Source : The New Indian Express
ಬೆಂಗಳೂರು: ಪಕ್ಷಿಗಳು ನಾಟ್ಯವಾಡುವುದನ್ನು, ಸುಶ್ರಾವ್ಯವಾಗಿ ಉಲಿಯುವುದನ್ನು ಕೇಳಿರುತ್ತೇವೆ. ಆದರೆ ಕಪ್ಪೆ ನಾಟ್ಯವಾಡುವುದು ತುಂಬಾ ವಿಶೇಷ. ನಾಟ್ಯವಾಡುವ ಕಪ್ಪೆಯ ಸಂತತಿ ವಿದೇಶದೆಲ್ಲೋ ಇಲ್ಲ. ನಮ್ಮ ಕರ್ನಾಟಕ ರಾಜ್ಯದಲ್ಲೇ ಇರೋದು. ಅದರ ಹೆಸರು ‘ಕೊಟ್ಟಿಗೆಹಾರ ಕಪ್ಪೆ’. ಅದು ಒಂದು ಕಾಲನ್ನು ಎತ್ತಿ ಮೇಲಕ್ಕೆ ಚಾಚುತ್ತದೆ ನಾಟ್ಯದ ಯಾವುದೋ ಭಂಗಿ ಎಂಬಂತೆ.
ಇದನ್ನೂ ಓದಿ: ದಿನನಿತ್ಯ ಬೀದಿ ಪ್ರಾಣಿಗಳಿಗೆ ಅಡುಗೆ; ಥರ ಥರದ ಮೆನು: ದಶಕಗಳಿಂದ ಆಂಧ್ರ ದಂಪತಿಯ ಮಹತ್ಕಾರ್ಯ
ಅಚ್ಚರಿ ಎಂದರೆ ಕೊಟ್ಟಿಗೆಹಾರ ಕಪ್ಪೆಯ ನಾಟ್ಯ ಭಂಗಿಯನ್ನೇ ಹೋಲುವ ಮತ್ತೊಂದು ಕಪ್ಪೆ ಸಂತತಿ ವಿದೇಶದಲ್ಲಿದೆ. ಅದರ ಹೆಸರು ಬಾರ್ನಿಯನ್ ಕಪ್ಪೆ. ಮಲೇಷ್ಯಾ ಬಳಿಯ ಬಾರ್ನಿಯೊ ದ್ವೀಪದಲ್ಲಿ ಅದು ಕಂಡುಬರುತ್ತದೆ. ಬಾರ್ನಿಯನ್ ಕಪ್ಪೆ ಮತ್ತು ಕೊಟ್ಟಿಗೆಹಾರ ಕಪ್ಪೆಯ ನಡುವೆ ಸ್ವಾಮ್ಯತೆ ತಿಳಿಯಲು ಪರಿಸರತಜ್ಞರು ಅಧ್ಯಯನ ನಡೆಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಶರಾವತಿ ಹಿನ್ನೀರಿನ ಮುಪ್ಪಾನೆಯಲ್ಲಿ ಎರಡು ದಿನಗಳ ‘ಕಪ್ಪೆ ಹಬ್ಬ’
ಈ ಅಧ್ಯಯನದಲ್ಲಿ ಬೆಂಗಳೂರು ಐಐಎಸ್ಸಿ ವಿಜ್ಞಾನಿ ಕೆ.ವಿ.ಗುರುರಾಜ್ ಪಾಲ್ಗೊಂಡಿದ್ದಾರೆ. ಅಧ್ಯಯನದಿಂದ ಅವೆರಡೂ ಕಪ್ಪೆಗಳ ಪ್ರಭೇದದ ನಡುವಿನ ಕುತೂಹಲಕರ ವ್ಯತ್ಯಾಸಗಳು ಪತ್ತೆಯಾಗಿವೆ.
ಇದನ್ನೂ ಓದಿ: ಕೇರಳದ ಅತ್ಯಂತ ಹಿರಿಯ ಸಿಂಹಕ್ಕೆ ಮೃಗಾಲಯದಲ್ಲಿ ರಾಜಾತಿಥ್ಯ: ಮೂರು ವರ್ಷಗಳ ಹಿಂದೆ ಪ್ಯಾರಾಲಿಸಿಸ್
ಜಗತ್ತಿನ ಬೇರೆ ಮೂಲೆಯಲ್ಲಿರುವ ಬಾರ್ನಿಯನ್ ಕಪ್ಪೆ ಮತ್ತು ನಮ್ಮ ಪಶ್ಚಿಮಘಟ್ಟದ ಕೊಟ್ಟಿಗೆಹಾರ ಕಪ್ಪೆ ಒಂದೇ ರೀತಿ ಕಾಲೆತ್ತುವುದು ತುಂಬಾ ಅಚ್ಚರಿ ಮೂಡಿಸುವ ವಿಷಯ. ಆದರೆ ಅವುಗಳ ನಾಟ್ಯ ಭಂಗಿಯ ಹಿಂದಿನ ಕಾರಣ ಮಾತ್ರ ಬೇರೆ ಬೇರೆ.
ಇದನ್ನೂ ಓದಿ: ಜಗತ್ತಿನ ಅತ್ಯಂತ ವಿಷಕಾರಿ ಮೀನು: ಕುಟುಕಿದರೆ ಪ್ರಜ್ಞೆ ತಪ್ಪುವುದು ಪಕ್ಕಾ, ನಿರಂತರ ಬಣ್ಣ ಬದಲಾವಣೆ!
ಬಾರ್ನಿಯನ್ ಕಪ್ಪೆ ಸಂತಾನೋತ್ಪತ್ತಿ ಸಮಯದಲ್ಲಿ ತನ್ನ ಸಂಗಾತಿಯನ್ನು ಆಕರ್ಷಿಸಲು ಕಾಲೆತ್ತಿದರೆ, ನಮ್ಮ ಕೊಟ್ಟಿಗೆಹಾರ ಕಪ್ಪೆ ತನ್ನ ಅಧಿಕಾರ ಸ್ಥಾಪಿಸುವ ಯತ್ನವಾಗಿ ಕಾಲೆತ್ತುತ್ತದೆ ಎನ್ನುವ ಸಂಗತಿ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಕೊಟ್ಟಿಗೆಹಾರ ಕಪ್ಪೆ ತನ್ನ ಜಾಗದ ಮೇಲಿನ ಹಕ್ಕನ್ನು, ಗಡಿಯನ್ನು ತೋರ್ಪಡಿಸುವ ಸಲುವಾಗಿ ಕಾಲೆತ್ತುತ್ತದೆ.
ಇದನ್ನೂ ಓದಿ: ವಿಷ ನಿರೋಧಕ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನುದಾನಿತ ಪ್ರಯೋಗಾಲಯದಿಂದ ಉರಗ ಉದ್ಯಾನ ಸ್ಥಾಪನೆ