Online Desk
ಬೆಂಗಳೂರು: ರಾಮನಗರದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಮನಗರ- ಚೆನ್ನಪಟ್ಟಣ ಅವಳಿ ನಗರಗಳಿಗಾಗಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದ್ದು, ಜನವರಿ 27 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಇದೀಗ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ.
ರಾಮನಗರದ ಮಾರುಕಟ್ಟೆಗೆ ಪ್ರತಿದಿನ 40-50 ಟನ್ ರೇಷ್ಮೆ ಗೂಡು ಬರುತ್ತಿದ್ದು, ಹೈಟೆಕ್ ಮಾರುಕಟ್ಟೆ ನಿರ್ಮಾಣವಾದ ಬಳಿಕ 100-150 ಟನ್ ನಷ್ಟು ರೇಷ್ಮೆ ಗೂಡು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಹಾಗಾಗಿ 10 ದಿನದೊಳಗೆ ಟೆಂಡರ್ ಕರೆದು ಆದಷ್ಟು ಬೇಗ ಶಂಕುಸ್ಥಾಪನೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೈಟೆಕ್ ರೇಷ್ಮೆ ಮಾರುಕಟ್ಟೆಯಲ್ಲಿ ಏನೆಲ್ಲಾ ಇರಲಿದೆ?
1.ಆಧುನಿಕ ಪ್ರವೇಶ ದ್ವಾರ
2. ಗಣಕೀಕೃತ ರೇಷ್ಮೆಗೂಡು ಹರಾಜು ಸಭಾಂಗಣ
3.ಕೋರ್ ಕಟ್ಟಡ
4.ಶೌಚಾಲಯ ಬ್ಲಾಕ್
5.ಅಗ್ನಿ ಶಾಮಕ ನಿಯಂತ್ರಣ ಕೊಠಡಿ
6.ವಿದ್ಯುತ್ ಕೊಠಡಿ
7.ಪೊಲೀಸ್ ಚೌಕಿ
8.ನೀರು ಶೇಖರಣಾ ತೊಟ್ಟಿ
9.ಒಳಚರಂಡಿ ಸಂಸ್ಕರಣಾ ಘಟಕ
10.ಕಾಂಪೌಂಡ್
11.ಸೋಲಾರ್ ವ್ಯವಸ್ಥೆ
12.ಸಿಸಿಟಿವಿ
13.ವಿದ್ಯುದೀಕರಣ ವ್ಯವಸ್ಥೆ
14.ಹವಾ ನಿಯಂತ್ರಣ ವ್ಯವಸ್ಥೆ
15.ಆಂತರಿಕ ರಸ್ತೆಗಳು
16.ಜನರೇಟರ್ ವ್ಯವಸ್ಥೆ.
ಚನ್ನಪಟ್ಟಣದ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ 20 ಎಕರೆ ಜಾಗದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಿಸಲು ನಿರ್ಧರಿಸಲಾಗಿದೆ. ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ನಬಾರ್ಡ್ ನಿಂದ ಆರ್ಥಿಕ ನೆರವು ದೊರೆತಿದ್ದು, 75 ಕೋಟಿ ರೂಪಾಯಿ ಬಿಡುಗಡೆ ಆಗಿದೆ.
ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಥಳಾವಕಾಶದ ಜೊತೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವುದರಿಂದ ಮಾರುಕಟ್ಟೆ ಧಾರಣೆ ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ ಏಷ್ಯಾದಲ್ಲೇ ಇದೊಂದು ಮಹತ್ವದ ಮಾರುಕಟ್ಟೆಯಾಗಿ ಪರಿವರ್ತನೆ ಹೊಂದಲಿದೆ.
Read more
[wpas_products keywords=”deal of the day”]