ಐಪಿಎಲ್ 2022 ಟೂರ್ನಿ ಸಲುವಾಗಿ ಫೆ.12-13ರಂದು ಆಟಗಾರರ ಮೆಗಾ ಆಕ್ಷನ್ ಬೆಂಗಳೂರಿನಲ್ಲಿ ನಡೆಯಲಿದೆ. ಈ ಬಾರಿ ಕಣದಲ್ಲಿ 10 ತಂಡಗಳಿದ್ದು, ಎಲ್ಲಾ ತಂಡಗಳು ಗರಿಷ್ಠ 8 ವಿದೇಶಿ ಆಟಗಾರರನ್ನು ಹೊಂದಬಹುದಾಗಿದೆ. ಈ ನಡುವೆ ಬಿಸಿಸಿಐ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅಂತಿಮ 590 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಹ್ಮದಾಬಾದ್ ಮತ್ತು ಲಖನೌ ಸೂಪರ್ ಜಯಂಟ್ಸ್ ಕಣದಲ್ಲಿರುವ ಹೊಸ ತಂಡಗಳಾಗಿವೆ.
ಎಲ್ಲಾ ತಂಡಗಳು ಉತ್ತಮ ಸಮತೋಲನದಿಂದ ಕೂಡಿರುವ ತಂಡ ಕಟ್ಟುವ ಲೆಕ್ಕಾಚಾರ ಹೊಂದಿವೆ. ಅದರಲ್ಲೂ ವಿದೇಶಿ ಬೌಲರ್‌ಗಳ ಕಡೆಗೆ ತಂಡಗಳು ಗಮನ ನೀಡಲಿದ್ದು, ಈ ನಿಟ್ಟಿನಲ್ಲಿ 5 ದುಬಾರಿ ಬೌಲರ್‌ಗಳನ್ನು ಆಕಾಶ್ ಹೆಸರಿಸಿದ್ದಾರೆ.
ಮೆಗಾ ಆಕ್ಷನ್‌ನಲ್ಲಿ ಫಾಫ್‌ಗೆ ಕನಿಷ್ಠ 11 ಕೋಟಿ ರೂ. ಸಿಗಲಿದೆ ಎಂದ ಹಾಗ್!
“ಐದನೇ ಆಯ್ಕೆಯಾಗಿ ಆಸೀಸ್ ವೇಗಿ ಜಾಶ್ ಹೇಝಲ್‌ವುಡ್ ಬಗ್ಗೆ ಮಾತನಾಡಲೇ ಬೇಕು. ಈ ಬೌಲರ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಸಕಲ ಪ್ರಯತ್ನ ಮಾಡಲಿದೆ. ಏಕೆಂದರೆ ಆತ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಬಲ್ಲ ಅತ್ಯಂತ ಭರವಸೆಯ ಬೌಲರ್. ಹಳೇ ಚೆಂಡಿನಲ್ಲಿ ಅವರ ಪ್ರದರ್ಶನ ಹೇಳಿಕೊಳ್ಳುವಂತೆ ಇರದೇ ಇದ್ದರೂ, ಹೊಸ ಚೆಂಡಿನಲ್ಲಿ ತಂಡಕ್ಕೆ ಬಲ ತಂದುಕೊಡಬಲ್ಲರು,” ಎಂದು ಆಕಾಶ್ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹೇಳಿದ್ದಾರೆ.
“ನಾಲ್ಕನೇ ಬೌಲರ್ ಆಗಿ ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯೂಸನ್ ಅವರನ್ನು ಆಯ್ಕೆ ಮಾಡುತ್ತೇನೆ. ನನ್ನ ಪ್ರಕಾರ ಇನಿಂಗ್ಸ್‌ನ ಅಂತ್ಯದ ಓವರ್‌ಗಳಿಗೆ ಈತ ಬೆಸ್ಟ್ ಬೌಲರ್. ರಬಾ, ಬುಮ್ರಾ ಮತ್ತು ಜೊಫ್ರಗೆ ಸರಿಸಮಾನ ಬೌಲರ್ ಈತ. ಆದರೆ ಅವರ ಫಿಟ್ನೆಸ್ ಕೊಂಚ ಕಳವಳಕಾರಿ. ಇದನ್ನು ಹೊರತು ಪಡಿಸಿದರೆ ಟಿ20 ಕ್ರಿಕೆಟ್‌ಗೆ ಆತ ಭರ್ಜರಿ ಬೌಲರ್, ಪ್ರತಿ ತಂಡಗಳು ಅವರ ಖರೀದಿಗೆ ಮುಗಿ ಬೀಳಲಿವೆ,” ಎಂದಿದ್ದಾರೆ.
ನಂತರದ ಸ್ಥಾನಕ್ಕೆ ಶ್ರೀಲಂಕಾದ ಆಲ್‌ರೌಂಡರ್ ವಾನಿಂದು ಹಸರಂಗ ಅವರನ್ನು ಆಯ್ಕೆ ಮಾಡಿದ್ದಾರೆ. ಆಕಾಶ್ ಆಯ್ಕೆಯ ಏಕಮಾತ್ರ ವಿದೇಶಿ ಸ್ಪಿನ್ನರ್ ಕೂಡ. ಚುಟುಕು ಕ್ರಿಕೆಟ್‌ನಲ್ಲಿ ಯಶಸ್ಸು ಗಳಿಸಬಲ್ಲ ಎಲ್ಲ ಸಾಮರ್ಥ್ಯ ಅವರಲ್ಲಿದೆ ಎಂದು ಹೇಳಿದ್ದಾರೆ.
ಈ ಸ್ಟಾರ್ ಪ್ಲೇಯರ್ ಗೋಸ್ಕರ ಆರ್‌ಸಿಬಿ 20 ಕೋಟಿ ಮೀಸಲಿಟ್ಟಿದೆಯಂತೆ!
“ಮೂರನೇ ಸ್ಥಾನದಲ್ಲಿ ವಾನಿಂದು ಹಸರಂಗ ಅವರನ್ನು ಆಯ್ಕೆ ಮಾಡಬಹುದು. ಆಕ್ಷನ್ ಸಲುವಾಗಿ ನಾನೇನಾದರೂ ಅಲ್ಲಿ ಕುಳಿತಿದ್ದರೆ ಈ ಆಟಗಾರನನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ತಂಡಕ್ಕೆ 4 ಗುಣಮಟ್ಟದ ಓವರ್‌ಗಳನ್ನು ಕೊಡಬಲ್ಲ ಬೌಲರ್ ಆತ. ಬೌಲಿಂಗ್ ಜೊತೆಗೆ ಉತ್ತಮ ಫೀಲ್ಡರ್ ಕೂಡ. ಟಿ20 ಕ್ರಿಕೆಟ್‌ನಲ್ಲಿ ಯಶಸ್ಸು ದಕ್ಕಿಸಿಕೊಳ್ಳಬಲ್ಲ ಸಾಮರ್ಥ್ಯ ಅವರಲ್ಲಿದೆ,” ಎಂದು ಶ್ರೀಲಂಕಾ ಬೌಲರ್ ಪರ ಬ್ಯಾಟ್ ಬೀಸಿದ್ದಾರೆ.
ನಾಲ್ಕನೇ ಬೌಲರ್ ಆಗಿ ಕಿವೀಸ್ ಲೆಜೆಂಡ್ ಟ್ರೆಂಟ್ ಬೌಲ್ಟ್ ಅವರನ್ನು ಆಯ್ಕೆ ಮಾಡಿರುವ ಆಕಾಶ್, ಮುಂಬೈ ಇಂಡಿಯನ್ಸ್‌ನ ಮಾಜಿ ವೇಗಿ ಖರೀದಿಗೆ ಫ್ರಾಂಚೈಸಿಗಳು ಮುಗಿ ಬೀಳಲಿವೆ ಎಂದಿದ್ದಾರೆ.
“ಎರಡನೇ ಬೌಲರ್ ಆಗಿ ಟ್ರೆಂಟ್ ಬೌಲ್ಟ್ ಅವರನ್ನು ತೆಗೆದುಕೊಳ್ಳಬಹುದು. ಟ್ರೆಂಟ್ ಸಲುವಾಗಿ ಬಿಡ್ಡಿಂಗ್ ವಾರ್ ನಡೆಯಲಿದೆ. ಹರಾಜಿನಲ್ಲಿ ಪಾಲ್ಗೊಳ್ಳುತ್ತಿರುವ ದಿಗ್ಗಜ ಆಟಗಾರರಲ್ಲಿ ಅವರೂ ಒಬ್ಬರು. ಮುಂಬೈ ಇಂಡಿಯನ್ಸ್ ಅವರ ಸೇವೆ ಮರಳಿ ಪಡೆಯಲು ಶತಪ್ರಯತ್ನ ನಡೆಸಲಿದೆ. ಎಲ್ಲ ತಂಡಗಳಿಗೂ ಟ್ರೆಂಟ್ ಬೇಕಾಗಿದ್ದಾರೆ,” ಎಂದು ಹೇಳಿದ್ದಾರೆ.
‘ಮರಳುವ ಬಗ್ಗೆ ವಿಶ್ವಾಸವಿಲ್ಲ’ ಆರ್‌ಸಿಬಿ ಫ್ಯಾನ್ಸ್‌ಗೆ ಕಹಿ ಸುದ್ದಿ ನೀಡಿದ ಚಹಲ್!
“ಬಹು ಬೇಡಿಕೆಯ ನಂ.1 ಬೌಲರ್ ಆಗಿ ಕಗಿಸೊ ರಬಾಡ ಇದ್ದಾರೆ. ಈ ಹರಾಜು ಪ್ರಕ್ರಿಯೆ ಅವರಿಗೆ ಗೋಲ್ಡನ್ ಚಾನ್ಸ್. ಖಂಡಿತಾ ಅವರಿಗೆ ಭಾರಿ ಮೊತ್ತ ಲಭ್ಯವಾಗಲಿದೆ. ಎಲ್ಲ ಫ್ರಾಂಚೈಸಿಗಳ ಮೊದಲ ಆಯ್ಕೆಯ ವೇಗಿ ಆತ. ಈ ಬಾರಿ ಹರಾಜಿನಲ್ಲಿ ಅತಿ ಹೆಚ್ಚು ಬೆಲೆ ಪಡೆಯಬಲ್ಲ ವಿದೇಶಿ ಬೌಲರ್ ಅವರೇ ಆಗಲಿದ್ದಾರೆ,” ಎಂದಿದ್ದಾರೆ.
ಐಪಿಎಲ್ 2022 ಟೂರ್ನಿ ಭಾರತದಲ್ಲೇ ಆಯೋಜನೆ ಆಗಲಿದ್ದು, ಮಾರ್ಚ್ 27ರಂದು ಶುರುವಾಗುವ ಸಾಧ್ಯತೆ ಇದೆ. ಮಾರ್ಚ್-ಮೇ ಅವಧಿಯಲ್ಲಿ ನಡೆಯಲಿರುವ ಟೂರ್ನಿಯ ಲೀಗ್ ಪಂದ್ಯಗಳನ್ನು ಮಹಾರಾಷ್ಟ್ರದಲ್ಲಿ, ನಾಕ್‌ಔಟ್ ಪಂದ್ಯಗಳನ್ನು ಅಹ್ಮದಾಬಾದ್‌ನಲ್ಲಿ ಆಯೋಜಿಸಲು ಬಿಸಿಸಿಐ ಆಲೋಚಿಸಿದೆ.
Read more
[wpas_products keywords=”deal of the day gym”]