Karnataka news paper

1.60 ಕ್ವಿಂಟಾಲ್ ಅಕ್ರಮ ಗೋಮಾಂಸ ಸಾಗಾಟ: ನಾಲ್ವರನ್ನು ಬಂಧಿಸಿದ ಮಂಗಳೂರು ಪೊಲೀಸರು


ಮಂಗಳೂರು: ಕಾಸರಗೋಡು ಕಡೆಯಿಂದ ಉಳ್ಳಾಲಕ್ಕೆ ಮಾರುತಿ ಈಕೋ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 1.60 ಕ್ವಿಂಟಾಲ್ ದನದ ಮಾಂಸವನ್ನು ಮಂಗಳೂರು ಪೊಲೀಸರು ಪತ್ತೆ ಹಚ್ಚಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಸರಗೋಡು ತಾಲೂಕು ಬಂದ್ಯೋಡು ಎಂಬಲ್ಲಿನ ಮೊಹಮ್ಮದ್ ಎಂಬವರಿಂದ ದನವನ್ನು ಖರೀದಿಸಿ ಅವರ ಮನೆಯಲ್ಲೇ ದನವನ್ನು ಕಡಿದು ಮಾಂಸ ಮಾಡಿ ಉಳ್ಳಾಲಕ್ಕೆ ತಂದು ಯುಸಿ ಇಬ್ರಾಹಿಂ ಕೋಡಿ ಎಂಬವರ ಕೋಡಿ ಮತ್ತು ಮುಕ್ಕಚ್ಚೇರಿಯಲ್ಲಿರುವ ಬೀಫ್ ಸ್ಟಾಲ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಪೊಲೀಸರು ದಾಳಿ ನಡೆಸಿದ ವೇಳೆ ಈಕೋ ಕಾರಿನಲ್ಲಿ ದನದ ಮಾಂಸ, ಮೂರು ತಲೆಗಳು ಮತ್ತು ದನದ ಚರ್ಮಗಳು ಪತ್ತೆಯಾಗಿದೆ.
ಹಾವೇರಿಯಿಂದ ಶಿರಸಿಗೆ 250 ಕೆ.ಜಿ ಎಮ್ಮೆ ಮಾಂಸ ಸಾಗಾಟ; ಮೂವರು ವಶಕ್ಕೆ!
ಬಂಧಿತ ಆರೋಪಿಗಳನ್ನು ಪೆರ್ಮನ್ನೂರು ಚೆಂಬುಗುಡ್ಡೆ ನಿವಾಸಿ ಹುಸೇನ್ (24), ಉಳ್ಳಾಲ ಮಂಜಿಲ್ ಕೋಡಿ ನಿವಾಸಿಗಳಾದ ಮಹಮ್ಮದ್ ಮುಜಾಂಬಿಲ್ (25), ಮಹಮ್ಮದ್ ಅಮೀನ್ (21) ಹಾಗೂ ಉಳ್ಳಾಲ ಕೋಡಿಯ ಸೋಹೈಬ್ ಅಕ್ತರ್ (22) ಎಂದು ಗುರುತಿಸಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಅಂದಾಜು ರೂಪಾಯಿ 3.10 ಲಕ್ಷ ಆಗಿರುತ್ತದೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Read more

[wpas_products keywords=”deal of the day sale today offer all”]