Karnataka news paper

ಎಂಡಿಂಗ್‌ ಥಿಂಗ್ಸ್‌: ಆ್ಯಕ್ಷನ್‌ ಚಿತ್ರದಲ್ಲಿ ಮ್ಯಾಕಿ ಜೊತೆ ಪ್ರಿಯಾಂಕಾ ಚೋಪ್ರಾ


ಲಾಸ್‌ ಏಂಜಲ್ಸ್‌: ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕದ ನಟ ಆ್ಯಂಟನಿ ಮ್ಯಾಕಿ ಅವರು ಮುಂಬರುವ ಆ್ಯಕ್ಷನ್‌ ಸಿನಿಮಾ ‘ಎಂಡಿಂಗ್‌ ಥಿಂಗ್ಸ್‌’ನಲ್ಲಿ ನಟಿಸಲಿದ್ದಾರೆ.

ಕಥೆ ಮತ್ತು ನಿರ್ದೇಶನ ಕೆವಿನ್‌ ಸುಲ್ಲಿವನ್‌ ಅವರದ್ದಾಗಿದೆ ಎಂದು ‘ಡೆಡ್‌ಲೈನ್‌.ಕಾಮ್‌’ ವರದಿ ಮಾಡಿದೆ. ಜೇಮ್ಸ್‌ ಕ್ಯಾಮೆರೂನ್‌ ಅವರ 1994ರ ಆ್ಯಕ್ಷನ್‌-ಕಾಮಿಡಿ ಚಿತ್ರ ‘ಟ್ರೂ ಲೈಸ್‌’ ಮಾದರಿಯ ಸಿನಿಮಾ ಇದಾಗಿದೆ.

ಹಂತಕ ಉದ್ಯಮದಲ್ಲಿ ತೊಡಗಿಸಿಕೊಂಡ ಮಹಿಳೆ ತನ್ನ ಜೊತೆಗಾರನಿಗೆ ತಮ್ಮ ವೈಯಕ್ತಿಕ ಸಂಬಂಧವನ್ನು ಕೊನೆಗೊಳಿಸಲು ಮುಂದಾಗುವ ಕಥೆ ಚಿತ್ರದಲ್ಲಿದೆ ಎನ್ನಲಾಗಿದೆ. ಆದರೆ ಆಕೆಗೆ ತಮ್ಮ ಸಂಬಂಧವನ್ನು ಮುರಿಯಲು ಸಾಧ್ಯವಿಲ್ಲ ಎಂಬುದು ಅರಿವಾಗುತ್ತದೆ. ಒಂದೆಡೆ ತಮ್ಮ ಸಂಬಂಧವನ್ನು ಮೊದಲಿನಂತೆ ಉಳಿಸಿಕೊಳ್ಳುವುದು ಹಾಗೂ ಕೊನೆಯ ಕಾರ್ಯಾಚರಣೆಯೊಂದರಲ್ಲಿ ಜೊತೆಯಾಗಿ ಪಾಲ್ಗೊಳ್ಳುವುದು ಚಿತ್ರದ ಪ್ರಮುಖ ಅಂಶವಾಗಿದೆ.

ಡೆವಿಸ್‌ ಎಂಟರ್‌ಟೈನ್‌ಮೆಂಟ್‌ ಮತ್ತು ಲಿಟ್‌ ಎಂಟರ್‌ಟೈನ್‌ಮೆಂಟ್‌ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ.

ಚೋಪ್ರಾ ಇತ್ತೀಚೆಗೆ ‘ದಿ ಮ್ಯಾಟ್ರಿಕ್ಸ್‌ ರಿಸರೆಕ್ಷನ್ಸ್‌’ ಮತ್ತು ರೊಮ್ಯಾಂಟಿಕ್‌ ಕಾಮಿಡಿ ಚಿತ್ರ ‘ಟೆಕ್ಸ್ಟ್‌ ಫಾರ್‌ ಯು’ನಲ್ಲಿ ಕಾಣಿಸಿಕೊಂಡಿದ್ದರು. ಎಜಿಬಿಒ ಅಮೆಜಾನ್‌ ಲಿಮಿಟೆಡ್‌ನ ಸರಣಿ ‘ಸಿಟಡೆಲ್‌’ನಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಮ್ಯಾಕಿ ಅವರು ‘ದಿ ಫಾಲ್ಕನ್‌ ಆ್ಯಂಡ್‌ ದಿ ವಿಂಟರ್‌ ಸೋಲ್ಜರ್‌’ ಸರಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.



Read More…Source link

[wpas_products keywords=”deal of the day party wear for men wedding shirt”]