ಚಿನ್ನದಂತಿದ್ದ ಶೇಂಗಾ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿರುವ ಪರಿಣಾಮ ಅನ್ನದಾತರನ್ನು ಕಂಗಾಲು ಆಗುವಂತೆ ಮಾಡಿರುವುದು ಮಾತ್ರವಲ್ಲದೇ ಏಕಾಏಕಿ ಬೆಲೆ ಇಳಿಕೆ ಮರ್ಮಾಘಾತ ನೀಡಿದೆ.
ಶೇಂಗಾ ಕ್ವಿಂಟಾಲ್‌ಗೆ 7,559 ರೂ.ಗೆ ಮಾರಾಟ ಮಾಡಲಾಗಿದೆ. ಆರಂಭದಲ್ಲಿ ಈ ಪರಿ ಬೆಲೆ ಜಿಗಿತ ಕಂಡಿರುವುದು ನೋಡಿ ಅನ್ನದಾತರು ಖುಷಿಗೊಂಡಿದ್ದರು. ಆದರೆ ಈ ಖುಷಿ ವಾರ ಕಳೆಯುವುದರೊಳಗೆ ಕಮರಿ ಹೋಗಿದೆ. ಬೆಲೆಯು ಪಾತಾಳ ಕಂಡಿರುವ ಪರಿಣಾಮ ಅವರನ್ನು ನಿದ್ದೆಗೆಡುವಂತೆ ಮಾಡಿದೆ. ಹೀಗಾಗಿಯೇ ಅವರು ದಿಕ್ಕೆಟ್ಟಿದ್ದಾರೆ. ಸರಕಾರದ ವಿರುದ್ದ ಶಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಉತ್ತಮವಾಗಿ ಬೆಲೆ ಇರುವುದು ನೋಡಿ ಅನ್ನದಾತರು ಬೆವರು ಸುರಿಸಿರುವುದಕ್ಕೂ ಸಾರ್ಥಕವಾಯಿತು. ಒಳ್ಳೆ ಬೆಲೆ ಸಿಗುತ್ತಿದೆ. ಇದಲ್ಲದೇ ಮಾಡಿದ ಸಾಲ ತೀರಿಸುವ ಜತೆಗೆ ಒಂದಿಷ್ಟು ಆದಾಯ ಕೂಡ ಬರುತ್ತದೆ ಅಂದುಕೊಂಡಿದ್ದರು. ಆದರೆ ಇದೀಗ ಕ್ವಿಂಟಾಲ್ ಶೇಂಗಾ ಬೆಲೆ 5,600ಕ್ಕೆ ಇಳಿಯುವಂತಾಗಿದೆ. ಹೀಗಾಗಿಯೇ ಆತಂಕಗೊಂಡಿದ್ದಾರೆ.
ಪ್ರತಿ ಕ್ವಿಂಟಾಲ್ ಶೇಂಗಾ ಮಾರಾಟ ಮಾಡಿದರೇ ರೈತರಿಗೆ ಸುಮಾರು 1,959 ರೂ. ನಷ್ಟವಾಗುತ್ತದೆ. ಈ ಪರಿಯಾಗಿ ಆರ್ಥಿಕವಾಗಿ ನಷ್ಟ ಅನುಭವಿಸುವಂತಹ ಪರಿಸ್ಥಿತಿ ಏಕಾಏಕಿ ಒದಗಿ ಬಂದಿರುವುದು ಮಾತ್ರ ತಿಳಿಯದಂತಾಗಿದೆ. ಅನಿವಾರ್ಯವಾಗಿ ಮಾರಾಟ ಮಾಡುವಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಅನ್ನದಾತರು ಸಿಲುಕಿದ್ದಾರೆ.
ಶೇಂಗಾ ಬೆಳೆಯಲು ಅನ್ನದಾತರು ಜಮೀನುಗಳಲ್ಲಿ ಹಗಲು ರಾತ್ರಿಯನ್ನದೇ ಕೃಷಿ ಮಾಡಿದ್ದಾರೆ. ಆದರೆ ಇದೀಗ ಬೆಲೆ ಪಾತಾಳ ಗರಡಿ ಕಂಡಿರುವುದು ನೋಡಿ ಅವರಿಗೆ ಮಾಡಿದ ಕರಸತ್ತು ಎಲ್ಲವೂ ಕೂಡ ವ್ಯರ್ಥವಾಗುತ್ತಿದೆ. ಕೃಷಿಗಾಗಿ ಮಾಡಿದ ಖರ್ಚು ಕೂಡ ವಾಪಸ್ಸು ಬರುತ್ತದೆಯೋ ಅಥವಾ ಇಲ್ಲಾ ಎಂಬುದು ಅವರಲ್ಲಿ ಭಾರಿ ಪ್ರಮಾಣದಲ್ಲಿ ಆತಂಕ ಕಾಡುತ್ತಿದೆ.
ರೈತರು ಬೆಳೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಶೇಂಗಾ ಬೀಜ, ರಸಗೊಬ್ಬರ ಖರೀದಿ ಮಾಡಿದ್ದಾರೆ. ಇದಲ್ಲದೇ ಉತ್ತಮವಾದ ಫಸಲು ಬರಲಿ ಎಂಬ ಕಾರಣಕ್ಕಾಗಿ ಕೃಷಿ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಕಳೆ ಕೀಳಿಸಿದ್ದಾರೆ. ಇದಕ್ಕಾಗಿ ಸಾಲ ಕೂಡ ಮಾಡಿಕೊಂಡಿದ್ದಾರೆ. ಬೆಳೆ ಬಂದಾಗ ಮಾರಿ ಕಟ್ಟಿದರಾಯಿತು ಅಂದುಕೊಂಡು. ಆದರೆ ಬೆಲೆ ಇಳಿಕೆ ಆಗಿರುವುದು ನೋಡಿ ಮಾಡಿದ ಸಾಲವೇ ತೀರದಂತಹ ದರವಿರುವುದು ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಬೆಲೆ ಇಳಿಕೆ ಕಾರಣವೇನು?
ಶೇಂಗಾ ವ್ಯಾಪಕವಾಗಿ ಬರುತ್ತಿರುವುದೇ ಬೆಲೆ ಕುಸಿತಕ್ಕೆ ಕಾರಣವೆಂದು ಅಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಎಪಿಎಂಸಿಗೆ ಇಲ್ಲಿಯವರೆಗೂ 2.33 ಲಕ್ಷ ಕ್ವಿಂಟಾಲ್ ಶೇಂಗಾ ಆವಕವಾಗಿದೆ. ಮೊದಲು ಕಡಿಮೆ ಬಂದಿರುವ ಪರಿಣಾಮ ದರ ಹೆಚ್ಚಿಗೆ ಸಿಕ್ಕಿದೆ. ಇದೀಗ ಜಾಸ್ತಿ ಬರುತ್ತಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಇಳಿಕೆ ಆಗಲು ಮೂಲ ಕಾರಣವಾಗಿದೆ ಎಂದು ಅಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಾರೆ. ಆದರೆ ಅನ್ನದಾತರು ಮಾತ್ರ ಪರಿತಪಿಸುವಂತಾಗಿದೆ.
ಶೇಂಗಾ ಬೆಲೆಯಲ್ಲಿ ಸದ್ಯ ಇಳಿಕೆ ಆಗಿದೆ. ಆರಂಭದಲ್ಲಿ ಉತ್ತಮವಾದ ದರ ಇತ್ತು. ಇದೀಗ ಕಡಿಮೆ ಆಗಿದೆ. ಮಾರುಕಟ್ಟೆಯಲ್ಲಿ ಶೇಂಗಾ ಜಾಸ್ತಿ ಬಂದಿರುವ ಪರಿಣಾಮ ದರದಲ್ಲಿ ವ್ಯತ್ಯಾಸವಾಗಿದೆ.
ಶಿವಕುಮಾರ ದೇಸಾಯಿ, ಸಹಾಯಕ ನಿರ್ದೇಶಕ, ಕೃಷಿ ಮಾರಾಟ ಇಲಾಖೆ.
ಶೇಂಗಾ ಬೆಲೆಯಲ್ಲಿ ಸದ್ಯ ಇಳಿಕೆ ಆಗಿದೆ. ಆರಂಭದಲ್ಲಿ ಉತ್ತಮವಾದ ದರ ಇತ್ತು. ಇದೀಗ ಕಡಿಮೆ ಆಗಿದೆ. ಮಾರುಕಟ್ಟೆಯಲ್ಲಿ ಶೇಂಗಾ ಜಾಸ್ತಿ ಬಂದಿರುವ ಪರಿಣಾಮ ದರದಲ್ಲಿ ವ್ಯತ್ಯಾಸವಾಗಿದೆ.
-ಶಿವಕುಮಾರ ದೇಸಾಯಿ, ಸಹಾಯಕ ನಿರ್ದೇಶಕ, ಕೃಷಿ ಮಾರಾಟ ಇಲಾಖೆ.
“ಶೇಂಗಾ ಬೆಲೆ ಏಕಾಏಕಿ ಇಳಿಕೆಯಾಗಿದೆ. ಯಾವ ಕಾರಣಕ್ಕಾಗಿ ದರ ಇಳಿದಿದೆ ಎಂಬುದು ತಿಳಿಯದಂತಾಗಿದೆ. ಇದರಿಂದಾಗಿ ರೈತರಿಗೆ ಆದಾಯ ತಪ್ಪಿದಂತಾಗಿದೆ. ಅವರು ಸಂಕಷ್ಟದ ಸುಳಿಯಲ್ಲಿಸಿಲುಕುವಂತಹ ಪರಿಸ್ಥಿತಿ ಒದಗಿ ಬಂದಿದೆ.”
-ಮಾರುತಿ ಕಲಾಲ್, ಗಂಜ್ ವರ್ತಕ
“ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಸಿಗುತ್ತದೆ ಎಂದು ಖುಷಿಯಲ್ಲಿ ಇದ್ದೇವು. ಆದರೆ ಬೆಲೆ ಪಾತಾಳ ಗರಡಿ ಕಂಡಿರುವುದು ನೋಡಿ ಮನಸ್ಸಿಗೆ ನೋವಾಗುತ್ತಿದೆ. ಕಡಿಮೆ ಬೆಲೆಗೆ ಅನಿವಾರ್ಯವಾಗಿ ಮಾರಾಟ ಮಾಡುವಂತಹ ಪರಿಸ್ಥಿತಿಯನ್ನು ಸರಕಾರ ತಂದೊಡ್ಡಿದೆ.”
-ಭೀಮರಾಯ ಪಾಟೀಲ್, ರೈತ
Read more…
[wpas_products keywords=”deal of the day”]