Karnataka news paper

ಧಾರವಾಡ ಕಳ್ಳನ ವಿಚಿತ್ರ ಶೋಕಿ: ಕನಸು ನನಸಾಗಿಸಿಕೊಳ್ಳಲು ಪೊಲೀಸ್​ ಜೀಪ್​​ ಕದ್ದು 100 ಕೀ.ಮಿ ಓಡಿಸಿದ ಭೂಪ!


The New Indian Express

ಹುಬ್ಬಳ್ಳಿ: ಕಳ್ಳನೊಬ್ಬನು ತನ್ನ ಕನಸು ನನಸಾಗಿಸಲು ಪೊಲೀಸ್​ ಜೀಪ್​​ ಕದಿದ್ದಾನೆ, ಕಳ್ಳನ ವಿಚಿತ್ರ ಶೋಕಿ ಕಂಡು ಪೊಲೀಸರು ಶಾಕ್​ ಆಗಿರುವ ಘಟನೆ ನಡೆದಿದೆ.

ಅಣ್ಣಿಗೇರಿ ನಗರದ ನಾಗಪ್ಪ ಹಡಪದ ಬಂಧಿತ ಆರೋಪಿ. ನಾಗಪ್ಪ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ನಿಂತಿದ್ದ ಬೋಲೆರೊ ವಾಹನವನ್ನು ಕಳ್ಳತನ ಮಾಡಿದ್ದಾನೆ. ನಂತರ ಅದನ್ನು ಹಾವೇರಿ ಜಿಲ್ಲೆಯ ಬ್ಯಾಡಗಿವರೆಗೆ ತೆಗೆದುಕೊಂಡು ಹೋಗಿದ್ದಾನೆ

ಬೆಳಗಿನ ಜಾವ 4 ಗಂಟೆಗೆ ವಾಹನ ತೆಗೆದುಕೊಂಡು ಪರಾರಿಯಾಗಿದ್ದ ನಾಗಪ್ಪ ಬ್ಯಾಡಗಿವರೆಗೆ ಹೋಗಿರುವ ವಿಷಯವನ್ನು ಪೊಲೀಸರು ತಿಳಿದಿದ್ದಾರೆ. ಆತನನ್ನು ಹಾಗೂ ವಾಹನವನ್ನು ಬ್ಯಾಡಗಿಯಲ್ಲೇ ಹಿಡಿದಿದ್ದಾರೆ. ಸದ್ಯ ಪೊಲೀಸರು ಬ್ಯಾಡಗಿಯಿಂದ ಪೊಲೀಸ್ ಜಿಪ್ ಹಾಗೂ ನಾಗಪ್ಪನನ್ನು ಕರೆತಂದು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಣ್ಣಿಗೇರಿ ಪಿಎಸ್ ಐ ಎಲ್.ಕೆ.ಜೂಲಕಟ್ಟಿ ಕರ್ತವ್ಯ ಮುಗಿಸಿ ಮನೆಯಲ್ಲಿದ್ದರು, ವಾಹನವನ್ನು ಠಾಣೆಯಲ್ಲಿ ನಿಲ್ಲಿಸಿದ್ದರು. ಇಬ್ಬರು ಪೊಲೀಸರು ಠಾಣೆಯಲ್ಲಿದ್ದರು, ರಾತ್ರಿ ಕರ್ತವ್ಯದ ಇತರ ಪೊಲೀಸರು  ಬೀಟ್‌ನಲ್ಲಿದ್ದರು. 

ಜೀಪ್ ನಲ್ಲಿ ಕೀ ನೋಡಿದ ನಾಗಪ್ಪ, ಪೊಲೀಸ್ ಜೀಪ್ ಓಡಿಸುವ ಕನಸನ್ನು ನನಸಾಗಿಸಲು ನಿರ್ಧರಿಸಿದ. ರಾತ್ರಿ ವಾಹನ ಚಲಾಯಿಸಿ ಅಣ್ಣಿಗೇರಿ ಪಟ್ಟಣದಿಂದ 112 ಕಿ.ಮೀ ದೂರದಲ್ಲಿರುವ ಬ್ಯಾಡಗಿ ಬಳಿಯ ಮೋಟೆಬೆನ್ನೂರು ತಲುಪಿ, ಅಲ್ಲೇ ಜೀಪ್ ನಿಲ್ಲಿಸಿದ್ದ.

ಧಾರವಾಡದ ಆರ್‌ಟಿಒ ರಿಜಿಸ್ಟರ್‌ ಇರುವ ಪೊಲೀಸ್ ವಾಹನವನ್ನು ಗಮನಿಸಿದ  ಸ್ಥಳೀಯರು, ಸಮಯ ವ್ಯರ್ಥ ಮಾಡದೆ ಬ್ಯಾಡಗಿ ಪೊಲೀಸರಿಗೆ ಮಾಹಿತಿ ನೀಡಿದರು, ಸ್ಥಳಕ್ಕೆ ಬಂದ ಪೊಲೀಸರು ವಾಹನದೊಳಗಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದರು. ಅಲ್ಲದೇ ಅಣ್ಣಿಗೇರಿ ಪೊಲೀಸರಿಗೆ ವಾಹನದ ಬಗ್ಗೆ ಮಾಹಿತಿ ನೀಡಿ ಮೋಟೆಬೆನ್ನೂರಿಗೆ ತೆರಳಿ ಕಳ್ಳತನ ಮಾಡಿದ ವಾಹನವನ್ನು ವಾಪಸ್ ತಂದಿದ್ದಾರೆ.

ವಾಹನದಲ್ಲಿ ಸಾಕಷ್ಟು ಇಂಧನವಿದ್ದು, ಆರೋಪಿ ಉದ್ದೇಶಪೂರ್ವಕವಾಗಿ ಮೋಟೆಬೆನ್ನೂರಿನಲ್ಲಿ ವಾಹನ ನಿಲ್ಲಿಸಿದ್ದ. ಆರೋಪಿಗೆ ವಾಹನವನ್ನು ಕಳ್ಳತನ ಮಾಡಿ ಬೇರೆ ಕಡೆಗೆ ಏಕೆ ಓಡಿಸಿಕೊಂಡು ಹೋದ ಎಂಬ ಕಾರಣ ಗೊತ್ತಾಗಿಲ್ಲ ಎಂದು ಧಾರವಾಡ ಎಸ್ಪಿ ಪಿ.ಕೃಷ್ಣಕಾಂತ್ ಹೇಳಿದ್ದಾರೆ.



Read more

[wpas_products keywords=”deal of the day”]