ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಕಿರುಕುಳ, ಲಂಚಕ್ಕೆ ಬೇಡಿಕೆ ಆರೋಪದ ಮೇಲೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ ಗುರುವಾರ ಮಾನತುಗೊಂಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ಸೂಚನೆ ಮೇರೆಗೆ ಅವರನ್ನು ಅಮಾನತು ಮಾಡಲಾಗಿದೆ. ಭೈರಪ್ಪ ಅವರು ಸೋಲಾರ್ ದೀಪ ಖರೀದಿ, ನಿವೇಶನ ಪರಿವರ್ತನೆ ಮತ್ತು ಕಾಮಗಾರಿ ವಿಚಾರಗಳಲ್ಲಿ ಅವ್ಯವಹಾರ ನಡೆಸಿದ್ದಾರೆ. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಳನ್ನು ಲಂಚಕ್ಕೆ ಪೀಡಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದರು. ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ತಾಲ್ಲೂಕಿನ ಹಂಪಾಪುರ ಸ.ನಂ. 30/8, 31/2, 31/ 5, 31/6 ಸೇರಿ ಇತರ ಕೃಷಿ ಜಮೀನುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸುವಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. 165 ನಿವೇಶನಗಳ ಪರಿವರ್ತನೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ಶಾಮೀಲಾಗಿದ್ದಾರೆ. ಜೊತೆಗೆ ತಾ.ಪಂ. ಕಚೇರಿಗೆ ಪೀಠೋಪಕರಣ ಖರೀದಿ, ಇತರ ಕಾಮಗಾರಿಗಳಲ್ಲಿ ಲಂಚ ನೀಡುವಂತೆ ಒತ್ತಾಸುತ್ತಿದ್ದಾರೆ ಎಂಬ ಆರೋಪವೂ ಇತ್ತು.
Read more from source
[wpas_products keywords=”deal of the day sale today kitchen”]