Karnataka news paper

ಪಾಕಿಸ್ತಾನಕ್ಕೆ ಐಎಂಎಫ್ ನಿಂದ 1 ಬಿಲಿಯನ್ ಡಾಲರ್ ಸಾಲ ಅನುಮೋದನೆ


The New Indian Express

ವಾಷಿಂಗ್ ಟನ್ ಡಿಸಿ: ಅಂತಾರಾಷ್ಟ್ರೀಯ ಹಣಕಾಸು ನಿಧಿ ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ ಸಾಲದ ಕಂತನ್ನು ಪಾವತಿಸುವುದಕ್ಕೆ ಅನುಮೋದನೆ ನೀಡಿದೆ. ಪಾಕಿಸ್ತಾನಕ್ಕೆ ತಡೆಹಿಡಿಯಲಾಗಿದ್ದ 6 ಬಿಲಿಯನ್ ಡಾಲರ್ ಮೌಲ್ಯದ ಸಾಲದ ಮೊತ್ತದ ಕಂತಿನ ಭಾಗ ಇದಾಗಿದೆ. 

ಪಾಕಿಸ್ತಾನ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿರುವ ಸಂದರ್ಭದಲ್ಲಿ ಐಎಂಎಫ್ ನ ಈ ನೆರವು ದೊರೆತಿದೆ. ಫೆ.02 ರಂದು ಐಎಂಎಫ್ ನ ಕಾರ್ಯಕಾರಿಣಿ ಮಂಡಳಿ ವಾಷಿಂಗ್ ಟನ್ ಡಿಸಿಯಲ್ಲಿ ಸಭೆ ನಡೆಸಿ ಸಾಲ ಮಂಜೂರು ಮಾಡುವ ಪಾಕಿಸ್ತಾನದ ಮನವಿಯನ್ನು ಪರಿಗಣಿಸಿತ್ತು. 

ಐಎಂಎಫ್ ಸಾಲ ಮಂಜೂರಾಗಿರುವುದನ್ನು ಪಾಕ್ ನ ಹಣಕಾಸು ಸಚಿವ ಶೌಕತ್ ತರೈನ್ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ. 





Read more

[wpas_products keywords=”deal of the day”]