Karnataka news paper

ಕೇರಳ: ದೇವಾಲಯಕ್ಕೆ ರಸ್ತೆ ನಿರ್ಮಿಸಲು ಮುಸ್ಲಿಮರಿಂದ ಭೂಮಿ ದಾನ!


The New Indian Express

ಮಲ್ಲಪ್ಪುರಂ: 500 ವರ್ಷಗಳಷ್ಚು ಹಿಂದಿನ ದೇವಾಲಯಕ್ಕೆ ರಸ್ತೆ ನಿರ್ಮಾಣ ಮಾಡಲು ಇಬ್ಬರು ಮುಸ್ಲಿಮರು ಭೂಮಿ ದಾನ ನೀಡುವ ಮೂಲಕ ಧಾರ್ಮಿಕ ಸಾಮರಸ್ಯದ ಸಂದೇಶವನ್ನು ಸಾರಿದ್ದಾರೆ.

ಕೂಡಿಲಂಗಡಿ ಕಡುಂಗೂತ್ ಮಹಾದೇವ ದೇವಸ್ಥಾನಕ್ಕೆ 10 ಅಡಿ ಅಗಲದ 60 ಮೀಟರ್ ರಸ್ತೆಯನ್ನು ನಿರ್ಮಿಸಲು ಕೂಡಿಲಂಗಡಿ ಪಂಚಾಯಿತಿ ನಿವಾಸಿಗಳಾದ ಸಿ ಎಚ್ ಅಬೂಬಕರ್ ಹಾಜಿ ಮತ್ತು ಎಂ ಉಸ್ಮಾನ್ ಅವರು ನಾಲ್ಕು ಸೆಂಟ್ಸ್ ಜಾಗವನ್ನು ಪಂಚಾಯಿತಿಗೆ ಹಸ್ತಾಂತರಿಸಿದ್ದಾರೆ. ಪಂಚಾಯಿತಿ ಹಾಗೂ ಶಾಸಕರ ನಿಧಿ ಬಳಸಿ ಶೀಘ್ರವೇ ರಸ್ತೆ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆ ಸಮಸ್ಯೆಯನ್ನು ಮುಂದಿಟ್ಟುಕೊಂಡು ಕೆಲವರು ಸಮಾಜದಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ”ದೇವಸ್ಥಾನಕ್ಕೆ ಸರಿಯಾದ ರಸ್ತೆ ಇರಲಿಲ್ಲ. ಈ ಸಂಬಂಧ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಪ್ರಚಾರವನ್ನೂ ನಡೆಸಿದ್ದರು ಎಂದು ಮಾಜಿ ಪಂಚಾಯತ್ ಸದಸ್ಯ ರಹೂಫ್ ಕೂಟ್ಟಿಲಂಗಡಿ ಹೇಳಿದ್ದಾರೆ.

ಕೋಮು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಮಂಕಡ ಶಾಸಕ ಮಂಜಳಂಕುಳಿ ಅಲಿ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಮಲಬಾರ್ ದೇವಸ್ವಂ ಮಂಡಳಿ ಅಧಿಕಾರಿಗಳು ಹಾಗೂ ನಿವಾಸಿಗಳ ಸಭೆ ಇತ್ತೀಚೆಗೆ ನಡೆಯಿತು.

ಸಭೆಯಲ್ಲಿ, ಭೂಮಾಲೀಕರಾದ ಅಬೂಬಕರ್ ಮತ್ತು ಉಸ್ಮಾನ್ ಅವರು ತಮ್ಮ ಜಮೀನಿನ ಕೆಲವು ಭಾಗವನ್ನು ರಸ್ತೆಗಾಗಿ ಹಸ್ತಾಂತರಿಸಲು ಒಪ್ಪಿಕೊಂಡರು ಎಂದು ರಹೂಫ್ ಹೇಳಿದರು.

ಏತನ್ಮಧ್ಯೆ, ದೇವಾಲಯವು 1 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಕ್ಕೆ ಸಿದ್ಧವಾಗಿದೆ. ಈ ಪ್ರದೇಶದಲ್ಲಿ ದೇವಾಲಯವು ಇನ್ನೂ ಕೆಲವು ಭೂಮಿಯನ್ನು ಹೊಂದಿದೆ. ಜಮೀನಿಗೆ ಸಂಬಂಧಿಸಿದ ವಿಷಯವನ್ನು ಮಲಪ್ಪುರಂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ದೇವಸ್ವಂ ಇನ್ಸ್‌ಪೆಕ್ಟರ್ ದಿನೇಶ್ ಸಿ ಸಿ ತಿಳಿಸಿದ್ದಾರೆ.



Read more

[wpas_products keywords=”deal of the day”]