Karnataka news paper

ಸೂಟ್ ಕೇಸ್ ಒಳಗಡೆ ಗರ್ಲ್ ಫ್ರೆಂಡ್ ಇರಿಸಿದ ವಿದ್ಯಾರ್ಥಿ ವಿರುದ್ಧ ಕ್ರಮ; ವೈರಲ್ ವಿಡಿಯೋ ನಕಲಿ: ಎಂಎಹೆಚ್ ಇ


The New Indian Express

ಉಡುಪಿ: ಮಣಿಪಾಲ್ ನ ಭದ್ರತಾ ಸಿಬ್ಬಂದಿಯೊಬ್ಬರು ಸೂಟ್ ಕೇಸ್ ಓಪನ್ ಮಾಡುವಂತೆ ವಿದ್ಯಾರ್ಥಿಯೊಬ್ಬನಿಗೆ ಹೇಳಿದಾಗ ಅದರೊಳಗಿದ್ದ ಹುಡುಗಿಯೊಬ್ಬಳು ಹೊರಗೆ ಬರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದು ನಕಲಿ ವಿಡಿಯೋವಾಗಿದೆ ಎಂದು ಸಂಸ್ಥೆಯ ವಕ್ತಾರರೊಬ್ಬರು ಹೇಳಿದ್ದಾರೆ.

ಆದಾಗ್ಯೂ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನಲ್ಲಿ ನಡೆದಿದ್ದ ಸೂಟ್ ಕೇಸ್ ಒಳಗಡೆ ಹುಡುಗನೊಬ್ಬ ತನ್ನ ಗರ್ಲ್ ಫ್ರೆಂಡ್ ಇರಿಸಿದ್ದ ಘಟನೆಗೆ ಸಂಬಂಧಿಸಿದಂತೆ ಸಂಸ್ಥೆಯ ಆಂತರಿಕ ಶಿಸ್ತು ಪಾಲನಾ ಸಮಿತಿ ಕ್ರಮ ಕೈಗೊಂಡಿದೆ.  

ಮಣಿಪಾಲ್ ತಾಂತ್ರಿಕ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತದ್ದ ಹುಡುಗ ಬ್ಲಾಕ್ 5ರಲ್ಲಿ ವಾಸಿಸುತ್ತಿದ್ದರೆ, ಮಣಿಪಾಲ್ ಕ್ಯಾಂಪಸ್ ನಲ್ಲಿ ಕಾಮರ್ಸ್ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದ ಹುಡುಗಿ ಬ್ಲಾಕ್ 13ರಲ್ಲಿನ ಹಾಸ್ಟೆಲ್ ವೊಂದರಲ್ಲಿ ತಂಗಿದ್ದಳು ಎಂದು ಮೂಲಗಳು ತಿಳಿಸಿವೆ.

ಅನುಮಾನದ ಮೇರೆಗೆ ಭದ್ರತಾ ಸಿಬ್ಬಂದಿ ಸೂಟ್ ಕೇಸ್ ಓಪನ್ ಮಾಡಲು ಹೇಳಿದಾಗ, ಆಕೆಯ ಗರ್ಲ್ ಫ್ರೆಂಡ್ ಅದರಿಂದ ಎದ್ದು ಹೊರಗೆ ಬಂದಳು, ಅದೃಷ್ಟವಶಾತ್ ಈ ಹುಡುಗಿ ಪ್ರಜ್ಞೆ ಕಳೆದುಕೊಂಡಿರಲಿಲ್ಲ. ಹಾಗಾಗಿ ಯಾವುದೇ ವೈದ್ಯಕೀಯ ನೆರವಿನ ಅಗತ್ಯ ಎದುರಾಗಲಿಲ್ಲ.

ಓಮಿಕ್ರಾನ್ ಹಿನ್ನೆಲೆಯಲ್ಲಿ ಹೊರಗಿನವರಿಗೆ ಹಾಸ್ಟೆಲ್ ಗೆ ಅವಕಾಶ ನೀಡುತ್ತಿಲ್ಲ. ಆದಾಗ್ಯೂ, ತನ್ನ ಗರ್ಲ್ ಫ್ರೆಂಡ್ ನೊಂದಿಗೆ ಕೆಲ ಸಮಯ ಕಳೆಯಲು ತನ್ನ ಸೂಟ್ ಕೇಸ್ ನಲ್ಲಿ ಆಕೆಯನ್ನು ಹಾಸ್ಟೆಲ್ ರೂಮಿಗೆ ಕರೆಯಲು ಹುಡುಗ ಯೋಜಿಸಿದ್ದ ಎಂದು ಮೂಲಗಳು ಹೇಳಿವೆ.

ಮಣಿಪಾಲ್ ನ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಸಂಸ್ಥೆಗೆ ಸೇರಿದ್ದು ಎಂದು ದೃಢೀಕರಿಸದ ವಿಡಿಯೋ ಪ್ರಸಾರ ಮಾಡಿದ್ದ ಮಾಧ್ಯಮ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಂಇಹೆಚ್ ಇ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.



Read more

[wpas_products keywords=”deal of the day”]