Online Desk
ಬೆಂಗಳೂರು: ಬಾಹ್ಯಾಕಾಶ ಸಂಶೋಧನಾ ಯೋಜನೆಗಳಲ್ಲಿ ಒಂದಾದ ಚಂದ್ರನ-2 ಕಾರ್ಯಾಚರಣೆಯಲ್ಲಿ ರೋವರ್ ಚಂದ್ರನ ಮೇಲ್ಮೈಯಲ್ಲಿ ಸರಾಗವಾಗಿ ಲ್ಯಾಂಡ್ ಆಗದೇ ವಿಫಲವಾದ ಎರಡು ವರ್ಷಗಳ ನಂತರ, ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷದ ಆಗಸ್ಟ್‌ನಲ್ಲಿ ಚಂದ್ರಯಾನ-3 ಅನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ.
ಚಂದ್ರಯಾನ-2 ಮಿಷನ್‌ನ ವೈಫಲ್ಯಗಳು ಮತ್ತು ಜಾಗತಿಕ ತಜ್ಞರ ಸಲಹೆಗಳ ಆಧಾರದ ಮೇಲೆ ಚಂದ್ರಯಾನ-3 ರ ಕಾರ್ಯ ಮುನ್ನಡೆದಿದೆ. ಅಗತ್ಯವಿರುವ ಪರೀಕ್ಷೆಗಳನ್ನು ಪೂರ್ಣಗೊಳಿಸಲಾಗಿದ್ದು, ಉಡಾವಣೆಯನ್ನು ಆಗಸ್ಟ್ 2022 ಕ್ಕೆ ನಿಗದಿಪಡಿಸಲಾಗಿದೆ ಎಂದು ಬಾಹ್ಯಾಕಾಶ ಇಲಾಖೆ ತಿಳಿಸಿದೆ.
2020 ರಲ್ಲೇ ಉಡಾವಣೆಯಾಗಬೇಕಿದ್ದ ಚಂದ್ರಯಾನ-3 ಕೊರೋನಾ, ಲಾಕ್ ಡೌನ್ ಕಾರಣದಿಂದಾಗಿ ವಿಳಂಬವಾಗಿದೆ. ಬಾಹ್ಯಾಕಾಶ ಕ್ಷೇತ್ರದ ಹಾಗೂ ಚಂದ್ರಯಾನ-3 ಪರಿಕರಗಳಲ್ಲಿ ಕೆಲವು ಮಾರ್ಪಡುಗಳೊಂದಿಗೆ ಕಾರ್ಯಾಚರಣೆ ಮುಂದುವರೆದಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಚಂದ್ರನ ನೆಲದಲ್ಲಿ ನೀರಿನಂಶ ಪತ್ತೆ ಹಚ್ಚಿದ ಇಸ್ರೊ ನೌಕೆ
ಚಂದ್ರಯಾನ-3 ಮಿಷನ್ ಚಂದ್ರನ ಮೇಲ್ಮೈಯಲ್ಲಿ ನೀರಿನ ಅಸ್ತಿತ್ವವನ್ನು ಕಂಡುಹಿಡಿಯುವುದು ಸೇರಿದಂತೆ ಪ್ರಮುಖ ಸಂಶೋಧನೆಗಳನ್ನು ಒಳಗೊಂಡಿದೆ.
ಚಂದ್ರಯಾನ-2 ರ ಲ್ಯಾಂಡರ್ ಮತ್ತು ರೋವರ್ ಅಪಘಾತಕ್ಕೀಡಾಗಿದ್ದರೂ, ಆರ್ಬಿಟರ್ ಇನ್ನೂ ಚಂದ್ರನ ಮೇಲ್ಮೈ ಮೇಲೆಯೇ ಇದೆ ಮತ್ತು ಇಸ್ರೋ ಇದನ್ನು ಚಂದ್ರಯಾನ -3 ರೊಂದಿಗೆ ಬಳಸಲು ಯೋಜಿಸಿದೆ.
Read more
[wpas_products keywords=”deal of the day”]