ಈ ಕುರಿತು ಒವೈಸಿ ಟ್ವೀಟ್ ಮಾಡಿದ್ದು, ‘ಕೆಲವು ಸಮಯದ ಹಿಂದೆ ಛಿಜರ್ಸಿ ಟೋಲ್ ಗೇಟ್‌ನಲ್ಲಿ ನನ್ನ ಕಾರಿನ ಮೇಲೆ ಗುಂಡು ಹಾರಿಸಲಾಯಿತು. 4 ಸುತ್ತು ಗುಂಡು ಹಾರಿಸಲಾಗಿದೆ. ಅಲ್ಲಿ 3ರಿಂದ 4 ಜನ ಇದ್ದರು, ಎಲ್ಲರೂ ತಮ್ಮ ಆಯುಧಗಳನ್ನು ಅಲ್ಲೇ ಬಿಟ್ಟು ಓಡಿ ಹೋದರು. ನನ್ನ ಕಾರು ಪಂಕ್ಚರ್ ಆಯಿತು. ನಂತರ ನಾನು ಇನ್ನೊಂದು ಕಾರಿನಲ್ಲಿ ಕುಳಿತು ಅಲ್ಲಿಂದ ಹೊರಬಂದೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಅಲ್ಹಮ್ದುಲಿಲ್ಲಾ.’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ನಾನು ಮೀರತ್‌ನ ಕಿಥೋರ್‌ನಲ್ಲಿ ಚುನಾವಣಾ ಕಾರ್ಯಕ್ರಮದ ನಂತರ ದೆಹಲಿಗೆ ತೆರಳುತ್ತಿದ್ದೆ. ಛಿಜರ್ಸಿ ಟೋಲ್ ಪ್ಲಾಜಾ ಬಳಿ ಇಬ್ಬರು ನನ್ನ ಕಾರಿನ ಮೇಲೆ 3 ರಿಂದ 4 ಸುತ್ತು ಗುಂಡು ಹಾರಿಸಿದರು. ಅವರು ಒಟ್ಟು 3 ರಿಂದ 4 ಜನರಿದ್ದರು. ಇದರಿಂದಾಗಿ ನನ್ನ ಕಾರಿನ ಟೈರ್‌ಗಳು ಪಂಕ್ಚರ್ ಆದವು ಎಂದು ಓವೈಸಿ ಹೇಳಿರುವುದಾಗಿದೆ ANI ವರದಿ ಮಾಡಿದೆ.
ಓವೈಸಿ ದೆಹಲಿಗೆ ಹೊರಟು ಛಿಜರ್ಸಿ ಟೋಲ್ ಪ್ಲಾಜಾ ತಲುಪಿದ ಸಂದರ್ಭದಲ್ಲಿ ಅವರ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ಕೂಡಲೇ ಮೂರ್ನಾಲ್ಕು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಓವೈಸಿ ಅವರ ಕಾರಿನಲ್ಲೂ ಬುಲೆಟ್ ಗುರುತುಗಳಿವೆ. ಬೆಂಗಾವಲು ಪಡೆಯ ಒಂದು ಅಥವಾ ಎರಡು ವಾಹನಗಳು ಪಂಕ್ಚರ್ ಆಗಿವೆ ಎಂದು ಹೇಳಲಾಗುತ್ತಿದೆ.
ಓವೈಸಿ ಬೆಂಗಾವಲು ಪಡೆ ಮೇಲೆ ನಡೆದ ದಾಳಿಯ ಸುದ್ದಿ ಕೇಳಿ ಉತ್ತರ ಪ್ರದೇಶ ಪೊಲೀಸರು ಅಲರ್ಟ್ ಆಗಿದ್ದಾರೆ. ಪೊಲೀಸರು ಛಿಜರ್ಸಿ ಟೋಲ್ ಪ್ಲಾಜಾದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ಆರಂಭಿಸಿದ್ದಾರೆ. ಬೆಂಗಾವಲು ಪಡೆಯೊಂದಿಗೆ ಬರುತ್ತಿದ್ದ ಎರಡು ವಾಹನಗಳು ಇನ್ನೂ ಟೋಲ್‌ನಲ್ಲಿಯೇ ಇವೆ.
Read more
[wpas_products keywords=”deal of the day sale today offer all”]