Karnataka news paper

ಕೊರೊನಾ ಡಬಲ್ ಡೋಸ್ ಲಸಿಕೆ ನೀಡಿಕೆಯಲ್ಲಿ 100% ಸಾಧನೆ..! ಬೆಂಗಳೂರು ಗ್ರಾಮಾಂತರ ಜಿಲ್ಲೆ ರಾಜ್ಯದಲ್ಲೇ ಪ್ರಥಮ..!


ಬೆಂಗಳೂರು ಗ್ರಾಮಾಂತರ: ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಪರಿಣಾಮಕಾರಿಯಾಗಿ ಲಸಿಕೆ ನೀಡುವಿಕೆಯಲ್ಲಿ ಬೆಂಗಳೂರು ಗ್ರಾಮಾತರ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಮೊದಲ ಹಾಗೂ ಎರಡನೇ ಡೋಸ್‌ ಲಸಿಕೆ ನೀಡುವಿಕೆಯಲ್ಲಿ ಶೇ. 100 ರಷ್ಟು ಗುರಿ ಸಾಧಿಸಿದ ರಾಜ್ಯದ ಮೊದಲ ಜಿಲ್ಲೆಯಾಗಿ ಹೊರಹೊಮ್ಮಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ವರ್ಷಾರಂಭದಲ್ಲಿ ಆರಂಭಗೊಂಡ ಲಸಿಕಾ ವಿತರಣೆ ಆರಂಭದಲ್ಲಿ ನಿಧಾನಗತಿಯಲ್ಲಿ ಸಾಗಿತ್ತು. ನಂತರ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಸತತ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ 8,68,882 ವಯಸ್ಕರಿಗೆ ಲಸಿಕೆ ನೀಡಲಾಗಿದ್ದು, 819,915 ಜನರಿಗೆ ಎರಡನೇ ಡೋಸ್‌ ನೀಡುವುದರೊಂದಿಗೆ ಶೇ.100ರಷ್ಟು ಲಸಿಕೆ ವಿತರಣೆ ಮಾಡಿದೆ.

17 ಲಕ್ಷ ಡೋಸ್‌ ಲಸಿಕೆ: ಜಿಲ್ಲೆಯ 4 ತಾಲೂಕುಗಳಲ್ಲಿ ಲಸಿಕೆ ವಿತರಣೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಈವರೆಗೆ ಜಿಲ್ಲೆಯಲ್ಲಿ 8,65,887 ಮಂದಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ. ಜತೆಗೆ 8,19,914 ಮಂದಿಗೆ ಎರಡನೆಯ ಡೋಸ್‌ ಲಸಿಕೆ ಹಂಚಿಕೆ ಮಾಡಲಾಗಿದೆ. ಕೆಲವರು ಇತರೆ ಜಿಲ್ಲೆಗಳಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಾದ್ಯಂತ ಒಟ್ಟು 17,01,213 ಡೋಸ್‌ ಲಸಿಕೆಯನ್ನು ನೀಡಲಾಗಿದೆ.

ಎಲ್ಲರಿಗೂ ಓಮಿಕ್ರಾನ್ ತಗುಲುವುದು ನಿಶ್ಚಿತ, ಅದನ್ನು ಬೂಸ್ಟರ್ ಡೋಸ್ ತಡೆಯಲಾರದು: ತಜ್ಞರ ಅಭಿಮತ
ಮಕ್ಕಳ ಲಸಿಕೆ ಪ್ರಗತಿ: 15 ರಿಂದ 17 ವರ್ಷದ ಮಕ್ಕಳಿಗೆ ಲಸಿಕೆ ವಿತರಣೆ ಕಾರ್ಯ ಭರದಿಂದ ಸಾಗಿದೆ. ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಲಸಿಕೆ ವಿತರಿಸಲಾಗುತ್ತಿದೆ. ಶಾಲೆ ಬಿಟ್ಟ ಮಕ್ಕಳಿಗೆ ಲಸಿಕೆ ನೀಡಲು ಗ್ರಾಪಂ ಮಟ್ಟದಲ್ಲಿ ಕ್ರಮ ವಹಿಸಲಾಗಿದೆ. ಈ ಮೂಲಕ ಜಿಲ್ಲೆಯ 38,009 ಮಂದಿ ಮಕ್ಕಳಿಗೆ ಮೊದಲ ಡೋಸ್‌ ಹಾಗೂ 327 ಮಂದಿ ಮಕ್ಕಳಿಗೆ ಎರಡನೆಯ ಡೋಸ್‌ ಲಸಿಕೆ ನೀಡಲಾಗಿದೆ. ಈ ಮೂಲಕ ಶೇ.79ರಷ್ಟು ಮಕ್ಕಳ ಲಸಿಕಾ ವಿತರಣೆ ಪ್ರಗತಿಯಲ್ಲಿದೆ.

ಬೂಸ್ಟರ್ ಡೋಸ್‌ ವಿತರಣೆ: ಕೋವಿಡ್‌ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಸಿಬ್ಬಂದಿಗಳು, ಫ್ರೆಂಟ್‌ಲೈನ್‌ ವರ್ಕರ್‌, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಲಸಿಕೆ ನೀಡಲು ಸರಕಾರ ಮುಂದಾಗಿದೆ. ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ 6,027 ಮಂದಿ ಹಿರಿಯ ನಾಗರಿಕರಿಗೆ ಈಗಾಗಲೇ ಬೂಸ್ಟರ್‌ ಲಸಿಕೆ ನೀಡಲಾಗಿದೆ.

ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗುವವರಲ್ಲಿ ಲಸಿಕೆ ಪಡೆದವರೇ ಹೆಚ್ಚು : ಬಿಬಿಎಂಪಿ ಅಂಕಿ-ಅಂಶಗಳಿಂದ ದೃಢ
ಸತತ ಪ್ರಯತ್ನ: ಲಸಿಕೆ ವಿತರಣೆಯನ್ನು ಯಶಸ್ವಿಯಾಗಿಸಲು ಜಿಲ್ಲೆಯಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸರ್ಕಸ್‌ ಮಾಡಬೇಕಿತ್ತು. ಲಸಿಕೆಗೆ ಆರಂಭದಲ್ಲಿ ಜನರು ನಿರಾಸಕ್ತಿ ತೋರಿದರು. ನಂತರ ಎರಡನೇ ಅಲೆಯ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪಡೆಯಲು ಮುಂದಾದರು. ನಂತರದಲ್ಲಿ ಎರಡನೆಯ ಡೋಸ್‌ ಲಸಿಕೆ ಪಡೆಯಲು ಜನರು ನಿರ್ಲಕ್ಷ್ಯ ಮುಂದುವರಿಸಿದರು. ಇದರಿಂದ ಸಾಲು ಸಾಲು ಮೇಳ, ಅರಿವಿನ ಮೂಲಕ ಲಸಿಕೆ ವಿತರಣೆಯನ್ನು ಹಂತ ಹಂತವಾಗಿ ಯಶಸ್ವಿಯಾಗಿ ಜಿಲ್ಲೆಯ ನಡೆಸಲಾಯಿತು.

‘ಜಿಲ್ಲೆಯಲ್ಲಿ ಮೊದಲ ಹಾಗೂ ಎರಡನೇ ಡೋಸ್‌ ಲಸಿಕೆಯನ್ನು ಶೇ.100 ರಷ್ಟು ವಿತರಿಸಲಾಗಿದೆ. ಮಕ್ಕಳ ಲಸಿಕೆ ಪ್ರಗತಿಯಲ್ಲಿದ್ದು ಆದಷ್ಟು ಬೇಗ ಅದು ಕೂಡ ಪೂರ್ಣಗೊಳ್ಳಲಿದೆ’ ಎಂದು ಬೆಂಗಳೂರು ಗ್ರಾಮಾಂತರ ಡಿಎಚ್‌ಒ ಡಾ. ತಿಪ್ಪೇಸ್ವಾಮಿ ಮಾಹಿತಿ ನೀಡಿದ್ದಾರೆ.

ಕೋವಿಡ್ ಲಸಿಕಾಕರಣದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ: ಸಚಿವ ಸುಧಾಕರ್‌



Read more

[wpas_products keywords=”deal of the day sale today offer all”]