ಬೆಂಗಳೂರು : ‘ಗ್ರಾಮ ಒನ್‘ ಕೇಂದ್ರಗಳನ್ನು ಹೊರಗುತ್ತಿಗೆ ನೀಡುವ ಮೂಲಕ ಸರಕಾರವು ಗ್ರಾಮ ಪಂಚಾಯಿತಿಗಳ ಆದಾಯಕ್ಕೆ ಬರೆ ಎಳೆಯುತ್ತಿದೆ. ಉದ್ದೇಶ ಒಳ್ಳೆಯದಾಗಿದ್ದರೂ ಗ್ರಾಮಗಳ ಆದಾಯವು ಖಾಸಗಿ ಏಜೆನ್ಸಿಗಳ ಪಾಲಾಗುವುದು ವಿಕೇಂದ್ರೀಕರಣ ತತ್ವಕ್ಕೆ ವಿರುದ್ಧವಾಗಿದೆ ಮತ್ತು ಸ್ವಂತ ಆರ್ಥಿಕ ಸಂಪನ್ಮೂಲ ಹೊಂದಿರದ ಗ್ರಾಪಂಗಳಿಗೆ ತೀವ್ರ ಹಿನ್ನಡೆಯಾಗಲಿದೆ.
ಗ್ರಾಪಂಗಳಲ್ಲಿ ಈಗಿರುವ ಬಾಪೂಜಿ ಸೇವಾ ಕೇಂದ್ರಗಳನ್ನು ಕಡೆಗಣಿಸಿ ಖಾಸಗಿ ಏಜೆನ್ಸಿಗಳಿಗೆ ಕೋಟ್ಯಂತರ ರೂ. ಮೊತ್ತದ ಗುತ್ತಿಗೆ ನೀಡುತ್ತಿರುವುದೇಕೆ ಎಂಬುದಕ್ಕೆ ಪರ ವಿರೋಧ ವ್ಯಕ್ತವಾಗುತ್ತಿದೆ. ಗ್ರಾಪಂಗಳ ಅಧಿಕಾರ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರಗಳ ಬಲವಂತದ ಹಸ್ತಕ್ಷೇಪದಿಂದ ಗ್ರಾಪಂಗಳು ಅಧಿಕಾರ ಕಸಿಯುವ ಅಪಸ್ವರದ ಬೆನ್ನಲ್ಲೇ ಸರಕಾರ ಕೈಗೊಂಡ ಈ ನಿರ್ಧಾರದಿಂದ ಗ್ರಾಪಂ ವ್ಯಾಪ್ತಿಯ ಆದಾಯ ಕೈತಪ್ಪುತ್ತದೆ ಮತ್ತು ಸ್ವಂತ ಸಂಪನ್ಮೂಲಗಳ ಮೇಲೆ ಅವಲಂಬಿತ ಗ್ರಾಪಂಗಳು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತವೆ ಎಂದು ರಾಜ್ಯ ಪಂಚಾಯತ್ ಪರಿಷತ್ ಒಕ್ಕೂಟ ಹೇಳಿದೆ.
ನಾಗರಿಕ ಸೇವೆಗಳನ್ನು ಕಡಿಮೆ ದರದಲ್ಲಿ ಒದಗಿಸಿ ಸ್ವಂತ ಸಂಪನ್ಮೂಲ ಸೃಷ್ಟಿಸಿಕೊಳ್ಳುವ ಭಾಗಶಃ ಪಂಚಾಯಿತಿಗಳ ಆದಾಯಕ್ಕೆ ಕೊಕ್ಕೆ ಬೀಳುವುದು ನಿಶ್ಚಿತ ಎಂದು ಆರೋಪಿಸಿದೆ. ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಬೆಳಗಾವಿ ವಿಭಾಗೀಯ ವ್ಯಾಪ್ತಿಗೆ ಪ್ರತ್ಯೇಕ ಏಜನ್ಸಿಗಳಿಗೆ ಗುತ್ತಿಗೆ ನೀಡಲಾಗುತ್ತಿದೆ. ಈಗಾಗಲೇ ಬೆಂಗಳೂರು ಮತ್ತು ಬೆಳಗಾವಿ ವಿಭಾಗಕ್ಕೆ ಸಿಎಂಸ್ ಕಂಪ್ಯೂಟರ್ ಲಿ. ಏಧಿಜೆನ್ಸಿಗೆ ಗುತ್ತಿಗೆ ವಹಿಸಲಾಗಿದೆ. ಮೈಸೂರು, ಕಲಬುರಗಿ ವಿಭಾಗಕ್ಕೆ ಗುತ್ತಿಗೆ ವಹಿಸುವುದು ಬಾಕಿ ಇದೆ.
ಗ್ರಾಮೀಣ ಜನರ ಸೇವೆಗೆ ‘ಗ್ರಾಮ ಒನ್’ ಆರಂಭ : ಸರಕಾರಿ ಸೇವೆಗಳನ್ನು ನೀಡುವುದೇ ಇದರ ವಿಶೇಷತೆ!
ಇ-ಆಡಳಿತಕ್ಕೆ ಪತ್ರ!
ಬಾಪೂಜಿ ಸೇವಾ ಕೇಂದ್ರಕ್ಕೆ ‘ಸೇವಾ ಸಿಂಧು’ ನಿರ್ವಹಣೆ ಒಳಗೊಂಡು ಇತರೆ ಸೇವೆಗಳ ನಿರ್ವಹಣೆ ಜವಾಬ್ದಾರಿ ವಹಿಸಿ ಎಂದು ಇತ್ತೀಚೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ(ಇ-ಆಡಳಿತ) ವಿಭಾಗಕ್ಕೆ ಪತ್ರ ಬರೆದಿದ್ದರು. ಸೇವಾ ಸಿಂಧು ಜತೆಗೆ ಗ್ರಾಮ್‌ಒನ್‌ಗಳನ್ನು ಗ್ರಾಪಂಗಳಿಗೆ ವಹಿಸಿ ಎಂಬದು ಪತ್ರ ಸಾರಾಂಶವಾಗಿತ್ತು.
Read more
[wpas_products keywords=”deal of the day sale today offer all”]