರೆ ಸಮಸ್ಯೆಯಾಗುತ್ತದೆ’ ಎಂದರು.

‘ಉಡುಪಿಯಲ್ಲಾದಂತಹ ಘಟನೆಗಳು ಮುಂದುವರಿಯದಂತೆ ನೋಡಿಕೊಳ್ಳಬೇಕು ಎನ್ನುವುದು ನಮ್ಮ ಕಳವಳಿ’ ಎಂದು ಹೇಳಿದರು.

‘ಯಾವುದೇ ಸಂಘಟನೆಗಳು ಶಾಲಾ ಹಂತದಲ್ಲಿ ಬರಬಾರದು. ಕಾಲೇಜು ಹಂತದಲ್ಲಿ ಬೇಕಿದ್ದರೆ ಬರಲಿ’ ಎಂದು ಪ್ರತಿಕ್ರಿಯಿಸಿದರು.

‘ಇಂತಹ ಸಮಸ್ಯೆಗಳನ್ನು ಆಡಳಿತ ಮಂಡಳಿಯವರು ಸರಿಪಡಿಸಬೇಕಾಗುತ್ತದೆ. ವಿಸ್ತಾರವಾದ ನಮ್ಮ ದೇಶದಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಲು ಸಾಧ್ಯವಾಗುವುದಿಲ್ಲ’ ಎಂದರು.

‘ಗೋವಾ ವಿಧಾನಸಭೆ ಚುನಾವಣೆಯಲ್ಲಿ, ಅಲ್ಲಿನ ಕನ್ನಡ ಭಾಷಿಗರು ಒಂದೇ ಪಕ್ಷಕ್ಕೆ ಮತ ಹಾಕುತ್ತಾರೆ ಎಂದು ಹೇಳಲಾಗುವುದಿಲ್ಲ. ಕೇಂದ್ರ ಸರ್ಕಾರದ ನೀತಿಗಳಿಂದ ನೊಂದಿರುವ ಬಡವರ ಮತಗಳು ಅಲ್ಲಿ ನಿರ್ಣಾಯಕವಾಗಲಿವೆ’ ಎಂದು ಹೇಳಿದರು.

‘ಸಿಡಿ ಪ್ರಕರಣದಲ್ಲಿ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರ ವಿರುದ್ಧ ಎಸ್‌ಐಟಿಯವರು ‘ಎ’ ವರದಿ ಹಾಕಿದರೂ, ‘ಬಿ’ ವರದಿ ನೀಡಿದರೂ ಆ ವಿಷಯ ನಮಗೆ ಸಂಬಂಧಿಸಿದ್ದಲ್ಲ’ ಎಂದು ಪ್ರತಿಕ್ರಿಯಿಸಿದರು.

‘ವಿಧಾನಪರಿಷತ್ ಸದಸ್ಯ ಎ.ಬಿ. ಇಬ್ರಾಹಿಂ ಪಕ್ಷದಲ್ಲೇ ಇರುತ್ತಾರೆ’ ಎಂದು ಸತೀಶ ವಿಶ್ವಾಸ ವ್ಯಕ್ತಪಡಿಸಿದರು.



Read more from source

[wpas_products keywords=”deal of the day sale today kitchen”]