The New Indian Express
ಬೆಂಗಳೂರು: ವಿಡಿಯೋ ವಿಚಾರಣೆ ವೇಳೆ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಾದ ಮಂಡಿಸುತ್ತಿದ್ದಾಗ 20 ನಿಮಿಷಗಳ ಕಾಲ ಅರೆಬೆತ್ತಲೆಯಾಗಿ ಕಾಣಿಸಿಕೊಂಡ ಶ್ರೀಧರ್ ಎನ್ ಭಟ್ಟ ಅವರು ಬೇಷರತ್ ಕ್ಷಮೆಯಾಚಿಸಿದ ನಂತರ ಅವರ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ಕೈಬಿಟ್ಟಿದೆ. ಆದರೆ ಭವಿಷ್ಯದಲ್ಲಿ ಇಂತಹ ತಪ್ಪು ಮಾಡದಂತೆ ಎಚ್ಚರಿಕೆ ನೀಡಲಾಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭಾಗಿಯಾಗಿದ್ದಾರೆ ಎನ್ನಲಾದ ಸೆಕ್ಸ್ ಸಿಡಿ ಹಗರಣದ ವಿಚಾರಣೆ ವೇಳೆ ಶ್ರೀಧರ್ ಎನ್ ಭಟ್ಟ ಅವರು ಅರೆನಗ್ನವಾಗಿ ಕಾಣಿಸಿಕೊಂಡಿದ್ದರು.
ಇದನ್ನು ಓದಿ: ಕರ್ನಾಟಕ ಹೈಕೋರ್ಟ್ ವಿಡಿಯೋ ವಿಚಾರಣೆ ವೇಳೆ ಅರೆನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿ: ನೊಟೀಸ್ ಜಾರಿ
ನವೆಂಬರ್ 30, 2021 ರಂದು ಆನ್ ಲೈನ್ ಕೋರ್ಟ್ ಕಲಾಪದ ವೇಳೆ ಸುಮಾರು 20 ನಿಮಿಷಗಳ ಕಾಲ ವ್ಯಕ್ತಿಯೊಬ್ಬರು ಅರೆನಗ್ನವಾಗಿ ಕಾಣಿಸಿಕೊಂಡಿದ್ದಾರೆ ಎಂದು ಇಂದಿರಾ ಜೈಸಿಂಗ್ ಅವರು ಆರೋಪಿಸಿದ್ದರು.
ವಿಚಾರಣೆಗೆ 80ಕ್ಕೂ ಹೆಚ್ಚು ಮಂದಿ ಆನ್ ಲೈನ್ ಮೂಲಕ ಹಾಜರಾಗಿದ್ದರು. ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಅರೆನಗ್ನವಾಗಿ ಕಾಣಿಸಿಕೊಂಡ ವ್ಯಕ್ತಿಯನ್ನು ಪತ್ತೆ ಮಾಡಿ, ಅವರಿಗೆ ನೋಟಿಸ್ ಜಾರಿಗೊಳಿಸಿತ್ತು.
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ವಿಭಾಗೀಯ ಪೀಠವು ಇಂದು ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಾಗ, ಶ್ರೀಧರ್ ಭಟ್ಟ ಅವರು ನೀಡಿದ ಅಫಿಡವಿಟ್ ಅನ್ನು ನ್ಯಾಯಾಲಯದ ಮುಂದೆ ಸಲ್ಲಿಸಲಾಯಿತು.
ನಂತರ ಇಂದಿರಾ ಜೈಸಿಂಗ್ ಅವರು ಭಟ್ಟ ಅವರು ಬೇಷರತ್ ಕ್ಷಮೆಯಾಚಿಸುವ ಅಫಿಡವಿಟ್ ಸಲ್ಲಿಸಿರುವುದರಿಂದ ಅವರ ವಿರುದ್ಧದ ಪ್ರಕ್ರಿಯೆ ಮುಂದುವರಿಯಬೇಕೇ ಅಥವಾ ಕೈಬಿಡಬೇಕೇ ಎಂದು ನ್ಯಾಯಾಲಯ ಪ್ರಶ್ನಿಸಿತು. ತನಗೆ ಮುಂದಿನ ವಿಚಾರಣೆ ಬೇಡ. ಆದರೆ ಅಂತಿಮ ನಿರ್ಧಾರ ನ್ಯಾಯಾಲಯದ ವಿವೇಚನೆಗೆ ಬಿಟ್ಟಿದ್ದು ಎಂದರು.
ನೋಟಿಸ್‌ಗೆ ಅನುಗುಣವಾಗಿ ಶ್ರೀಧರ್ ಭಟ್ಟ ಅವರು ಅಫಿಡವಿಟ್‌ನಲ್ಲಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಅವರ ಕೃತ್ಯವು ಉದ್ದೇಶಪೂರ್ವಕವಲ್ಲ ಎಂದು ತಿಳಿಸಿದ್ದಾರೆ. ಅವರಿಂದ ಉಂಟಾದ ಅನಾನುಕೂಲತೆಗಾಗಿ ವಿಷಾದಿಸಿದ್ದಾರೆ. ಅವರು ತಮ್ಮ ತಪ್ಪನ್ನು ಅರಿತುಕೊಂಡಿದ್ದು, ಮುಂದೆ ಅಂತಹ ಯಾವುದೇ ತಪ್ಪನ್ನು ಮಾಡುವುದಿಲ್ಲ ಎಂದು ಅವರು ಹೇಳಿರುವುದಾಗಿ ನ್ಯಾಯಾಲಯ ತಿಳಿಸಿದೆ.
Read more
[wpas_products keywords=”deal of the day”]