Karnataka news paper

ದೆಹಲಿಯ ಮನೆಯನ್ನು ₹23 ಕೋಟಿಗೆ ಮಾರಾಟ ಮಾಡಿದ ಅಮಿತಾಭ್ ಬಚ್ಚನ್


ಬೆಂಗಳೂರು: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್, ತಮ್ಮ ದೆಹಲಿ ಮನೆಯನ್ನು ಮಾರಾಟ ಮಾಡಿದ್ದಾರೆ.

ದಕ್ಷಿಣ ದೆಹಲಿಯ ಗುಲ್‌ಮೊಹರ್ ಪಾರ್ಕ್‌ನಲ್ಲಿದ್ದ ‘ಸೋಪಾನ್‘ ಹೆಸರಿನ ಮನೆಯನ್ನು ಅಮಿತಾಭ್ ₹23 ಕೋಟಿಗೆ ಮಾರಾಟ ಮಾಡಿದ್ದಾರೆ.

ಅಮಿತಾಭ್ ಬಚ್ಚನ್ ಅವರ ತಂದೆ, ಪ್ರಸಿದ್ಧ ಕವಿ ಹರಿವಂಶ್ ರಾಯ್ ಬಚ್ಚನ್ ಮತ್ತು ತಾಯಿ ತೇಜಿ ಬಚ್ಚನ್ ಅವರು ಈ ಮನೆಯಲ್ಲಿ ಬಹಳಷ್ಟು ಸಮಯ ವಾಸವಿದ್ದರು.

ಹರಿವಂಶ್ ರಾಯ್ ಅವರು ಇದೇ ಮನೆಯಲ್ಲಿ ಕವಿಗೋಷ್ಠಿಗಳನ್ನು ಕೂಡ ಆಯೋಜಿಸುತ್ತಿದ್ದರು. ಎರಡು ಅಂತಸ್ತಿನ ಮನೆ ಇದಾಗಿದ್ದು, ಅಮಿತಾಭ್ ಅವರ ತಾಯಿಯ ಹೆಸರಿನಲ್ಲಿ ನೋಂದಣಿಯಾಗಿತ್ತು.

ಮೂಲಗಳ ಪ್ರಕಾರ, ನೆಝೋನ್‌ ಗ್ರೂಪ್‌ ಸಿಇಒ ಅವನಿ ಬಾದೆರ್ ಈ ಮನೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ.



Read More…Source link

[wpas_products keywords=”deal of the day party wear for men wedding shirt”]