Karnataka news paper

ಪಂತ್‌ ಎಂದರೆ ಎದುರಾಳಿಗಷ್ಟೇ ಅಲ್ಲ ನಮಗೂ ಭಯವಿದೆ ಎಂದ ಸಿರಾಜ್!


ಹೊಸದಿಲ್ಲಿ: ಮೊಹಮ್ಮದ್‌ ಸಿರಾಜ್‌ ಕಳೆದ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪರ ನೂತನ ಸ್ಟಾರ್‌ ಬೌಲರ್‌ ಆಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಸತತ ಎರಡನೇ ಬಾರಿ ಟೆಸ್ಟ್‌ ಕ್ರಿಕೆಟ್‌ ಸರಣಿ ಗೆಲ್ಲಲು ಸಿರಾಜ್‌ ಮಹತ್ವದ ಪಾತ್ರ ನಿಭಾಯಿಸಿದ್ದರು.

ಗಬ್ಬಾದಲ್ಲಿ ನಡೆದ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಪ್ರಮುಖ ವೇಗಿಗಳ ಸೇವೆ ಕಳೆದುಕೊಂಡಿದ್ದ ಸಂದರ್ಭದಲ್ಲಿ ತಂಡದ ವೇಗದ ಬೌಲಿಂಗ್‌ ವಿಭಾಗದ ಸಾರಥ್ಯ ವಹಿಸಿಕೊಂಡಿದ್ದ ಸಿರಾಜ್‌ 5 ವಿಕೆಟ್‌ ಸಾಧನೆ ಮೆರೆದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಈ ಬಗ್ಗೆ ಸೋನಿ ಸ್ಪೋರ್ಟ್ಸ್‌ ನೆಟ್ಸರ್ಕ್‌ ವಾಹಿನಿಯಲ್ಲಿ ಸಾಕ್ಷ್ಯಚಿತ್ರ ಬಿಡುಗಡೆ ಆಗಿದ್ದು, ಇದರಲ್ಲಿ ಮಾತನಾಡಿರುವ ಮೊಹಮ್ಮದ್‌ ಸಿರಾಜ್‌ ಗಬ್ಬಾ ಟೆಸ್ಟ್‌ನ ಜಯದ ರೂವಾರಿಯಾದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ ಅವರ ವಿರಾವೇಶದ ಬ್ಯಾಟಿಂಗ್‌ ಅನ್ನು ಹಾಡಿ ಹೊಗಳಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲಿ 328 ರನ್‌ಗಳ ಗುರಿ ಬೆನ್ನತ್ತಿದ್ದ ಸಂದರ್ಭದಲ್ಲಿ ಅಜೇಯ 89 ರನ್‌ ಸಿಡಿಸಿದ್ದ ಪಂತ್‌, ಭಾರತಕ್ಕೆ ಐತಿಹಾಸಿಕ ಪಂದ್ಯ ಹಾಗೂ ಸರಣಿ ಗೆದ್ದುಕೊಟ್ಟಿದ್ದರು.

ವಾರ್ನರ್‌ಗೆ 4 ಕೋಟಿಗಿಂತ ಹೆಚ್ಚಿನ ಬೆಲೆ ಸಿಗಲಾರದು: ಬ್ರಾಡ್‌ ಹಾಗ್!

“ನಮ್ಮ ಡ್ರೆಸಿಂಗ್‌ ರೂಮ್‌ನಲ್ಲಿ ಎಷ್ಟು ಆತಂಕ ಮನೆ ಮಾಡಿತ್ತು ಎಂಬುದನ್ನು ವಿವರಿಸಲು ಪದಗಳು ಸಾಲದು. ರಿಷಭ್ ಪಂತ್‌ ಎಂತಹ ಬ್ಯಾಟ್ಸ್‌ಮನ್‌ ಎಂದರೆ ಅವರು ಬ್ಯಾಟ್‌ ಮಾಡುವಾಗ ನಮ್ಮ ತಂಡವೇ ಭಯದಲ್ಲಿ ಇರುತ್ತದೆ. ಇನ್ನು ಎದುರಾಳಿ ತಂಡಕ್ಕೆ ಎಷ್ಟು ಭಯವಾಗುವುದಿಲ್ಲ ಎಂದು ಅಂದಾಜಿಸಿ. ನಾವೆಲ್ಲರೂ ರಿಷಭ್‌ ಆಟ ಮುಂದುವರಿಸಲಿ ಎಂದು ಪ್ರಾರ್ಥನೆ ಮಾಡುತ್ತಿದ್ದೆವು. ಆತ ಬ್ಯಾಟಿಂಗ್‌ ಮಾಡುತ್ತಿದ್ದರೆ ಖಂಡಿತಾ ನಾವು ಪಂದ್ಯ ಗೆಲ್ಲುತ್ತೇವೆ ಎಂಬುದು ನಮಗೆ ಗೊತ್ತಿತ್ತು,” ಎಂದು ಸಿರಾಜ್‌ ಹೇಳಿದ್ದಾರೆ.

ಗಬ್ಬಾ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 138 ಎಸೆತಗಳನ್ನು ಎದುರಿಸಿದ್ದ ಪಂತ್‌ ಅಜೇಯ 89 ರನ್‌ ಸಿಡಿಸಿದ್ದರು. ಶುಭಮನ್‌ ಗಿಲ್‌ ಕೂಡ 91 ರನ್‌ಗಳ ಅಮೂಲ್ಯ ಕೊಡುಗೆ ಕೊಟ್ಟಿದ್ದರು. ಇನಿಂಗ್ಸ್‌ ಮಧ್ಯದಲ್ಲಿ ಚೇತೇಶ್ವರ್‌ ಪೂಜಾರ ಜವಾಬ್ದಾರಿಯುತ ಅರ್ಧಶತಕ ಬಾರಿಸಿದ್ದರು. ಕಳೆದ ಮೂರು ದಶಕಗಳಲ್ಲಿ ಆಸ್ಟ್ರೇಲಿಯಾ ಗಬ್ಬಾ ಟೆಸ್ಟ್‌ನಲ್ಲಿ ಸೋತೇ ಇರಲಿಲ್ಲ. ಹೀಗಾಗಿ ಐತಿಹಾಸಿಕ ಜಯ ದಾಖಲಿಸಿದ ಭಾರತ ತಂಡ 2-1 ಅಂತರದಲ್ಲಿ ಸರಣಿ ಗೆದ್ದು, ಆಸ್ಟ್ರೇಲಿಯಾ ನೆಲದಲ್ಲಿ ಸತತ 2ನೇ ಬಾರಿ ಟೆಸ್ಟ್‌ ಸರಣಿ ಗೆದ್ದು ಬೀಗಿತ್ತು.

ಮೆಗಾ ಆಕ್ಷನ್‌: ಬಹುಬೇಡಿಕೆಯ ಟಾಪ್‌ 5 ವಿದೇಶಿ ಬೌಲರ್ಸ್‌ ಹೆಸರಿಸಿದ ಚೋಪ್ರಾ!

“ರಿಷಭ್ ಪಂತ್‌ ಒಂದೊಂದು ಹೊಡೆತಗಳನ್ನು ಆಡಿದಾಗಲೂ ಆತಂಕ ಮನೆ ಮಾಡುತ್ತಿತ್ತು. ಇನ್ನು ಸ್ವಲ್ಪ ತಾಳ್ಮೆಯಿಂದ ಆಡು ಎಂದುಕೊಳ್ಳುತ್ತಿದ್ದೆವು. ಗಬ್ಬಾದಲ್ಲಿ ಆಸ್ಟ್ರೇಲಿಯಾ ತಂಡದ ದಾಖಲೆ ಮುರಿದಿದ್ದೇವೆ ಎಂದು ಎಲ್ಲರು ಸಂತಸದಲ್ಲಿದ್ದರು. ಆ ದಿನದ ಸಂಭ್ರಮಾಚರಣೆ ನೆನೆದರೆ ಈಗಲೂ ರೋಮಾಂಚನವಾಗುತ್ತದೆ. ಗೆದ್ದ ಬಳಿಕ ಕ್ರೀಡಾಂಗಣದ ಸುತ್ತಲೂ ಸುತ್ತು ಹೊಡೆದದ್ದನ್ನು ಮರೆಯಲಾಗದು. ಕೈಲಿ ಭಾರತದ ಧ್ವಜ ಹಿಡಿದು ಅಭಿಮಾನಿಗಳಿಗೆ ಧನ್ಯವಾದ ಹೇಳಿದೆವು,” ಎಂದು ಸಿರಾಜ್‌ ಹೇಳಿದ್ದಾರೆ.

ವಿರಾಟ್‌ ಕೊಹ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕಾರಣ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಬಳಿಕ ಭಾರತಕ್ಕೆ ಹಿಂದಿರುಗಿದ್ದರು. ಅಡಿಲೇಡ್‌ನಲ್ಲಿ ನಡೆದ ಟೆಸ್ಟ್‌ ಸರಣಿಯ ಮೊದಲ ಪಂದ್ಯದ 2ನೇ ಇನಿಂಗ್ಸ್‌ನಲ್ಲಿ ಭಾರತ ತಂಡ 36 ರನ್‌ಗಳಿಗೆ ಆಲ್‌ಔಟ್‌ ಆಗಿ ಹೀನಾಯ ಸೋಲುಂಡಿತ್ತು. ಬಳಿಕ ಅಜಿಂಕ್ಯ ರಹಾನೆ ತಂಡದ ನಾಯಕತ್ವ ವಹಿಸಿಕೊಂಡು ಸ್ಮರಣೀಯ ಜಯ ತಂದುಕೊಟ್ಟರು. ಮೆಲ್ಬೋರ್ನ್‌ ಮತ್ತು ಗಬ್ಬಾ ಟೆಸ್ಟ್‌ ಗೆದ್ದ ಭಾರತ, ಸಿಡ್ನಿ ಟೆಸ್ಟ್‌ನಲ್ಲಿ ಡ್ರಾ ಸಾಧಿಸಿತ್ತು.



Read more

[wpas_products keywords=”deal of the day gym”]