ಸ್ಪೋರ್ಟ್‌ಸ್ಟಾರ್ ಜೊತೆ ಮಾತನಾಡಿದ ಸೌರವ್ ಗಂಗೂಲಿ, ಕಳೆದ ಎರಡು ವರ್ಷಗಳಿಂದ ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಪೂಜಾರ ಹಾಗೂ ರಹಾನೆ ಅವರನ್ನು ದೇಶಿ ಮಹತ್ವದ ಟೂರ್ನಿ ರಣಜಿ ಟ್ರೋಫಿಗೆ ಕಳುಹಿಸುವುದು ಉತ್ತಮ ಉಪಾಯ. ಆ ಮೂಲಕ ಅವರು ಫಾರ್ಮ್‌ಗೆ ಕಮ್‌ಬ್ಯಾಕ್ ಮಾಡಲು ಇದು ನೆರವಾಗಲಿದೆ ಎಂದು ಹೇಳಿದ್ದಾರೆ.
ಕಳೆದ 2005ರಲ್ಲಿ ನಾನು ಕೂಡ ಭಾರತ ತಂಡದಲ್ಲಿ ಫಾರ್ಮ್ ಕಳೆದುಕೊಂಡಿದ್ದೆ. ಈ ವೇಳೆ ರಣಜಿ ಟ್ರೋಫಿಗೆ ಮರಳಿದ್ದ ನಾನು ಹೆಚ್ಚಿನ ರನ್ ಗಳಿಸಿದ್ದೆ. ಆ ಮೂಲಕ ರಾಷ್ಟ್ರೀಯ ತಂಡಕ್ಕೆ ಶಕ್ತಿಯುತವಾಗಿ ಕಮ್‌ಬ್ಯಾಕ್ ಮಾಡಿದ್ದೆ. ಅದೇ ರೀತಿ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಕೂಡ ಮಾಡಲಿದ್ದಾರೆಂಬ ಬಗ್ಗೆ ನನಗೆ ವಿಶ್ವಾಸವಿದೆ ಎಂದರು.
ರೋಹಿತ್ ಜೊತೆ ಈ ಆಟಗಾರನೇ ಇನಿಂಗ್ಸ್ ಆರಂಭಿಸಬೇಕೆಂದ ಕರೀಮ್!
“ಹೌದು, ಅವರು ಅತ್ಯುತ್ತಮ ಆಟಗಾರರು. ನಿರೀಕ್ಷೆಯಂತೆ ಈ ಇಬ್ಬರೂ ಆಟಗಾರರು ರಣಜಿ ಟ್ರೋಫಿಗೆ ತೆರಳಿ ಸಾಕಷ್ಟು ರನ್ ಗಳಿಸಲಿದ್ದಾರೆ. ಇದರ ಬಗ್ಗೆ ನನಗೆ ಖಚಿತತೆ ಇದೆ. ಇಂಟರ್‌ನ್ಯಾಷನಲ್ ಕ್ರಿಕೆಟ್‌ನಿಂದ ದೇಶಿ ಕ್ರಿಕೆಟ್‌ಗೆ ಮರಳುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ನಾನು ಭಾವಿಸಿದ್ದೇನೆ. ರಣಜಿ ಟ್ರೋಫಿ ದೊಡ್ಡ ಟೂರ್ನಿ. ನಾವೆಲ್ಲರೂ ಕೂಡ ಈ ಟೂರ್ನಿಯಲ್ಲಿಯೂ ಆಡಿದ್ದೇವೆ,” ಎಂದು ತಿಳಿಸಿದರು.
“ಹಾಗಾಗಿ ಅವರು ಮರಳಿ ದೇಶಿ ಟೂರ್ನಿಗೆ ಹೋಗಿ ಉತ್ತಮ ಪ್ರದರ್ಶನ ತೋರಲಿ. ಈ ಹಿಂದೆ ಸೀಮಿತ ಓವರ್‌ಗಳ ತಂಡದಲ್ಲಿ ಇಲ್ಲದೆ, ಟೆಸ್ಟ್ ಕ್ರಿಕೆಟ್ ಆಡುತ್ತಿರುವ ದಿನಗಳಲ್ಲಿಯೂ ಅವರು ರಣಜಿ ಟ್ರೋಫಿಯಲ್ಲಿ ಭಾಗವಹಿಸಿದ್ದರು. ಹಾಗಾಗಿ ಇಲ್ಲಿ ಯಾವುದೇ ಸಮಸ್ಯೆ ಇಲ್ಲ,” ಎಂದು ಹೇಳಿದರು.
‘ಮಧ್ಯಮ ಕ್ರಮಾಂಕದ ಸಮಸ್ಯೆ ಈ ಆಟಗಾರನಿಂದ ಬಗೆಹರಿಸಬಹುದು’ : ಶರ್ಮಾ!
ಕೋವಿಡ್-19 ಕಠಿಣ ಸಮಯದಲ್ಲಿಯೂ ರಣಜಿ ಟ್ರೋಫಿ ಆಯೋಜನೆಗೆ ಎಷ್ಟೆಲ್ಲಾ ಕಷ್ಟವಾಗುತ್ತಿದೆ ಎಂಬ ಅಂಶವನ್ನು ವಿವರಿಸಿದ ಸೌರವ್ ಗಂಗೂಲಿ, ಈ ಟೂರ್ನಿಗಾಗಿ ಒಂದು ಸೂಕ್ತ ಅವಧಿಯನ್ನು ನಿಗದಿ ಮಾಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
“2020-21ರ ಋತುವಿನ ರಣಜಿ ಟ್ರೋಫಿ ಟೂರ್ನಿಯನ್ನು ಕಳೆದುಕೊಂಡಿದ್ದೇವೆ. ಭಾರತದಲ್ಲಿ ಈ ಟೂರ್ನಿ ತುಂಬಾ ಮುಖ್ಯ. ಹಾಗಾಗಿ ಈ ಟೂರ್ನಿಯನ್ನು ಆಯೋಜಿಸಲು ನಾವು ಸದಾ ಉತ್ಸಾಹಿಗಳಾಗಿದ್ದೇವೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19ನಿಂದ ಏನೆಲ್ಲಾ ಆಗಿದೆ ಎಂಬುದು ಇಡೀ ವಿಶ್ವಕ್ಕೆ ತಿಳಿದಿದೆ. ಯಾರೊಬ್ಬರ ಜೀವನದಲ್ಲಿ ಇದು ಸಂಭವಿಸಲಿದೆ ಎಂದು ನಾನು ಚಿಂತಿಸುವುದಿಲ್ಲ. ಈ ಎಲ್ಲಾ ಅಂಶಗಳನ್ನು ನಾವು ಮನಸಿನಲ್ಲಿ ಇಟ್ಟುಕೊಂಡಿದ್ದೇವೆ. ನಿಜಕ್ಕೂ ಈ ಟೂರ್ನಿಯನ್ನು ಆಯೋಜನೆ ಮಾಡುವುದು ಸವಾಲುದಾಯಕವಾಗಿದೆ,” ಎಂದು ಬಿಸಿಸಿಐ ಅಧ್ಯಕ್ಷ ತಿಳಿಸಿದ್ದಾರೆ.
ಕನ್ನಡಿಗನಿಗೆ ಬಂಪರ್ ಲಾಟರಿ! ವಿಂಡೀಸ್ ವಿರುದ್ಧ ಓಡಿಐ ಸರಣಿಗೆ ಮಯಾಂಕ್!
Read more
[wpas_products keywords=”deal of the day sale today offer all”]