
ಹೌದು, ಟೆಲಿಗ್ರಾಮ್‌ನ ಫೀಚರ್ಸ್‌ಗಳಲ್ಲಿ ಟ್ರಾನ್ಸಲೇಶನ್ ಫೀಚರ್ಸ್ ಪ್ರಮುಖವಾಗಿದೆ. ಇದರಿಂದ ಬಳಕೆದಾರರು ತಮ್ಮ ಆಯ್ಕೆಯ ಭಾಷೆಗೆ ಸಂದೇಶ ಪಠ್ಯವನ್ನು ಭಾಷಾಂತರಿಸಲು ಸಾಧ್ಯವಾಗಲಿದೆ. ಇದು ಕ್ಲೌಡ್-ಆಧಾರಿತ IM ಸೇವೆಗೆ ಪ್ರತ್ಯೇಕತೆಯನ್ನು ನೀಡುತ್ತದೆ. ಅಲ್ಲದೆ ನಿಮಗೆ ಗೊತ್ತಿಲ್ಲದ ಭಾಷೆಯಿಂದ ಸಂದೇಶವನ್ನು ಸ್ವೀಕರಿಸಿದ್ದರು ಕೂಡ ಅದನ್ನು ನಿಮ್ಮ ಭಾಷೆಗೆ ಇದು ಅನುವಾದ ಮಾಡಲಿದೆ. ಇದರಿಂದ ಸಂದೇಶವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಾಗಲಿದೆ. ಹಾಗಾದ್ರೆ ಟೆಲಿಗ್ರಾಮ್‌ನಲ್ಲಿ ಟ್ರಾನ್ಸಲೇಶನ್ ಫೀಚರ್ಸ್ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್‌ನಲ್ಲಿ ಟ್ರಾನ್ಸಲೇಶನ್ ಫೀಚರ್ಸ್ ಅನ್ನು ಬಳಸುವುದು ಹೇಗೆ?
ಹಂತ:1 ಮೊದಲಿಗೆ ನಿಮ್ಮ ಫೋನ್‌ನಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್ ತೆರೆಯಿರಿ
ಹಂತ:2 ನಂತರ ಹ್ಯಾಂಬರ್ಗರ್ ಐಕಾನ್ ಅನ್ನು ಆಯ್ಕೆ ಮಾಡಿ
ಹಂತ:3 ಅದರ ಮೇಲೆ ಟ್ಯಾಪ್ ಮಾಡುವುದರಿಂದ ಸೆಟ್ಟಿಂಗ್‌ಗಳ ಮೆನು ತೆರೆಯುತ್ತದೆ.
ಹಂತ:4 ಸೆಟ್ಟಿಂಗ್‌ಗಳಲ್ಲಿ ಭಾಷಾ ಆಯ್ಕೆಯನ್ನು ಆರಿಸಿ, ಮತ್ತು ಪ್ಲಾಟ್‌ಫಾರ್ಮ್ ಬೆಂಬಲಿಸುವ ಭಾಷೆಗಳ ಪಟ್ಟಿಯನ್ನು ಕಾಣಬಹುದು.
ಹಂತ:5 ಲ್ಯಾಂಗ್ವೇಜ್ ಮೆನುವಿನ ಮೇಲ್ಭಾಗದಲ್ಲಿ ನೀವು ‘ಶೋ ಟ್ರಾನ್ಸಲೇಶನ್ ಬಟನ್ ‘ ಕಾಣಲಿದೆ
ಹಂತ:6 ಇದನ್ನು ಆನ್ ಮಾಡಲು ಟಾಗಲ್ ಅನ್ನು ಟ್ಯಾಪ್ ಮಾಡಿ.
ಹಂತ:7 ಟ್ರಾನ್ಸಲೇಶನ್ ಫೀಚರ್ಸ್ ಅನ್ನು ಆಕ್ಟಿವ್ ಮಾಡಿದ ನಂತರ, ಹೊಸ ಆಯ್ಕೆಯು ಪಾಪ್ ಅಪ್ ಆಗುತ್ತದೆ.
ಹಂತ:8 ಈಗ ಯಾವುದೇ ವೈಯಕ್ತಿಕ ಅಥವಾ ಗುಂಪು ಚಾಟ್ ತೆರೆಯಿರಿ ಮತ್ತು ನೀವು ಪಾಪ್-ಅಪ್ ಮೆನುವಿನಲ್ಲಿ ‘ಅನುವಾದ’ ಆಯ್ಕೆಯನ್ನು ನೋಡಲು ಸಾಧ್ಯವಾಗುತ್ತದೆ.
ಹಂತ:9 ಅನುವಾದದ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಸಂದೇಶವನ್ನು ನಂತರ ಟೆಲಿಗ್ರಾಮ್‌ನ ಡೀಫಾಲ್ಟ್ ಭಾಷೆಗೆ ಅನುವಾದಿಸಲಾಗುತ್ತದೆ.
ಪ್ರಸ್ತುತ, ಟೆಲಿಗ್ರಾಮ್ ಅಪ್ಲಿಕೇಶನ್ ಕೆಲವು ಭಾಷೆಗಳನ್ನು ಮಾತ್ರ ಬೆಂಬಲಿಸುತ್ತದೆ.

ಇದಲ್ಲದೆ ಟೆಲಿಗ್ರಾಮ್ ಇದೀಗ ತನ್ನ ಹೊಸ 8.5 ಅಪ್ಡೇಟ್ ಅನ್ನು ಪರಿಚಯಿಸಿದೆ. ಈ ಹೊಸ ಅಪ್ಡೇಟ್‌ನ ವಿಶೇಷತೆ ಎಂದರೆ ವೀಡಿಯೊ ಸ್ಟಿಕ್ಕರ್‌ಗಳು. ಇದರಿಂದ ನೀವು ವೀಡಿಯೋ ಸ್ಟಿಕ್ಕರ್‌ಗಳನ್ನು ನೇರವಾಗಿ ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿಯೇ ಶೇರ್ ಮಾಡಬಹುದು. ಬಳಕೆದಾರರು ಇದೀಗ ವೀಡಿಯೊಗಳನ್ನು ಅಪ್ಲಿಕೇಶನ್‌ಗೆ ಸ್ಟಿಕ್ಕರ್‌ಗಳಾಗಿ ಆಮದು ಮಾಡಿಕೊಳ್ಳಬಹುದು. ಆಮದು ಮಾಡಿಕೊಂಡ ವೀಡಿಯೋ ಸ್ಟಿಕ್ಕರ್‌ಗಳನ್ನು ವೈಯಕ್ತಿಕ ಮತ್ತು ಗ್ರೂಪ್ ಚಾಟ್‌ಗಳಲ್ಲಿ ಶೇರ್ ಮಾಡಬಹುದು. WEBM ಫೈಲ್‌ನಂತೆ ವೀಡಿಯೊವನ್ನು ರಫ್ತು ಮಾಡಲು ನಿಮಗೆ ಅನುಮತಿಸುವ ಎಡಿಟಿಂಗ್ ಸಾಫ್ಟ್‌ವೇರ್ ಅಗತ್ಯವಿರುವುದರಿಂದ ಕೆಲವು ಎಡಿಟ್ ಅಗತ್ಯವಿದೆ. ಆದರಿಂದ ಟೆಲಿಗ್ರಾಮ್ ಆರಂಭಿಕರಿಗಾಗಿ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಪ್ರಕ್ರಿಯೆಯ ವಿವರವನ್ನು ನೀಡಿದೆ.

ಇದಲ್ಲದೆ ತನ್ನ ಹೊಸ ಅಪ್ಡೇಟ್ ಜೊತೆಗೆ ಟೆಲಿಗ್ರಾಮ್ ಇತರ ಬದಲಾವಣೆಗಳನ್ನು ಸಹ ಪರಿಚಯಿಸಿದೆ. ಹಿಂದಿನ ಚಾಟ್‌ಗೆ ತ್ವರಿತವಾಗಿ ಹೋಗಲು ಬಳಕೆದಾರರು ಈಗ ಹಿಂದೆ ಬಟನ್ ಅನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಅವಕಾಶ ನೀಡಿದೆ. ಕರೆಗಳ ಗುಣಮಟ್ಟವನ್ನು ಸುಧಾರಿಸಲಾಗಿದೆ. ಅಲ್ಲದೆ ಮೌನ ಸಂದೇಶಗಳನ್ನು ಕಳುಹಿಸುವುದನ್ನು ಈಗ ಹಂಚಿಕೆ ಮೆನುವಿನಿಂದ ನೇರವಾಗಿ ಸಕ್ರಿಯಗೊಳಿಸಲಾಗಿದೆ. ಹಾಗೆಯೇ ಚಾಟ್‌ಗಳ ಮೂಲಕ ನ್ಯಾವಿಗೇಟ್ ಮಾಡುವಾಗ, ಹಿಂದಿನ ಚಾಟ್‌ಗೆ ತ್ವರಿತವಾಗಿ ನೆಗೆಯಲು ನೀವು ಈಗ ಬ್ಯಾಕ್ ಬಟನ್ ಅನ್ನು ಹಿಡಿದಿಟ್ಟುಕೊಳ್ಳಬಹುದು.
Read more…
[wpas_products keywords=”smartphones under 15000 6gb ram”]