Karnataka news paper

Budget 2022 : ಕರ್ನಾಟಕ ರೈಲ್ವೆ ವಲಯಕ್ಕೆ ಭರ್ಜರಿ ಅನುದಾನ : ನೈರುತ್ಯ ರೈಲ್ವೆಗೆ 6900 ಕೋಟಿ


ಹುಬ್ಬಳ್ಳಿ : ಕೇಂದ್ರ ಸರ್ಕಾರ ಪ್ರಸಕ್ತ ವರ್ಷ ಬಜೆಟ್‌ನಲ್ಲಿ ಕರ್ನಾಟಕ, ಆಂಧ್ರ, ಗೋವಾ ವ್ಯಾಪ್ತಿಯ ‘ನೈರುತ್ಯ ರೈಲ್ವೆ ವಲಯ’ಕ್ಕೆ ಒಟ್ಟು 6900 ಕೋಟಿ ಅನುದಾನ ಮೀಸಲಿಡುವ ಮೂಲಕ ಬಂಪರ್ ಕೊಡುಗೆ ನೀಡಿದೆ. ಅದರಲ್ಲೂ ಕರ್ನಾಟಕದಲ್ಲಿ ಈಗಾಗಲೇ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳಿಗೆ ನಿಗದಿಪಡಿಸಿರುವ ಅನುದಾನಕ್ಕೆ 6000 ಕೋಟಿ ನೀಡಿದೆ. ಈ ಮೂಲಕ ನೈರುತ್ಯ ರೈಲ್ವೆ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಅನುದಾನ ದೊರಕಿರುವುದು ಇದೇ ಮೊದಲಾಗಿದ್ದು ರಾಜ್ಯದ ಪಾಲಿಗೂ ಬಂಪರ್‌ ಅನುದಾನ ದೊರೆತಂತಾಗಿದೆ.

ಈ ವಲಯಕ್ಕೆ ಕಳೆದ ಸಲಕ್ಕಿಂತ .2000 ಕೋಟಿ ಅಂದರೆ ಶೇ.40ರಷ್ಟು ಹೆಚ್ಚುವರಿ ಹಂಚಿಕೆ ಮಾಡಿದಂತಾಗಿದೆ. ವಿದ್ಯುದ್ದೀಕರಣ, ದ್ವಿಪಥ ಕಾಮಗಾರಿಗಳನ್ನು ಪೂರ್ಣಗೊಳಿಸಲು ಹಾಗೂ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಿದಂತಾಗಿದೆ. ಈ .6900 ಕೋಟಿ ವೆಚ್ಚದಲ್ಲಿ ವಲಯದ ಕರ್ನಾಟಕದ ವ್ಯಾಪ್ತಿಯಲ್ಲೇ ರಾಜ್ಯ ಸರ್ಕಾರದ . 780 ಕೋಟಿ ಸೇರಿದಂತೆ .6000 ಕೋಟಿ ಖರ್ಚು ಮಾಡಲಿದೆ. ಇನ್ನುಳಿದ .900 ಕೋಟಿ ವಲಯದ ವ್ಯಾಪ್ತಿಗೆ ಬರಲಿರುವ ಆಂಧ್ರ ಮತ್ತು ಗೋವಾದಲ್ಲಿ ವಿನಿಯೋಗಿಸಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್, 2022- 23 ನೇ ಸಾಲಿನ ಬಜೆಟ್ ನಲ್ಲಿ ನೈಋತ್ಯ ರೈಲ್ವೆಗೆ ಮೂಲ ಸೌಲಭ್ಯ ಅಭಿವೃದ್ಧಿಪಡಿಸಲು ಸುಮಾರು 6,900 ಕೋಟಿ ರೂ. ಲಭಿಸಿದೆ. ಕಳೆದ ಬಾರಿ 4,900 ಕೋಟಿ ರೂ. ಲಭಿಸಿತ್ತು. ಕಳೆದ ಬಾರಿಗಿಂತ ಶೇ. 40 ರಷ್ಟು ಹೆಚ್ಚು ಅನುದಾನ ಲಭಿಸಿದೆ. 6900 ಕೋಟಿ ರೂ.ಗಳಲ್ಲಿ ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯ ಕರ್ನಾಟಕ ಯೋಜನೆಗಳಿಗೆ 6000 ಸಾವಿರ ಕೋಟಿ ರೂ. ನೀಡಲಾಗಿದೆ ಎಂದರು.

ಬರಲಿವೆ 400 ವಂದೇ ಭಾರತ್‌ ಟ್ರೇನ್‌, ಇಲ್ಲಿದೆ ₹ 1.4 ಲಕ್ಷ ಕೋಟಿ ರೈಲ್ವೆ ಬಜೆಟ್‌ನ ಕಂಪ್ಲೀಟ್‌ ಡಿಟೇಲ್ಸ್‌

ಇನ್ನು ಇದರಲ್ಲಿ ರಾಜ್ಯದ ಪಾಲು 780 ಕೋಟಿ ರೂ. ಕೂಡಾ ಸೇರಿದೆ. ಉಳಿದ 900 ಕೋಟಿ ರೂ. ನೈರುತ್ಯ ರೈಲ್ವೆ ವಲಯದ ಗೋವಾ, ಆಂಧ್ರ ರಾಜ್ಯದ ಯೋಜನೆಗಳಿಗೆ ನೀಡಲಾಗಿದೆ. ಇದೇ ಡಿಸೆಂಬರ್ ಒಳಗಾಗಿ ಹುಬ್ಬಳ್ಳಿ – ಬೆಂಗಳೂರು ಮಧ್ಯದ ಡಬಲಿಂಗ್ ಕಾಮಗಾರಿ ಪೂರ್ಣ ಗೊಳ್ಳುವ ಹಾಗೂ 2023 ರ ಜೂನ್ ನಲ್ಲಿ ಇಲೆಕ್ಟ್ರಿಫಿಕೇಶನ್ ಪೂರ್ಣಗೊಳಿಸುವ ಗುರಿ ಇದೆ.

ಪ್ರಸಕ್ತ ಕೇಂದ್ರ ಬಜೆಟ್ ನಲ್ಲಿ 400 ವಂದೇ ಭಾರತ ರೈಲುಗಳನ್ನು 3 ವರ್ಷದಲ್ಲಿ ನೀಡುವುದಾಗಿ ಘೋಷಿಸಲಾಗಿದೆ. ನೈಋತ್ಯ ರೈಲ್ವೆಗೂ ಕೆಲವು ವಂದೇ ಭಾರತ ರೈಲುಗಳು ಬರುವ ನಿರೀಕ್ಷೆ ಇದೆ. ಧಾರವಾಡ – ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಪ್ರಾರಂಭಿಸುವಂತೆ ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದೇವೆ. ತಾಳಗುಪ್ಪ- ಹುಬ್ಬಳ್ಳಿ, ತಾಳಗುಪ್ಪ- ಹೊನ್ನಾವರ ಸಮೀಕ್ಷೆ ನಡೆದಿದೆ ಎಂದು ತಿಳಿಸಿದರು.



Read more

[wpas_products keywords=”deal of the day sale today offer all”]