Karnataka news paper

Unemployment: ಭಾರತದ ನಿರುದ್ಯೋಗ ಪ್ರಮಾಣ ಶೇ 6.57ಕ್ಕೆ ಇಳಿಕೆ: ಸಿಎಂಐಇ ವರದಿ


ಹೊಸದಿಲ್ಲಿ: ಭಾರತದ ನಿರುದ್ಯೋಗ ಪ್ರಮಾಣ ಜನವರಿ ತಿಂಗಳಲ್ಲಿ ಶೇ 6.57ಕ್ಕೆ ಕುಸಿತ ಕಂಡಿದೆ. ಇದು 2021ರ ಮಾರ್ಚ್‌ನಿಂದ ಅತ್ಯಂತ ಕಡಿಮೆ ಪ್ರಮಾಣವಾಗಿದೆ. ಕೋವಿಡ್ 19 ಓಮಿಕ್ರಾನ್ ಪ್ರಕರಣಗಳ ಇಳಿಕೆ ಹಿನ್ನೆಲೆಯಲ್ಲಿ ನಿರ್ಬಂಧಗಳು ಸಡಿಲಿಕೆಯಾಗುತ್ತಿದ್ದು, ದೇಶ ಕ್ರಮೇಣ ಚೇತರಿಕೆ ಹಾದಿಯಲ್ಲಿದೆ ಎಂದು ಸಿಎಂಐಇ ತಿಳಿಸಿದೆ.

ನಗರದ ಭಾರತದಲ್ಲಿ ನಿರುದ್ಯೋಗ ದರ ಶೇ 8.16ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಶೇ 5.84ರಷ್ಟಿದೆ. ಇದು ಅತ್ಯಂತ ಕಡಿಮೆ ಪ್ರಮಾಣವಾಗಿದೆ ಎಂದು ಸ್ವತಂತ್ರ ಚಿಂತಕರ ಚಾವಡಿ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಹೇಳಿದೆ.
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿದ್ದಿರಿ, ಆದರೆ ಆಗಿರುವುದು ಎಷ್ಟು?: ಖರ್ಗೆ ಪ್ರಶ್ನೆ

ಡಿಸೆಂಬರ್‌ ತಿಂಗಳಲ್ಲಿ ನಿರುದ್ಯೋಗ ದರ ಶೇ 7.91ರಷ್ಟಿತ್ತು. ನಗರ ಪ್ರದೇಶಗಳಲ್ಲಿ ಅದು ಶೇ 9.30ರಷ್ಟಿದ್ದರೆ, ಗ್ರಾಮೀಣ ಭಾಗಗಳಲ್ಲಿ ಶೇ 7.28ರಷ್ಟು ದಾಖಲಾಗಿತ್ತು ಎಂದು ಅದು ತಿಳಿಸಿದೆ.

ತೆಲಂಗಾಣದಲ್ಲಿ ಜನವರಿ ತಿಂಗಳ ಅತ್ಯಂತ ಕಡಿಮೆ ನಿರುದ್ಯೋಗ ಪ್ರಮಾಣ ದಾಖಲಾಗಿದೆ. ಅಲ್ಲಿ ಶೇ 0.7ರಷ್ಟು ನಿರುದ್ಯೋಗ ಇದೆ. ಗುಜರಾತ್‌ ನಂತರದ ಸ್ಥಾನದಲ್ಲಿದ್ದು, ಶೇ 1.2ರಷ್ಟು ನಿರುದ್ಯೋಗ ಪ್ರಮಾಣವಿದೆ. ಮೇಘಾಲಯದಲ್ಲಿ ಶೇ 1.5, ಒಡಿಶಾದಲ್ಲಿ ಶೇ 1.8ರಷ್ಟು ನಿರುದ್ಯೋಗ ವರದಿಯಾಗಿದೆ.

ಅತ್ಯಧಿಕ ನಿರುದ್ಯೋಗ ಪ್ರಮಾಣ ಇರುವ ರಾಜ್ಯಗಳ ಪಟ್ಟಿಯಲ್ಲಿ ಹರ್ಯಾಣ ಮೊದಲ ಸ್ಥಾನದಲ್ಲಿದೆ. ಇಲ್ಲಿ ಶೇ 23.4ರಷ್ಟು ಮಂದಿ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ರಾಜಸ್ಥಾನದಲ್ಲಿ 18.9ರಷ್ಟು ನಿರುದ್ಯೋಗ ದಾಖಲಾಗಿದೆ. ತ್ರಿಪುರಾದಲ್ಲಿ ಶೇ 17.1ರಷ್ಟು ಮಂದಿ ನಿರುದ್ಯೋಗಿಗಳಿದ್ದಾರೆ. ಕರ್ನಾಟಕದಲ್ಲಿ ಶೇ 2.9ರಷ್ಟು ನಿರುದ್ಯೋಗ ಪ್ರಮಾಣವಿದೆ. ನೆರೆಯ ಕೇರಳದಲ್ಲಿ ಶೇ 5.0, ತಮಿಳುನಾಡಿನಲ್ಲಿ ಶೇ 5.3ರಷ್ಟು ನಿರುದ್ಯೋಗ ದಾಖಲಾಗಿದೆ.
ಡಿಸೆಂಬರ್‌ ಹೊತ್ತಿಗೆ ದೇಶದ ನಿರುದ್ಯೋಗಿಗಳ ಸಂಖ್ಯೆ 5.3 ಕೋಟಿ, ಬೆಚ್ಚಿ ಬೀಳಿಸಿದ CMIE ವರದಿ

2021ರ ಡಿಸೆಂಬರ್ ವೇಳೆಗೆ ಭಾರತದಲ್ಲಿನ ನಿರುದ್ಯೋಗಿಗಳ ಸಂಖ್ಯೆ 5.3 ಕೋಟಿ ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ಮಹಿಳೆಯರ ಪಾಲು ಭಾರಿ ದೊಡ್ಡದಿದೆ.

ಡಿಸೆಂಬರ್ ದತ್ತಾಂಶದ ಪ್ರಕಾರ, 35 ಮಿಲಿಯನ್ ಜನರು ಕೆಲಸಕ್ಕಾಗಿ ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದರು. ಅವರಲ್ಲಿ ಶೇ 23ರಷ್ಟು ಅಥವಾ 8 ಲಕ್ಷ ಮಹಿಳೆಯರೇ ಇದ್ದಾರೆ ಎಂದು ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹೇಶ್ ವ್ಯಾಸ್ ತಿಳಿಸಿದ್ದಾರೆ.

ಇದಕ್ಕೆ ಪೂರಕವಾದ ಮಹತ್ವದ ಸವಾಲು ಎಂದರೆ ಉದ್ಯೋಗಕ್ಕಾಗಿ ಸಕ್ರಿಯರಾಗಿ ಹುಡುಕಾಟ ನಡೆಸದೆ ಇದ್ದರೂ, ಉದ್ಯೋಗ ದೊರಕದ ಮತ್ತು ಕೆಲಸ ಸಿಕ್ಕರೆ ಅದನ್ನು ಮಾಡಲು ಸಿದ್ಧರಾಗಿರುವ ಹೆಚ್ಚುವರಿ 17 ಮಿಲಿಯನ್ ಜನರಿಗೆ ಉದ್ಯೋಗ ನೀಡುವುದಾಗಿದೆ ಎಂದು ವ್ಯಾಸ್ ಹೇಳಿದ್ದಾರೆ.

ವಾಣಿಜ್ಯ ಕ್ಷೇತ್ರದ 20 ಕ್ಕೂ ಹೆಚ್ಚು ವಲಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಲೇಖನಗಳು ಮತ್ತು ಉದ್ಯಮಕ್ಕೆ ಸಂಬಂಧಿಸಿದ ಆಳವಾದ ಮಾಹಿತಿಗಾಗಿ ನೀವು ಎಕನಾಮಿಕ್ ಟೈಮ್ಸ್‌ ಓದಬಹುದು. ಮಾಹಿತಿಯುಕ್ತ ಲೇಖನಗಳನ್ನು ಓದಲು ಎಕನಾಮಿಕ್ ಟೈಮ್ಸ್ ಇಲ್ಲಿ ಕ್ಲಿಕ್ ಮಾಡಿ.



Read more

[wpas_products keywords=”deal of the day sale today offer all”]