Karnataka news paper

ರೋಹಿತ್‌-ಮಯಾಂಕ್‌ ಓಪನರ್ಸ್‌; ಮೊದಲನೇ ಓಡಿಐಗೆ ಭಾರತ ಸಂಭಾವ್ಯ XI ಇಂತಿದೆ..


​ಆರಂಭಿಕರು: ರೋಹಿತ್‌ ಶರ್ಮಾ-ಮಯಾಂಕ್‌ ಅಗರ್ವಾಲ್

ವೆಸ್ಟ್‌ ಇಂಡೀಸ್‌ ವಿರುದ್ಧ ಓಡಿಐ ಪಂದ್ಯಕ್ಕೆ ಮಯಾಂಕ್ ಅಗರ್ವಾಲ್‌ ಅವರನ್ನು ಆಯ್ಕೆ ಮಾಡಲಾಗಿರಲಿಲ್ಲ. ಆದರೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್‌ ಧವನ್‌ ಹಾಗೂ ಋತುರಾಜ್‌ ಗಾಯಕ್ವಾಡ್‌ಗೆ ಕೋವಿಡ್‌-19 ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಕನ್ನಡಿಗನನ್ನು ಕರೆಸಿಕೊಳ್ಳಲಾಗಿದೆ. ಮತ್ತೊಂದೆಡೆ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರಿಂದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಅಲಭ್ಯರಾಗಿದ್ದ ರೋಹಿತ್‌ ಶರ್ಮಾ ಈ ಸರಣಿಯಲ್ಲಿ ಭಾರತ ಸೀಮಿತ ಓವರ್‌ಗಳ ತಂಡದ ಪೂರ್ಣಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕ ರೋಹಿತ್‌ ಶರ್ಮಾ ಜೊತೆ ಮಯಾಂಕ್‌ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ.

ಕನ್ನಡಿಗನಿಗೆ ಬಂಪರ್‌ ಲಾಟರಿ! ವಿಂಡೀಸ್‌ ವಿರುದ್ಧ ಓಡಿಐ ಸರಣಿಗೆ ಮಯಾಂಕ್‌!

​ಮಧ್ಯಮ ಕ್ರಮಾಂಕ: ಕೊಹ್ಲಿ, ಪಂತ್‌, ಸೂರ್ಯ, ಹೂಡ

ಇನ್ನು ಎಂದಿನಂತೆ ವಿರಾಟ್‌ ಕೊಹ್ಲಿ ಮೂರನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಆಡಲಿದ್ದಾರೆ. ನೂತನ ನಾಯಕ ರೋಹಿತ್‌ ಶರ್ಮಾ ಅಡಿಯಲ್ಲಿ ಇದೇ ಮೊದಲ ಬಾರಿ ಕೊಹ್ಲಿ ಕೇವಲ ಬ್ಯಾಟ್ಸ್‌ಮನ್‌ ಆಗಿ ಭಾನುವಾರ ಕಣಕ್ಕೆ ಇಳಿಯಲಿದ್ದಾರೆ. ನಾಯಕತ್ವದ ಜವಾಬ್ದಾರಿ ಇಲ್ಲದೆ ಇರುವುದರಿಂದ ಅವರು ಬ್ಯಾಟಿಂಗ್‌ ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಬಹುದಾಗಿದೆ. ಮತ್ತೊಂದೆಡೆ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ನಾಲ್ಕನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಆಡಬಹುದು. ಇನ್ನು ಸೂರ್ಯಕುಮಾರ್‌ ಯಾದವ್ ವಿಶೇಷ ಬ್ಯಾಟ್ಸ್‌ಮನ್‌ ಆಗಿ 5ನೇ ಕ್ರಮಾಂಕದಲ್ಲಿ ಆಡುವುದು ಬಹುತೇಕ ಖಚಿತ. ಮತ್ತೊಂದೆಡೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಎದುರು ನೋಡುತ್ತಿರುವ ದೀಪಕ್‌ ಹೂಡ ಭಾನುವಾರ ಮೊದಲ ಪಂದ್ಯದಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್‌ ಹಾಗೂ ಸ್ಪಿನ್‌ ಆಯ್ಕೆಯೊಂದಿಗೆ 6ನೇ ಕ್ರಮಾಂಕದಲ್ಲಿ ಆಡಬಹುದಾಗಿದೆ.

ಪಂತ್‌ ಎಂದರೆ ಎದುರಾಳಿಗಷ್ಟೇ ಅಲ್ಲ ನಮಗೂ ಭಯವಿದೆ ಎಂದ ಸಿರಾಜ್!

​ಆಲ್‌ರೌಂಡರ್‌ಗಳು: ವಾಷಿಂಗ್ಟನ್‌ ಸುಂದರ್, ದೀಪಕ್‌ ಚಹರ್‌

ರವೀಂದ್ರ ಜಡೇಜಾ ಅಲಭ್ಯತೆಯಿಂದಾಗಿ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿರುವ ವಾಷಿಂಗ್ಟನ್‌ ಸುಂದರ್‌ ಎಂದಿನಂತೆ ಸ್ಪಿನ್ ಆಲ್‌ರೌಂಡರ್‌ ಆಗಿ ಕಣಕ್ಕೆ ಇಳಿಯಲಿದ್ದಾರೆ. ಎಡಗೈ ಸ್ಪಿನ್‌ ಜೊತೆಗೆ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲ ಸಾಮರ್ಥ್ಯವನ್ನು ಹೊಂದಿರುವ ಕಾರಣ ಸುಂದರ್ ಮೊದಲನೇ ಪಂದ್ಯದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದ ದೀಪಕ್‌ ಚಹರ್‌ ಮೊದಲನೇ ಪಂದ್ಯದಲ್ಲಿ ಕಣಕ್ಕೆ ಇಳಿಯುವುದು ಬಹುತೇಕ ಖಚಿತ. ಪವರ್‌ಪ್ಲೇನಲ್ಲಿ ವಿಕೆಟ್‌ ಪಡೆಯುವ ಸಾಮರ್ಥ್ಯದ ಜೊತೆಗೆ ಬ್ಯಾಕೆಂಡ್‌ನಲ್ಲಿ ತಂಡಕ್ಕೆ ಅಗತ್ಯ ರನ್‌ಗಳನ್ನು ಗಳಿಸಬಹುದಾದ ಕೌಶಲವನ್ನು ಚಹರ್‌ ಹೊಂದಿದ್ದಾರೆ.

‘ಮಧ್ಯಮ ಕ್ರಮಾಂಕದ ಸಮಸ್ಯೆ ಈ ಆಟಗಾರನಿಂದ ಬಗೆಹರಿಸಬಹುದು’ : ಶರ್ಮಾ!

​ಬೌಲರ್‌ಗಳು: ಪ್ರಸಿಧ್‌, ಸಿರಾಜ್‌, ಚಹಲ್‌

ಜಸ್‌ಪ್ರಿತ್‌ ಬುಮ್ರಾ ಹಾಗೂ ಮೊಹಮ್ಮದ್ ಶಮಿ ವಿರಾಮ ಪಡೆದಿರುವ ಕಾರಣ ಓಡಿಐ ಸರಣಿಯಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಓಡಿಐನಲ್ಲಿ ಕಣಕ್ಕೆ ಇಳಿದಿದ್ದ ಪ್ರಸಿಧ್‌ ಕೃಷ್ಣ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಹಿರಿಯ ವೇಗಿಗಳ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್‌ ವಿಭಾಗವನ್ನು ಮೊಹಮ್ಮದ್‌ ಸಿರಾಜ್‌ ಮುನ್ನಡೆಸಲಿದ್ದಾರೆ. ಮತ್ತೊಂದೆಡೆ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಸ್ಪಿನ್‌ ವಿಭಾಗವನ್ನು ಮುನ್ನಡೆಸಲಿದ್ದು, ಅವರಿಗೆ ವಾಷಿಂಗ್ಟನ್‌ ಸುಂದರ್‌ ಸಾಥ್‌ ನೀಡಲಿದ್ದಾರೆ.

ಪಂದ್ಯ: ಮೊದಲನೇ ಓಡಿಐ

ಮುಖಾಮುಖಿ: ಭಾರತ vs ವೆಸ್ಟ್‌ ಇಂಡೀಸ್‌

ದಿನಾಂಕ: ಫೆ. 6, 2022

ಸಮಯ: ಮಧ್ಯಾಹ್ನ 01:30 ಕ್ಕೆ

ಸ್ಥಳ: ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್‌

ರೋಹಿತ್‌ ಜೊತೆ ಈ ಆಟಗಾರನೇ ಇನಿಂಗ್ಸ್ ಆರಂಭಿಸಬೇಕೆಂದ ಕರೀಮ್‌!



Read more

[wpas_products keywords=”deal of the day gym”]