Karnataka news paper

ಆರ್‌ಸಿಬಿಗೆ ಈ ಇಬ್ಬರು ಬದ್ದಿದ್ದರಿಂದ ನನ್ನ ಆಟ ಬದಲಾಯಿತೆಂದ ಕೊಹ್ಲಿ!


ಹೊಸದಿಲ್ಲಿ: ಕಳೆದ 11 ವರ್ಷಗಳ ಹಿಂದೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಬಿ ಡಿ ವಿಲಿಯರ್ಸ್ ಹಾಗೂ ಕ್ರಿಸ್‌ ಗೇಲ್‌ ಆಗಮಿಸಿದ ಬಳಿಕ ನನ್ನ ಆಟದಲ್ಲಿ ಸಾಕಷ್ಟು ಬದಲಾವಣೆಯಾಯಿತು ಎಂದು ಆರ್‌ಸಿಬಿ ಮಾಜಿ ನಾಯಕ ವಿರಾಟ್‌ ಕೊಹ್ಲಿ ಇತ್ತೀಚೆಗೆ ಹೇಳಿಕೊಂಡಿದ್ದಾರೆ.

ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಂದೇ ಒಂದು ತಂಡದ ಪರ ಆಡಿದ ಆಟಗಾರರ ಪೈಕಿ ವಿರಾಟ್‌ ಕೊಹ್ಲಿ ಒಬ್ಬರಾಗಿದ್ದಾರೆ. 2008ರಲ್ಲಿ ಆರಂಭವಾಗಿದ್ದ ಐಪಿಎಲ್ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದರು. ತದನಂತರ ಅವರು 2013ರಲ್ಲಿ ಆರ್‌ಸಿಬಿ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರು.

ಐಪಿಎಲ್‌ ಟೂರ್ನಿಯಲ್ಲಿಯೇ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ವಿರಾಟ್‌ ಕೊಹ್ಲಿ ಜೊತೆಗೆ ಆರ್‌ಸಿಬಿ ಮಾಜಿ ಆಟಗಾರರಾದ ಎಬಿ ಡಿವಿಲಿಯರ್ಸ್ ಹಾಗೂ ಯೂನಿವರ್ಸ್ ಬಾಸ್‌ ಖ್ಯಾತಿಯ ಕ್ರಿಸ್‌ ಗೇಲ್‌ ಐಪಿಎಲ್‌ ಟೂರ್ನಿಯಲ್ಲಿ ಹಲವು ವರ್ಷಗಳ ಕಾಲ ಪ್ರಾಬಲ್ಯ ಸಾಧಿಸಿದ್ದರು. ಆದರೆ 2019ರಲ್ಲಿ ಕ್ರಿಸ್‌ ಗೇಲ್‌ ಆರ್‌ಸಿಬಿ ತೊರೆದಿದ್ದರು ಹಾಗೂ ಎಬಿಡಿ 2021ರ ಐಪಿಎಲ್‌ ಬಳಿಕ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

ಮೆಗಾ ಹರಾಜಿನಿಂದ ಹೊರಗುಳಿಯುವುದಕ್ಕೆ ಕಾರಣ ತಿಳಿಸಿದ ಜೇಮಿಸನ್‌!

ಯೂಟ್ಯೂಬ್‌ ಸರಣಿಯ ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯರ್ಸ್‌ ಹಾಗೂ ಕ್ರಿಸ್‌ ಗೇಲ್‌ ಆರ್‌ಸಿಬಿಗೆ ಆಗಮಿಸಿದ ಕ್ಷಣದಲ್ಲಿ ನನ್ನ ಆಟದಲ್ಲಿ ಮಹತ್ವದ ಬದಲಾವಣೆಯಾಯಿತು ಎಂದು ಹೇಳಿದ್ದಾರೆ.

“2011ರ ಐಪಿಎಲ್ ಆವೃತ್ತಿಯಲ್ಲಿ ಎಬಿ ಡಿವಿಲಿಯರ್ಸ್ ಹಾಗೂ 2011 ಆವೃತ್ತಿಯ ಮಧ್ಯದಲ್ಲಿ ಕ್ರಿಸ್‌ ಗೇಲ್‌ ಆರ್‌ಸಿಬಿಗೆ ಸೇರ್ಪಡೆಯಾಗಿದ್ದರು. ಈ ಇಬ್ಬರೂ ಆಗಮಿಸಿದ ಕ್ಷಣದಿಂದ ನನ್ನ ಆಟ ಸಂಪೂರ್ಣವಾಗಿ ಬದಲಾಯಿತು. ಈ ಇಬ್ಬರಿಗೂ ಬೌಲ್‌ ಮಾಡುವಾಗ ಬೌಲರ್‌ಗಳು ಏನು ಯೋಚಿಸುತ್ತಾರೆಂದು ನಿಮಗೆ ಗೊತ್ತಿರುತ್ತದೆ,” ಎಂದರು.

ಮೆಗಾ ಆಕ್ಷನ್‌: ಬಹುಬೇಡಿಕೆಯ ಟಾಪ್‌ 5 ವಿದೇಶಿ ಬೌಲರ್ಸ್‌ ಹೆಸರಿಸಿದ ಚೋಪ್ರಾ!

2022ರ ಐಪಿಎಲ್‌ ಆಟಗಾರರ ಮೆಗಾ ಹರಾಜಿನ ನಿಮಿತ್ತ ವಿರಾಟ್‌ ಕೊಹ್ಲಿ ಸೇರಿದಂತೆ ಒಟ್ಟು ಮೂವರು ಆಟಗಾರರನ್ನು(ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಮೊಹಮ್ಮದ್‌ ಸಿರಾಜ್‌) ಬೆಂಗಳೂರು ಫ್ರಾಂಚೈಸಿ ಉಳಿಸಿಕೊಂಡಿದೆ. 2021ರ ಆವೃತ್ತಿಯ ಐಪಿಎಲ್‌ ಟೂರ್ನಿಯ ಯುಎಇ ಚರಣ ಆರಂಭಕ್ಕೂ ಮುನ್ನ ವಿರಾಟ್‌ ಕೊಹ್ಲಿ ಆರ್‌ಸಿಬಿ ನಾಯಕತ್ವದಿಂದ ಕೆಳಗೆ ಇಳಿಯುವುದಾಗಿ ಘೋಷಿಸಿದ್ದರು.

” ಪ್ರತಿದಿನ ನೀವು ಸಾಕಷ್ಟು ಕಠಿಣ ಪರಿಶ್ರಮ ಪಡಬೇಕಾಗುತ್ತದೆ ಹಾಗೂ ನಿಮ್ಮ ಕೆಲಸದ ಮೇಲೆ ನಿಮಗೆ ಸಂಪೂರ್ಣ ನಂಬಿಕೆ ಹಾಗೂ ವಿಶ್ವಾಸವಿರಬೇಕು.ಇದನ್ನು ನೀವು ಪಾಲಿಸದೆ ಹೋದಲ್ಲಿ, ನಿಮ್ಮ ಜೀವನದಲ್ಲಿ ಹೆಸರು, ಹಣ ಅಥವಾ ಯಶಸ್ಸು ಗಳಿಸಲು ಸಾಧ್ಯವಾಗುವುದಿಲ್ಲ,” ಎಂದು ವಿರಾಟ್‌ ಕೊಹ್ಲಿ ಹೇಳಿದರು.

ವಾರ್ನರ್‌ಗೆ 4 ಕೋಟಿಗಿಂತ ಹೆಚ್ಚಿನ ಬೆಲೆ ಸಿಗಲಾರದು: ಬ್ರಾಡ್‌ ಹಾಗ್!

ಹದಿನೈದನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯು ಬೆಂಗಳೂರಿನಲ್ಲಿ ಫೆ. 12 ಮತ್ತು 13 ರಂದು ನಡೆಯಲಿದೆ. ನೂತನ ನಾಯಕನ ಹುಡುಕಾಟದಲ್ಲಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಹರಾಜಿನಲ್ಲಿ ಸೂಕ್ತ ಅಭ್ಯರ್ಥಿಯನ್ನು ಖರೀದಿಸಲಿದೆ.



Read more

[wpas_products keywords=”deal of the day sale today offer all”]