Karnataka news paper

ಅಂಡರ್ 19 ವಿಶ್ವಕಪ್: ಟೂರ್ನಿಯಲ್ಲಿ ಈ ದಾಖಲೆ ಬರೆದ ಮೊದಲ ತಂಡ ಭಾರತ!


Online Desk

ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನ ಸೆಮಿ-ಫೈನಲ್‌ನಲ್ಲಿ ಭಾರತ ತಂಡದ ಆಸ್ಟ್ರೇಲಿಯಾ ವಿರುದ್ಧ 96 ರನ್‌ಗಳ ಬೃಹತ್ ಗೆಲುವು ಸಾಧಿಸುವ ಮೂಲಕ ಭಾರತವು ಕ್ರಿಕೆಟ್ ಇತಿಹಾಸದಲ್ಲಿ ಬೃಹತ್ U-19 ದಾಖಲೆಯನ್ನು ಸಾಧಿಸಿದ ಮೊದಲ ರಾಷ್ಟ್ರವಾಗಿದೆ. 

ಆಸ್ಟ್ರೇಲಿಯಾ ವಿರುದ್ಧದ ಗೆಲುವಿನ ನಂತರ ಭಾರತ ಅಂಡರ್ 19 ವಿಶ್ವಕಪ್ ಫೈನಲ್ ಪ್ರವೇಶಿಸಿದ್ದು ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯ ಫೆಬ್ರವರಿ 5ರಂದು ನಡೆಯಲಿದೆ. ಇನ್ನು ಪಂದ್ಯಾವಳಿಯಲ್ಲಿ ಸತತ ನಾಲ್ಕನೇ ಬಾರಿ ಭಾರತ ಫೈನಲ್‌ ಗೆ ಅರ್ಹತೆ ಗಳಿಸಿದ ಮೊದಲ ತಂಡವಾಗಿ ಇತಿಹಾಸ ಬರೆದಿದೆ. 

2016ರಲ್ಲಿ ಇಶಾನ್ ಕಿಶನ್ ನೇತೃತ್ವದ ತಂಡ. 2018ರಲ್ಲಿ ಪೃಥ್ವಿ ಶಾ ನೇತೃತ್ವದ ತಂಡ. 2020ರಲ್ಲಿ ಪ್ರಿಯಮ್ ಗಾರ್ಗ್ ಅವರ ತಂಡ ಫೈನಲ್ ಪ್ರವೇಶಿದ್ದು ಇದೀಗ ನಾಲ್ಕನೇ ಬಾರಿಗೆ ನಾಯಕ ಯಶ್ ಧುಲ್ ಅವರ ತಂಡವು U-19 ಫೈನಲ್‌ನಲ್ಲಿ ಆಡಲಿದೆ.

ಟೂರ್ನಮೆಂಟ್‌ನ ಕೊನೆಯ ನಾಲ್ಕು ಆವೃತ್ತಿಗಳಲ್ಲಿ, ಭಾರತವು 2018ರಲ್ಲಿ ಪೃಥ್ವಿ ಶಾ ನಾಯಕತ್ವದಲ್ಲಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಧುಲ್ ಈ ವರ್ಷ ಯುವ ಭಾರತೀಯ ತಂಡದ ನಾಯಕರಾಗಿದ್ದು, ಇಂಗ್ಲೆಂಡ್ ಅನ್ನು ಸೋಲಿಸುವ ಮೂಲಕ ಪ್ರಶಸ್ತಿ ಗೆಲ್ಲುವ ಭರವಸೆ ತೋರುತ್ತಿದ್ದಾರೆ.

ಇದನ್ನೂ ಓದಿ: ಅಂಡರ್ 19 ವರ್ಲ್ಡ್ ಕಪ್: ಫೈನಲ್ ಗೆ ಟೀಂ ಇಂಡಿಯಾ ಲಗ್ಗೆ! 24 ವರ್ಷಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲದ ಭಾರತ!

ಭಾರತದ ಪ್ರಮುಖ ಆಟಗಾರರು
ಪಂದ್ಯಾವಳಿಯ ಪ್ರತಿ ಆವೃತ್ತಿಯಲ್ಲಿ ಭಾರತೀಯ ಆಟಗಾರರು ತಮ್ಮ ಪ್ರಾಬಲ್ಯವನ್ನು ಪ್ರದರ್ಶಿಸಿದ್ದಾರೆ. ಅಂಗ್‌ಕ್ರಿಶ್, ಬಾವಾ, ನಾಯಕ ಧುಲ್ ಮತ್ತು ಓಸ್ಟ್ವಾಲ್ ಅವರಂತಹ ಆಟಗಾರರು ಪ್ರಸ್ತುತ ಆವೃತ್ತಿಯಲ್ಲಿ ಕೆಲವು ಅತ್ಯುತ್ತಮ ಭಾರತೀಯ ಆಟಗಾರರಾಗಿದ್ದಾರೆ. ಆಂಗ್‌ಕ್ರಿಶ್ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ರಾಜ್ ಬಾವಾ ಮತ್ತು ಯಶ್ ಧುಲ್ ಕ್ರಮವಾಗಿ 217 ಮತ್ತು 212 ರನ್ ಗಳಿಸಿದ್ದಾರೆ ಮತ್ತು ಧುಲ್ ಇದುವರೆಗೆ ಕೇವಲ ಮೂರು ಪಂದ್ಯಗಳನ್ನು ಆಡಿರುವುದು ಅವರ ಮಾಸ್ಟರ್ ಕ್ಲಾಸ್ ಅನ್ನು ಮತ್ತಷ್ಟು ಪ್ರದರ್ಶಿಸುತ್ತದೆ. ಏತನ್ಮಧ್ಯೆ, ವಿಕ್ಕಿ ಒಸ್ತ್ವಾಲ್ ಇದುವರೆಗೆ ಐದು ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಹೆಚ್ಚು ವಿಕೆಟ್ ಬೌಲರ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ.





Read more…

[wpas_products keywords=”deal of the day sports items”]