‘ಶಾಲೆಗಳಲ್ಲಿ ಭೌತಿಕ ತರಗತಿ ಆರಂಭಿಸುವ ಕುರಿತು ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ತೀರ್ಮಾನ ತೆಗೆದುಕೊಳ್ಳಬಹುದು. ಆಫ್‌ಲೈನ್ ಅಥವಾ ಆನ್‌ಲೈನ್ ಯಾವುದೇ ಬೇಕೆಂದು ಮಕ್ಕಳ ಪೋಷಕರ ಒಪ್ಪಿಗೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಬಹುದು’ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.
‘ಕೊರೊನಾ ಭೀತಿ ಇರುವುದರಿಂದ ಶಾಲೆ ಆರಂಭವು ಯೋಚನೆ ಮಾಡಬೇಕಾದ ವಿಷಯವಾಗಿದೆ. ಆದರೂ, ಮಕ್ಕಳ ಶೈಕ್ಷಣಿಕ ಏಳಿಗೆಯೂ ಪ್ರಮುಖವಾಗಿರುವುದರಿಂದ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಶಾಲೆ ಆರಂಭಿಸಬಹುದು. ಆದರೆ, ಇದಕ್ಕೆ ಪೋಷಕರ ಅಭಿಪ್ರಾಯವೇ ನಿರ್ಣಾಯಕವಾಗಿದೆ. ಹಾಗಾಗಿ, ಆಯಾ ರಾಜ್ಯಗಳ ಪರಿಸ್ಥಿತಿ, ಪೋಷಕರ ಅಭಿಪ್ರಾಯದಂತೆ ರಾಜ್ಯ ಸರಕಾರಗಳೇ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು’ ಎಂದು ಕೋವಿಡ್ ಕಾರ್ಯಪಡೆ ಮುಖ್ಯಸ್ಥ ಡಾ. ವಿ. ಕೆ. ಪೌಲ್ ಸಹ ತಿಳಿಸಿದ್ದಾರೆ.
ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಸಂಗೀತ, ಆಟೋಟ, ಕ್ರೀಡೆ ಹಾಗೂ ಕಲೆ ಕುರಿತ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದು ಸಹ ರಾಜ್ಯಗಳಿಗೆ ಬಿಟ್ಟ ವಿಚಾರವಾಗಿದೆ. ಆದರೆ, ಲಸಿಕೆ ವಿತರಣೆ, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಸೇರಿ ಹಲವು ಮುಂಜಾಗ್ರತೆ ಕ್ರಮಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.
ಓಮಿಕ್ರಾನ್ ರೂಪಾಂತರಿಯಿಂದಾಗಿ ದೇಶದಲ್ಲಿ ಕೊರೊನಾ ಮೂರನೇ ಅಲೆ ಉಂಟಾದ ಕಾರಣ ಬಹುತೇಕ ರಾಜ್ಯಗಳು ಶಾಲೆ – ಕಾಲೇಜುಗಳಲ್ಲಿ ಭೌತಿಕ ತರಗತಿ ರದ್ದುಗೊಳಿಸಿದ್ದವು. ಈಗಲೂ ದೇಶದ 9 ರಾಜ್ಯಗಳಲ್ಲಿ ಭೌತಿಕ ತರಗತಿ ರದ್ದಾಗಿದ್ದರೆ 11 ರಾಜ್ಯಗಳಲ್ಲಿ ತರಗತಿ ಆರಂಭಿಸಲಾಗಿದೆ.
ಕೊರೊನಾ ನಿತ್ಯ ಸೋಂಕಿತರ ಸಂಖ್ಯೆ ಜನವರಿ 22ರಿಂದಲೂ ಸತತವಾಗಿ ಇಳಿಕೆಯಾಗುತ್ತಿದೆ. ಜನವರಿ 21 ರಂದು 3.47 ಲಕ್ಷ ಪ್ರಕರಣ ದಾಖಲಾಗಿದ್ದು, ಮೂರನೇ ಅಲೆಯಲ್ಲಿ ನಿತ್ಯ ಗರಿಷ್ಠ ಕೇಸ್ ಆಗಿತ್ತು. ಇದಾದ ಬಳಿಕ ಪ್ರತಿ ದಿನ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದೆ. ಅದರಲ್ಲೂ, ಕಳೆದ ಮೂರು ದಿನದಿಂದ ಸತತವಾಗಿ ನಿತ್ಯ ಸೋಂಕಿತರ ಸಂಖ್ಯೆ ಎರಡು ಲಕ್ಷಕ್ಕಿಂತ ಕಡಿಮೆ ಇದೆ. ಇನ್ನು ಕೊರೊನಾ ನಿರೋಧಕ ಲಸಿಕೆ ನೀಡಿಕೆಯಲ್ಲಿಯೂ ಉತ್ತಮ ಸಾಧನೆಯಾಗಿದ್ದು, ದೇಶದ 16 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.100ರಷ್ಟು ಮೊದಲ ಡೋಸ್ ನೀಡಲಾಗಿದೆ.
ಮಕ್ಕಳಿಗೆ ನೀಡುವ ಮೂರು ಲಸಿಕೆಗಳಿಗೆ ಸಿಡಿಎಲ್ ಅಸ್ತು
ಮಕ್ಕಳಿಗೆ ನೀಡುವ ದಿಸೆಯಲ್ಲಿ ಕಾರ್ಬೆವ್ಯಾಕ್ಸ್‌ನ 6 ಕೋಟಿ, ಕೋವಾವ್ಯಾಕ್ಸ್‌ನ 3.15 ಕೋಟಿ ಹಾಗೂ ಜಾನ್ಸನ್ ಆ್ಯಂಡ್ ಜಾನ್ಸನ್ಸ್‌ನ ಒಂದು ಡೋಸ್ ಲಸಿಕೆಯ 1.85 ಕೋಟಿ ಡೋಸ್‌ಗಳಿಗೆ ಕೇಂದ್ರೀಯ ಔಷಧ ಪ್ರಯೋಗಾಲಯ (ಸಿಡಿಎಲ್) ಅನುಮತಿ ನೀಡಿದೆ. ರೋಗ ನಿರೋಧಕ ಶಕ್ತಿ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದರೆ ದೇಶದಲ್ಲಿ ಮೂರೂ ಲಸಿಕೆಗಳನ್ನು ಮಕ್ಕಳಿಗೆ ನೀಡಬಹುದಾಗಿದೆ. ಅಲ್ಲದೆ, ಇದೇ ದಿಸೆಯಲ್ಲಿ ಸಲಹಾ ಸಮಿತಿಯು ಶುಕ್ರವಾರ ಸಭೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಾರ್ಬೆವ್ಯಾಕ್ಸ್ ಲಸಿಕೆಯು ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಕಂಪನಿ ಉತ್ಪಾದಿಸುತ್ತಿದೆ. ಹಾಗೆಯೇ ಜಾನ್ಸನ್ ಆ್ಯಂಡ್ ಜಾನ್ಸನ್ಸ್ ಲಸಿಕೆಯನ್ನೂ ಇದೇ ಕಂಪನಿ ಉತ್ಪಾದಿಸುತ್ತಿದೆ. ಇನ್ನು ಅಮೆರಿಕ ಕೋವಾವ್ಯಾಕ್ಸ್ ಅನ್ನು ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿದೆ.
Read more
[wpas_products keywords=”deal of the day sale today offer all”]