ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಓಡಿಐ ಸರಣಿ ಫೆ. 6 ರಿಂದ ಆರಂಭವಾಗಲಿದ್ದು, ತದ ನಂತರ ಮೂರು ಪಂದ್ಯಗಳ ಟಿ20 ಸರಣಿ ಶುರುವಾಗಲಿದೆ. ಆದರೆ ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದ ಆಟಗಾರರಿಗೆ ಕೋವಿಡ್ ಸೋಂಕು ತಗುಲಿರುವುದು ಸ್ಪಷ್ಟವಾಗಿರುವುದರಿಂದ ಇದೀಗ ಅನಿರೀಕ್ಷಿತವಾಗಿ ಮಯಾಂಕ್ ಅಗರ್ವಾಲ್‌ಗೆ ಅವಕಾಶ ಒದಗಿ ಬಂದಿದೆ.
“ಭಾರತ ತಂಡದ ಏಳು ಮಂದಿ ಸದಸ್ಯರಿಗೆ ಕೊರೊನಾ ವೈರಸ್ ತಗುಲಿರುವ ಕಾರಣ ಭಾರತ ಓಡಿಐ ಸರಣಿಗೆ ಆಲ್ ಇಂಡಿಯಾ ಸೀನಿಯರ್ ಸೆಲೆಕ್ಷನ್ ಕಮಿಟಿ ಮಯಾಂಕ್ ಅಗರ್ವಾಲ್‌ಗೆ ಅವಕಾಶ ನೀಡಿದೆ,” ಎಂದು ಬಿಸಿಸಿಐ ತನ್ನ ಅಧೀಕೃತ ಹೇಳಿಕೆಯಲ್ಲಿ ತಿಳಿಸಿದೆ.
ವಿಂಡೀಸ್ ವಿರುದ್ಧದ ಸರಣಿಗೂ ಮುನ್ನ ಭಾರತಕ್ಕೆ ಶಾಕ್, ಪ್ರಮುಖ ಆಟಗಾರರಿಗೆ ಕೋವಿಡ್ ಸೋಂಕು!
“ವೆಸ್ಟ್ ಇಂಡೀಸ್ ವಿರುದ್ದ ಮೂರು ಪಂದ್ಯಗಳ ಓಡಿಐ ಸರಣಿ ಹಾಗೂ ಮೂರು ಪಂದ್ಯಗಳ ಟಿ20 ಸರಣಿ ನಿಮಿತ್ತ ಭಾರತ ತಂಡದ ಎಲ್ಲಾ ಆಟಗಾರರನ್ನು ಜನವರಿ 31 ರಂದು ಅಹಮದಾಬಾದ್‌ನಲ್ಲಿ ವರದಿ ಮಾಡುವಂತೆ ತಿಳಿಸಲಾಗಿತ್ತು. ಅಹಮದಾಬಾದ್‌ಗೆ ಪ್ರಯಾಣ ಬೆಳೆಸುವ ಮುನ್ನ ಎಲ್ಲಾ ಆಟಗಾರರು ಮನೆಯಲ್ಲಿಯೇ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಬೇಕಾಗಿತ್ತು. ವರದಿ ನೆಗೆಟಿವ್ ಬಂದ ಬಳಿಕ ಅವರು ಪ್ರಯಾಣ ಬೆಳೆಸಬೇಕು ಎಂದು ಬಿಸಿಸಿಐ ನಿರ್ದೇಶನ ನೀಡಿತ್ತು,” ಎಂದು ತಿಳಿಸಿದೆ.
ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ಶ್ರೇಯಸ್ ಅಯ್ಯರ್ ಹಾಗೂ ಋತುರಾಜ್ ಗಾಯಕ್ವಾಡ್ ಅವರ ಕೋವಿಡ್-19 ಟೆಸ್ಟ್ ಪಾಸಿಟಿವ್ ವರದಿ ಬಂದಿದೆ. ಇವರ ಜೊತೆಗೆ ಸ್ಟ್ಯಾಂಡ್ ಬೈ ಬೌಲರ್ ನವದೀಪ್ ಸೈನಿಗೂ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರ ಜೊತೆಗೆ ಫೀಲ್ಡಿಂಗ್ ಕೋಚ್ ಟಿ ದಿಲೀಪ್, ಭದ್ರತಾ ಅಧಿಕಾರಿ ಬಿ ಲೋಕೇಶ್ ಹಸಗೂ ಸ್ಪೋರ್ಟ್ಸ್ ಥೆರಪಿಸ್ಟ್ ರಾಜೀವ್ ಕುಮಾರ್ ಅವರಿಗೂ ಸೋಂಕು ತಗುಲಿದೆ.
ಟಿ20 ರ‍್ಯಾಂಕಿಂಗ್: ನಾಲ್ಕನೇ ಸ್ಥಾನಕ್ಕೇರಿದ ಕೆಎಲ್ ರಾಹುಲ್!
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮೂರು ಪಂದ್ಯಗಳ ಓಡಿಐ ಸರಣಿಯನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಚ್ಚಿದ ಅಂಗಣದಲ್ಲಿ ಆಡಲಿವೆ. ನಂತರ ಮೂರು ಪಂದ್ಯಗಳ ಟಿ20 ಸರಣಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ.
ಕ್ರಿಕೆಟ್ ಸುದ್ದಿ ಬೆಂಗಳೂರಿನಲ್ಲಿ ಭಾರತ-ಶ್ರೀಲಂಕಾ ನಡುವೆ ಡೇ-ನೈಟ್ ಟೆಸ್ಟ್!
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಪರಿಷ್ಕೃತ ವೇಳಾಪಟ್ಟಿ
ಮೊದಲ ಒಡಿಐ, ಫೆಬ್ರವರಿ 6 (ಅಹ್ಮದಾಬಾದ್)
ಎರಡನೇ ಒಡಿಐ, ಫೆಬ್ರವರಿ 9 (ಅಹ್ಮದಾಬಾದ್)
ಮೂರನೇ ಒಡಿಐ, ಫೆಬ್ರವರಿ 11 (ಅಹ್ಮದಾಬಾದ್)
ಮೊದಲ ಟಿ20, ಫೆಬ್ರವರಿ 16 (ಕೋಲ್ಕತಾ)
ಎರಡನೇ ಟಿ20, ಫೆಬ್ರವರಿ 18 (ಕೋಲ್ಕತಾ)
ಮೂರನೇ ಟಿ20, ಫೆಬ್ರವರಿ 20 (ಕೋಲ್ಕತಾ)
Read more
[wpas_products keywords=”deal of the day gym”]