Karnataka news paper

ಶೀಘ್ರದಲ್ಲೇ ಟ್ವಿಟರ್‌ನ ಈ ಪ್ರಮುಖ ಫೀಚರ್ಸ್‌ನಲ್ಲಿ ಹೊಸ ಬದಲಾವಣೆ ಆಗಲಿದೆ!


ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಸಿಗ್ನೇಚರ್‌ ಕ್ಯಾರೆಕ್ಟರ್‌ ಲಿಮಿಟ್‌ ಅನ್ನು ಬದಲಾಯಿಸಲು ಮುಂದಾಗಿದೆ. ಇಷ್ಟು ದಿನ ಇದ್ದ 280 ಅಕ್ಷರಮಿತಿಯನ್ನು ತೆಗೆದು ದೀರ್ಘ ಸ್ವರೂಪದ ಟೆಕ್ಸ್ಟ್‌ ಟೈಪ್‌ ಮಾಡಲು ಅವಕಾಶ ನೀಡುವುದಕ್ಕೆ ಪ್ಲ್ಯಾನ್‌ ಮಾಡಿದೆ. ಇದಕ್ಕಾಗಿ ಹೊಸ ಫೀಚರ್ಸ್‌ ಪರಿಚಯಿಸಲು ಟ್ವಿಟರ್‌ ಮುಂದಾಗಿ ಎಂದು ವರದಿಯಾಗಿದೆ. ಹಾಗಾದ್ರೆ ಟ್ವಿಟರ್‌ ಸಿಗ್ನೇಚರ್ ಕ್ಯಾರೆಕ್ಟರ್‌ ಲಿಮಿಟ್‌ ಬದಲಾಯಿಸಲು ಮುಂದಾಗಿರುವುದು ಏಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ವಿಟರ್‌

ಟ್ವಿಟರ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸ್ತುತ ಇರುವ ಅಕ್ಷರ ಮಿತಿಯನ್ನು ಬದಲಾಯಿಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ಟ್ವಿಟರ್ ವಿಂಡೋದಲ್ಲಿ ಸ್ಪೇಸ್‌ಗಳು ಅಥವಾ ಎಕ್ಸ್‌ಪ್ಲೋರ್‌ನಂತೆಯೇ ತನ್ನದೇ ಆದ ಮೀಸಲಾದ ಟ್ಯಾಬ್ ಅನ್ನು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಫೀಚರ್ಸ್‌ ಪ್ರಸ್ತುತ ಬಳಕೆದಾರರಿಗೆ ಲಭ್ಯವಿಲ್ಲ. ಇದು ಅಭಿವೃದ್ಧಿಯ ಹಂತದಲ್ಲಿರಬಹುದು ಎಂದು ಊಹಿಸಲಾಗಿದೆ. ಅಲ್ಲದೆ ಇದನ್ನು ಇನ್ನು ಕೂಡ ಸ್ಥಿರ ಆವೃತ್ತಿಯಲ್ಲಿ ಬಿಡುಗಡೆ ಮಾಡದಿರುವ ಸಾಧ್ಯತೆಯಿದೆ. ಸದ್ಯ ನೀವು 280 ಅಕ್ಷರಗಳ ಮಿತಿಯನ್ನು ದಾಟಬೇಕಾದರೆ ಬಳಕೆದಾರರು ಥ್ರೆಡ್ ಅನ್ನು ಕ್ರಿಯೆಟ್‌ ಮಾಡಬಹುದು. ಇದರ ಮೂಲಕ ಮಲ್ಟಿ ಟ್ವೀಟ್‌ಗಳನ್ನು ಸರಣಿಯಲ್ಲಿ ಸೇರಿಸುವ ಅಗತ್ಯವಿದೆ.

ಟ್ವಿಟರ್

ಇದಲ್ಲದೆ ಟ್ವಿಟರ್ ಸದ್ಯದಲ್ಲೇ ಹೊಸ ಫ್ಲಾಕ್‌ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಈ ಫೀಚರ್ಸ್‌ ಕುರಿತು ಹೆಚ್ಚಿನ ಮಾಹಿತಿಯನ್ನು ತನ್ ಪೇಜ್‌ನಲ್ಲಿ ಒದಗಿಸಿದೆ. ಟ್ವಿಟರ್‌ ನೀಡಿರುವ ಮಾಹಿತಿ ಪ್ರಕಾರ ಈ ಫೀಚರ್ಸ್‌ ಮೂಲಕ ನೀವು 150 ಸದಸ್ಯರನ್ನು ಸೇರಿಸಬಹುದು ಎಂದು ವಿವರಿಸಲಾಗಿದೆ. ಈ ಫೀಚರ್ಸ್‌ ಬಳಸುವ ಬಳಕೆದಾರರು ಮಾತ್ರ ನಿಮ್ಮ ಫ್ಲಾಕ್‌ಗೆ ಕಳುಹಿಸಲಾದ ಟ್ವೀಟ್‌ಗಳನ್ನು ವೀಕ್ಷಿಸಬಹುದು ಅಥವಾ ಪ್ರತ್ಯುತ್ತರಿಸಬಹುದು. ಇದಲ್ಲದೆ ನಿಮ್ಮ ಗುಂಪಿನಲ್ಲಿ ಇನ್ನು ಮುಂದೆ ಯಾರಾದರೂ ಬೇಡವೆಂದು ನೀವು ನಿರ್ಧರಿಸಿದರೆ, ಯಾವುದೇ ಸಮಯದಲ್ಲಿ ಅವರನ್ನು ನೀವು ತೆಗೆದುಹಾಕಬಹುದು. ಅಲ್ಲದೆ ನೀವು ಅವರನ್ನು ಗ್ರೂಪ್‌ನಿಂದ ತೆಗೆದು ಹಾಕಿದರೆ ಅವರಿಗೆ ಯಾವುದೇ ನೋಟಿಫಿಕೇಶನ್ ಪಡೆಯಲು ಸಾದ್ಯವಾಗುವುದಿಲ್ಲ.

ಯಾರೊಬ್ಬರ

ಇದಲ್ಲದೆ ನೀವು ಯಾರೊಬ್ಬರ ಗ್ರೂಪ್‌ನಲ್ಲಿದ್ದರೆ ಅವರು ಟ್ವೀಟ್ ಅನ್ನು ಕಳುಹಿಸಿದರೆ, ಆ ಟ್ವೀಟ್‌ನ ಕೆಳಗೆ ಒಂದು ಲೇಬಲ್ ಕಾಣಿಸಲಿದೆ. ಟ್ವಿಟರ್‌ನಲ್ಲಿ ನೀವು ಅನುಸರಿಸುವ ಪ್ರತಿಯೊಬ್ಬರ ನಡುವೆ ನಿಕಟ ಸ್ನೇಹಿತರ ನಡುವಿನ ವ್ಯತ್ಯಾಸವನ್ನು ಇದು ಸುಲಭವಾಗಿಸುತ್ತದೆ. ಇದರಿಂದ ನಿಮ್ಮ ಫ್ಲಾಕ್‌ಗೆ ಟ್ವೀಟ್ ಅನ್ನು ಕಳುಹಿಸುವ ಮೊದಲು ಟ್ವಿಟರ್‌ ಪ್ರೇಕ್ಷಕರ ಆಯ್ಕೆಯನ್ನು ಡಿಸ್‌ಪ್ಲೇ ಮಾಡಲಿದೆ. ಇದು ಎಲ್ಲಾ ಟ್ವಿಟರ್‌ ಮತ್ತು ನಿಮ್ಮ ಆಯ್ಕೆಮಾಡಿದ ಬಳಕೆದಾರರ ನಡುವೆ ಆಯ್ಕೆ ಮಾಡಲು ನಿಮಗೆ ಅವಕಾಶ ನೀಡಲಿದೆ.

ಟ್ವಿಟರ್

ಇನ್ನು ಟ್ವಿಟರ್ ಕಳೆದ ಸೆಪ್ಟೆಂಬರ್‌ನಲ್ಲಿ ಇನ್ವೈಟ್‌ ಒನ್ಲಿ ಕಮ್ಯೂನಿಟಿಗಳನ್ನು ಪ್ರಾರಂಭಿಸಿತು. ಈ ಫೀಚರ್ಸ್‌ ಶೇರ್‌ ಮಾಡಿದ ಆಸಕ್ತಿಗಳ ಮೂಲಕ ಬಳಕೆದಾರರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಅನುಮತಿಸಲಿದೆ. ಇದಲ್ಲದೆ ನಿಮ್ಮ ಟ್ವೀಟ್‌ಗಳನ್ನು ನಿಮ್ಮ ಗ್ರೂಪ್‌ಗಳಿಗೆ ಮಿತಿಗೊಳಿಸುವಂತೆಯೇ, ನಿಮ್ಮ ಎಲ್ಲಾ ಅನುಯಾಯಿಗಳಿಗಿಂತ ನಿರ್ದಿಷ್ಟ ಸಮುದಾಯಕ್ಕೆ ನೀವು ಟ್ವೀಟ್‌ಗಳನ್ನು ಕಳುಹಿಸಬಹುದಾಗಿದೆ. ಸದ್ಯ ಟ್ವಿಟರ್‌ನ “ಆಪ್ತ ಸ್ನೇಹಿತರ” ರೀತಿಯ ಈ ಫೀಚರ್ಸ್‌ ಎಲ್ಲಾ ಬಳಕೆದಾರರನ್ನು ಯಾವಾಗ ತಲುಪುತ್ತದೆ ಅನ್ನೊದು ಇನ್ನೂ ಕೂಡ ಸ್ಪಷ್ಟವಾಗಿಲ್ಲ.



Read more…

[wpas_products keywords=”smartphones under 15000 6gb ram”]