Source : Online Desk
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾದ ಸಾಮಿ ಸಾಮಿ ಹಾಡು ಇತ್ತೀಚೆಗೆ ಸಖತ್ ಫೇಮಸ್ ಆಗಿದೆ. ಇದರಲ್ಲಿ ಲಂಗ ದಾವಣಿ ತೊಟ್ಟ ರಶ್ಮಿಕಾ ಇದೀಗ ಮಾಡ್ರನ್ ಡ್ರೆಸ್ ತೊಟ್ಟು ಇದೇ ಹಾಡಿಗೆ ಕುಣಿದಿದ್ದಾರೆ.
ಅಲ್ಲು ಅರ್ಜುನ್ ಅಭಿನಯಿಸಿರುವ ಹಾಡಿನ ಸಿಗ್ನೇಚರ್ ಸ್ಟೆಪ್ ಹಾಕಿರುವ ವೀಡಿಯೊವನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ “ನಿಮ್ಮಲ್ಲಿ ಅನೇಕರು ಸಾಮಿ ಸಾಮಿ ಹಾಡಿಗೆ ರೀಲ್ ಮಾಡುವುದನ್ನು ನಾನು ನೋಡಿದ್ದೇನೆ ಮತ್ತು ನಾನು ಕೂಡ ನಿಮ್ಮ ಗುಂಪಿಗೆ ಸೇರಲು ಇಚ್ಛಿಸುತ್ತೇನೆ. ಹಾಗಾಗಿ ನಾನು ಕೂಡ ಒಂದು ರೀಲ್ ಮಾಡಿದ್ದೇನೆ. ನಿಮ್ಮಲ್ಲಿ ಇನ್ನೂ ಅನೇಕರು ಈ ಹಾಡಿಗೆ ರೀಲ್ ಮಾಡುವ ಮೂಲಕ ನಮ್ಮ ಸಮೂಹಕ್ಕೆ ಸೇರಿಕೊಳ್ಳುತ್ತೀರಾ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಸಮಂತಾ ಡ್ಯಾನ್ಸ್ ನಂಬರ್ ಗೆ ಪುರುಷರ ಸಂಘ ಆಕ್ಷೇಪ: ‘ಪುಷ್ಪ’ ಸಿನಿಮಾದ ಡ್ಯಾನ್ ನಂಬರ್ ನಿಷೇಧಿಸುವಂತೆ ಪ್ರಕರಣ ದಾಖಲು
ಸಾಮಿ ಸಾಮಿಯನ್ನು ರಾಜಲಕ್ಷ್ಮಿ ಸೆಂಥಿಗಣೇಶ್ ಹಾಡಿದ್ದಾರೆ ಮತ್ತು ವಿವೇಕ ಅವರ ಸಾಹಿತ್ಯ ಮತ್ತು ದೇವಿ ಶ್ರೀ ಪ್ರಸಾದ್ ಸಂಗೀತವಿದೆ. ಈ ಸಿನಿಮಾವು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದ ಶೇಷಚಲಂ ಬೆಟ್ಟಗಳಲ್ಲಿ ನಡೆಯುತ್ತಿರುವ ಕೆಂಪು ಮರಳು ಕಳ್ಳಸಾಗಣೆ ಕಥೆಯ ಹಂದರ ಹೊಂದಿದೆ.
ಈ ಸಿನಿಮಾವನ್ನು ಸುಕುಮಾರ್ ನಿರ್ದೇಶಿಸಿದ್ದು, ಮುತ್ತಂಶೆಟ್ಟಿ ಮೀಡಿಯಾ ಸಹಯೋಗದಲ್ಲಿ ಮೈತ್ರಿ ಮೂವೀ ಮೇಕರ್ಸ್ ಸಿನಿಮಾ ನಿರ್ಮಾಣ ಮಾಡಿದೆ.
ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪುಷ್ಪ ಸಿನಿಮಾವು ಡಿಸೆಂಬರ್ 17 ರಂದು ತೆಲುಗು, ಮಲಯಾಳಂ, ತಮಿಳು, ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.