Online Desk
ಬೀಜಿಂಗ್: ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ 50ಕ್ಕೂ ಹೆಚ್ಚು ವಿದೇಶಿ ಅಥ್ಲೀಟ್ ಗಳಿಗೆ ಕೋವಿಡ್ ದೃಢಪಟ್ಟಿದೆ.
12 ದೇಶಗಳ 53 ಅಥ್ಲೀಟ್ ಗಳಿಗೆ ಕೋವಿಡ್ ಕಾಣಿಸಿಕೊಂಡಿರುವ ಬಗ್ಗೆ ರಷ್ಯಾದ ಒಲಿಂಪಿಕ್ ಸಮಿತಿಯು ದೃಢಪಡಿಸಿದೆ. ಸ್ಲೋವೇನಿಯಾದ ಸ್ನೋಬೋರ್ಡರ್ ಮತ್ತು ಸ್ವೀಡನ್‌ನ ಐಸ್ ಹಾಕಿ ತಂಡದ ಸದಸ್ಯರು ಸೇರಿದಂತೆ ಒಂಬತ್ತು ಮಂದಿ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.
ಕೋವಿಡ್ ಗೆ ಒಳಗಾದ ಆಸ್ಟ್ರಿಯನ್ ಸ್ಕೀ ಜಂಪರ್ ಮಾರಿಟಾ ಕ್ರಾಮರ್ ಅವರನ್ನು ಒಲಿಂಪಿಕ್ ಪ್ರವೇಶ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಜಪಾನಿನ ಸ್ಕೀಯರ್ ಸೇರಿದಂತೆ 20 ಕ್ಕೂ ಹೆಚ್ಚು ಕ್ರೀಡಾಪಟುಗಳು ಚೀನಾದಲ್ಲಿ ಅಥವಾ ಮನೆಯಲ್ಲಿ ಐಸೋಲೇಟ್ ಆಗಿದ್ದಾರೆ.
ಇದನ್ನೂ ಓದಿ: ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್: ಉದ್ಘಾಟನಾ ಸಮಾರಂಭದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಗಿ
2022 ರಲ್ಲಿ ಬೀಜಿಂಗ್ ವಿಂಟರ್ ಒಲಿಂಪಿಕ್ಸ್ ಗಾಗಿ ದೇಶವನ್ನು ಕೋವಿಡ್ ಮುಕ್ತಗೊಳಿಸಲು ಹೆಣಗಾಡುತ್ತಿದ್ದಾರೆ. ಕಟ್ಟುನಿಟ್ಟಾದ ಪ್ರೋಟೋಕಾಲ್‌ಗಳ ಹೊರತಾಗಿಯೂ, ಚೀನಾದ ಕೆಲವು ಪ್ರದೇಶಗಳಲ್ಲಿ ಪ್ರತಿದಿನ ಹೊಸ ಪ್ರಕರಣಗಳು ವರದಿಯಾಗುತ್ತಿವೆ.
ಬೀಜಿಂಗ್ ಗೆ ತೆರಳಿರುವ ಭಾರತ ತಂಡದ ಮ್ಯಾನೇಜರ್ ಮೊಹಮ್ಮದ್ ಅಬ್ಬಾಸ್ ವಾನಿಗೆ ಕೊರೋನಾ ಬಂದಿದೆ. ಇನ್ನು ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸುಲಿರುವ ಭಾರತದ ಏಕೈಕ ಅಥ್ಲೀಟ್ ಆಗಿದ್ದಾರೆ.
Read more…
[wpas_products keywords=”deal of the day sports items”]