Karnataka news paper

ಮೊದಲ ಬಾರಿಗೆ ಮಗಳ ಜೊತೆ ವಿಡಿಯೋ ಆಲ್ಬಂ ಸಾಂಗ್ ಮಾಡಿದ ನಟ ಸತೀಶ್ ನೀನಾಸಂ


ಹರೀಶ್‌ ಬಸವರಾಜ್‌
ಕೋವಿಡ್‌ನ ಎರಡನೇ ಅಲೆಯ ಸಮಯದಲ್ಲಿ ಎಲ್ಲಿ ನೋಡಿದರೂ ಆಂಬ್ಯುಲೆನ್ಸ್‌ ಸೈರನ್‌ ಸದ್ದು. ಹಲವರ ನಿಧನದ ಸುದ್ದಿ, ಶವಸಂಸ್ಕಾರಕ್ಕೂ ಸ್ಥಳವಿಲ್ಲಎಂಬ ಮಾತುಗಳೇ ಕೇಳಿಬರುತ್ತಿದ್ದವು. ಇದೇ ವಿಚಾರವನ್ನು ಇಟ್ಟುಕೊಂಡು ನಟ ನೀನಾಸಂ ಸತೀಶ್‌ ಹಾಡೊಂದನ್ನು ಬರೆದು, ವಿಡಿಯೋ ಆಲ್ಬಂ ಮಾಡಿ ಅದಕ್ಕೆ ‘ಅಶರೀರವಾಣಿ’ ಎಂದು ಹೆಸರಿಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಸತೀಶ್‌ ಹಾಡನ್ನು ಬರೆದಿದ್ದು, ಅವರೇ ಸ್ವತಃ ಸಂಗೀತವನ್ನೂ ಸಂಯೋಜನೆ ಮಾಡಿದ್ದಾರೆ. ಸತೀಶ್‌ ಅವರ ಪುತ್ರಿ ಮನಸ್ವಿತಾ ಈ ಹಾಡಿನಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಬಂದಿರುವುದು ಈ ಹಾಡಿನ ವಿಶೇಷತೆ.

ಕೆಲ ದಿನಗಳ ಹಿಂದೆಯಷ್ಟೇ ಸತೀಶ್‌ ತಮ್ಮ ಪುತ್ರಿಯ ಫೋಟೊವನ್ನು ರಿವೀಲ್‌ ಮಾಡಿದ್ದರು. ಈಗ ವಿಡಿಯೋ ಆಲ್ಬಂನಲ್ಲಿ ಮನಸ್ವಿತಾರನ್ನು ನಟಿಸುವಂತೆ ಮಾಡಿ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ‘ಬೆಂಗಳೂರಿನ ಆರ್‌ಆರ್‌ ನಗರದಲ್ಲಿರುವ ನನ್ನ ಕಚೇರಿಗೆ ಬಿಜಿಎಸ್‌ ಆಸ್ಪತ್ರೆ, ಕೆಲ ನರ್ಸಿಂಗ್‌ ಹೋಂಗಳು ಹತ್ತಿರದಲ್ಲೇ ಇವೆ. ಕೋವಿಡ್‌ನ ಎರಡನೇ ಅಲೆಯ ಸಮಯದಲ್ಲಿ ದಿನವೊಂದಕ್ಕೆ ಹತ್ತಾರು ಬಾರಿ ಆಂಬ್ಯುಲೆನ್ಸ್‌ ಸೈರನ್‌ ಶಬ್ದವನ್ನು ಕೇಳುತ್ತಿದ್ದೆ. ಅದರಲ್ಲಿ ಬದುಕಿದವರೆಷ್ಟೋ, ಮೃತಪಟ್ಟವರೆಷ್ಟೊ ಗೊತ್ತಿಲ್ಲ. ಬಹಳ ಆತ್ಮೀಯರು ಸಹ ಕೋವಿಡ್‌ನ ಎರಡನೇ ಅಲೆಯಲ್ಲಿ ಮೃತಪಟ್ಟರು. ಆ ಸಮಯದಲ್ಲಿ ನನಗೆ ‘ಈ ಅಶರೀರವಾಣಿ ಎಲ್ಲಿಂದ ಎಲ್ಲಿಗೆ ಹಾರಿತು’ ಎಂಬ ಹಾಡು ಹುಟ್ಟಿಕೊಂಡಿತು. ಪ್ರಪಂಚದ ಈ ಪರಿಸ್ಥಿತಿಗೆ ಕಾರಣರಾರು ಎಂಬ ಪ್ರಶ್ನೆ, ಮನುಷ್ಯನ ಸ್ವಾರ್ಥಕ್ಕೆ ಭೂಮಿ ಎಂಬುದು ಸ್ಮಶಾನದ ರೀತಿಯಾಯಿತಲ್ಲಾ ಎಂಬ ಖೇದ-ಇವನ್ನೆಲ್ಲಾಇಟ್ಟುಕೊಂಡು ಈ ಹಾಡು ಬರೆದು, ಸಂಗೀತ ಸಂಯೋಜನೆ ಮಾಡಿ ನಿರ್ದೇಶನ ಮಾಡಿದೆ. ನನ್ನ ಸ್ನೇಹಿತರಾದ ರಘು ಕಾರ್ನಾಡ್‌ ಮತ್ತಿತರರು ಸಹಾಯ ಮಾಡಿದರು’ ಎಂದು ಹೇಳುತ್ತಾರೆ ಸತೀಶ್‌.

ಇದು ನನಗೆ ವಿಭಿನ್ನ ಅನುಭವ
‘ನನ್ನ ಮಗಳನ್ನು ನಿರ್ದೇಶನ ಮಾಡಿದ್ದು ಬೇರೆ ರೀತಿಯ ಅನುಭವ ನೀಡಿತು. ಮನಸ್ವಿತಾಗೆ ನಟನೆ, ಡಾನ್ಸ್‌ ಸೇರಿದಂತೆ ಹಲವು ವಿಷಯಗಳಲ್ಲಿ ತುಂಬಾ ಆಸಕ್ತಿ. ಕ್ಯಾಮೆರಾಗೆ ತಕ್ಕಂತೆ ನಟನೆ ಮಾಡಿದಳು. ಮತ್ತೆ ಈ ಶಾಟ್‌ ಬೇಕು ಅಂದ್ರೂ ಮಾಡಿದಳು. ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಕರೆದುಕೊಂಡು ಹೋದಾಗ ನನಗೆ ಆದ ಖುಷಿ ಅಷ್ಟಿಷ್ಟಲ್ಲ. ಬಹಳ ಚೆನ್ನಾಗಿ ನಟಿಸಿದ್ದಾಳೆ’ ಎಂದು ಪುತ್ರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಸತೀಶ್‌. ಈ ಹಾಡು ಸದ್ಯದಲ್ಲೇ ಆನ್‌ಲೈನ್‌ನಲ್ಲಿ ಬಿಡುಗಡೆಯಾಗಲಿದ್ದು, ಬೆಂಗಳೂರಿನಲ್ಲಿಯೇ ಚಿತ್ರೀಕರಣ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಮಗಳು ಮನಸ್ವಿತಾಳ ಫೋಟೋ ಹಂಚಿಕೊಂಡ ನಟ ಸತೀಶ್ ನೀನಾಸಂ

ಕೋಟ್‌:
ನಾನು ಬರೆದು, ಮೊದಲ ಬಾರಿಗೆ ಸಂಗೀತ ಸಂಯೋಜನೆ ಮಾಡಿರುವ ಹಾಡಿದು. ನನ್ನ ಮಗಳನ್ನು ಈ ಹಾಡಿನ ಮೂಲಕ ಕಲಾ ಪ್ರಪಂಚಕ್ಕೆ ಪರಿಚಯಿಸುತ್ತಿದ್ದೇನೆ.
-ಸತೀಶ್‌ ‘ನೀನಾಸಂ’, ನಟ

ಸತೀಶ್ ನೀನಾಸಂ & ರಚಿತಾ ರಾಮ್ ಜೋಡಿಯ ‘ಮ್ಯಾಟ್ನೀ’ ಚಿತ್ರಕ್ಕೆ ಪುನಃ ಶೂಟಿಂಗ್ ಶುರು



Read more

[wpas_products keywords=”deal of the day party wear dress for women stylish indian”]