
ಹೌದು, ಟೆಕ್ನೋ ಕಂಪೆನಿ ತನ್ನ ಟೆಕ್ನೋ ಸ್ಪಾರ್ಕ್ 8T ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನ್ ಡ್ರಾಪ್ ನಾಚ್ ಡಿಸ್ಪ್ಲೇಯನ್ನು ಹೊಂದಿರಲಿದ್ದು, ಕ್ವಾಡ್ ಎಲ್ಇಡಿ ಫ್ಲ್ಯಾಷ್ ಯೂನಿಟ್ ಜೊತೆಗೆ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿದೆ. ಹಾಗೆಯೇ ಈ ಫೋನ್ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಕಾಣಿಸಿಕೊಂಡಿದ್ದು, ಅವು ಕ್ರಮವಾಗಿ ಅಟ್ಲಾಂಟಿಕ್ ಬ್ಲೂ, ಟರ್ಕೋಯಿಸ್ ಸಯಾನ್, ಕೊಕೊ ಗೋಲ್ಡ್ ಮತ್ತು ಐರಿಸ್ ಪರ್ಪಲ್ ಆಗಿದೆ. ಹಾಗಾದರೇ ಟೆಕ್ನೋ ಸ್ಪಾರ್ಕ್ 8T ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ವಿನ್ಯಾಸ ಮತ್ತು ರಚನೆ
ಟೆಕ್ನೋ ಸ್ಪಾರ್ಕ್ 8T ಸ್ಮಾರ್ಟ್‌ಫೋನ್ 1080 x 2408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಪೂರ್ಣ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ಅನುಪಾತವನ್ನು ಒಳಗೊಂಡಿದ್ದು, 401ppi ಪಿಕ್ಸಲ್ ಸಾಂದ್ರತೆಯನ್ನು ಹೊಂದಿದೆ. ಜೊತೆಗೆ 500 nits ಬ್ರೈಟ್ನೆಸ್ ಸಾಮರ್ಥ್ಯವನ್ನು ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ ಎಷ್ಟು
ಟೆಕ್ನೋ ಸ್ಪಾರ್ಕ್ 8T ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G35 SoC ಪ್ರೊಸೆಸರ್ ಬಲವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಸಪೋರ್ಟ್ ಸಹ ಪಡೆದಿದೆ. ಜೊತೆಗೆ 4GB RAM + 64GB ವೇರಿಯಂಟ್ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾದ ಆಯ್ಕೆ ಇರಲಿದೆ.

ಕ್ಯಾಮೆರಾ ಸೆನ್ಸಾರ್ ವಿಶೇಷ
ಟೆಕ್ನೋ ಸ್ಪಾರ್ಕ್ 8T ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದ್ದು, ಎರಡನೇ ಕ್ಯಾಮೆರಾವು ಉತ್ತಮ ಸೆನ್ಸಾರ್ ಸಪೋರ್ಟ್ ಪಡೆದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಎಲ್ಇಡಿ ಫ್ಲ್ಯಾಷ್‌ನೊಂದಿಗೆ ಜೋಡಿಸಲಾಗಿರುತ್ತದೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಟೆಕ್ನೋ ಸ್ಪಾರ್ಕ್ 8T ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಉತ್ತಮ ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯ ನೀಡಲಿದೆ. ಹಾಗೆಯೇ ಹಿಂಬದಿಯಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಆಯ್ಕೆ ಇದೆ. ಡ್ಯುಯಲ್ ನ್ಯಾನೊ-ಸಿಮ್ ಸ್ಲಾಟ್‌ಗಳು, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಸೌಲಭ್ಯ ಲಭ್ಯ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ VoLTE, ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್, ಮೈಕ್ರೋ-ಯುಎಸ್‌ಬಿ, ಮತ್ತು ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಟೆಕ್ನೋ ಸ್ಪಾರ್ಕ್ 8T ಸ್ಮಾರ್ಟ್‌ಫೋನ್ ಇಂದು ಲಾಂಚ್ ಆಗಿದೆ. ಈ ಫೋನ್ 4GB RAM + 64GB ಸ್ಟೋರೇಜ್ ಆಯ್ಕೆ ಒಳಗೊಂಡಿದ್ದು, ಇದರ ಬೆಲೆಯು 8,999ರೂ. ಆಗಿದೆ. ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದೆ. ಹಾಗೆಯೇ ಇದೇ ಡಿ.20 ರಂದು ಫಸ್ಟ್ ಸೇಲ್ ಪ್ರಾರಂಭ ಆಗಲಿದೆ. ಇನ್ನು ಈ ಫೋನ್ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇದ್ದು, ಅವು ಕ್ರಮವಾಗಿ ಅಟ್ಲಾಂಟಿಕ್ ಬ್ಲೂ, ಕೋಕೋ ಗೋಲ್ಡ್, ಐರಿಸ್ ಪರ್ಪಲ್ ಮತ್ತು ಟರ್ಕೋಯಿಸ್ ಸಯಾನ್ ಆಗಿವೆ.