ಇದನ್ನ ಕಂಡ ನೆಟ್ಟಿಗರು ದೇವೋಲೀನಾ ಭಟ್ಟಾಚಾರ್ಜಿ ಹಾಗೂ ವಿಶಾಲ್ ಸಿಂಗ್ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು. ನೆಟ್ಟಿಗರು ಮತ್ತು ಅಭಿಮಾನಿಗಳು ಮಾತ್ರವಲ್ಲ.. ತಾರೆಯರು ಕೂಡ ದೇವೋಲೀನಾ ಭಟ್ಟಾಚಾರ್ಜಿ ಮತ್ತು ವಿಶಾಲ್ ಸಿಂಗ್‌ಗೆ ಶುಭ ಕೋರಿದ್ದರು. ಪ್ರೀತಿಸುತ್ತಿದ್ದ ದೇವೋಲೀನಾ ಭಟ್ಟಾಚಾರ್ಜಿ ಮತ್ತು ವಿಶಾಲ್ ಸಿಂಗ್ ಇದೀಗ ಎಂಗೇಜ್ ಆಗಿದ್ದಾರೆ. ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಎಲ್ಲರೂ ಭಾವಿಸುವಾಗಲೇ ದೇವೋಲೀನಾ ಭಟ್ಟಾಚಾರ್ಜಿ ಮತ್ತು ವಿಶಾಲ್ ಸಿಂಗ್ ಹಾರ್ಟ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಅದು ಜಸ್ಟ್ ಪ್ರ್ಯಾಂಕ್!
ದೇವೋಲೀನಾ ಭಟ್ಟಾಚಾರ್ಜಿ ಮುಂದೆ ವಿಶಾಲ್ ಸಿಂಗ್ ಮುಂಡಿಯೂರಿ ಪ್ರಪೋಸ್ ಮಾಡಿದ್ದು, ದೇವೋಲೀನಾ ಭಟ್ಟಾಚಾರ್ಜಿ ಕೈಬೆರಳಿಗೆ ವಿಶಾಲ್ ಸಿಂಗ್ ವಜ್ರದ ಉಂಗುರ ತೊಡಿಸಿದ್ದು, ಲವ್ ಯೂ ದೇವೋಲೀನಾ ಅಂತ ಬರೆದುಕೊಂಡಿದ್ದು.. ಇದೆಲ್ಲವೂ ‘ಜಸ್ಟ್ ಪ್ರ್ಯಾಂಕ್’ ಅಷ್ಟೇ.! ಹಾಗಂತ ಖುದ್ದು ದೇವೋಲೀನಾ ಭಟ್ಟಾಚಾರ್ಜಿ ಮತ್ತು ವಿಶಾಲ್ ಸಿಂಗ್ ಸ್ಪಷ್ಟ ಪಡಿಸಿದ್ದಾರೆ. ತಾವು ಎಂಗೇಜ್ ಆಗಿಲ್ಲ ಎಂಬುದನ್ನೂ ದೇವೋಲೀನಾ ಭಟ್ಟಾಚಾರ್ಜಿ ಹಾಗೂ ವಿಶಾಲ್ ಸಿಂಗ್ ಕ್ಲಿಯರ್ ಆಗಿ ಹೇಳಿದ್ದಾರೆ.
ಹಾಗಾದ್ರೆ, ಪ್ರಪೋಸ್ ಮಾಡಿದ್ಯಾಕೆ? ಉಂಗುರ ತೊಡಿಸಿದ್ಯಾಕೆ?
ಸದ್ಯದಲ್ಲೇ ದೇವೋಲೀನಾ ಭಟ್ಟಾಚಾರ್ಜಿ ಮತ್ತು ವಿಶಾಲ್ ಸಿಂಗ್ ಮ್ಯೂಸಿಕ್ ವಿಡಿಯೋವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಆ ಮ್ಯೂಸಿಕ್ ವಿಡಿಯೋ ಹೆಸರು ‘ಇಟ್ಸ್ ಅಫೀಶಿಯಲ್’ ಅಂತ. ‘ಇಟ್ಸ್ ಅಫೀಶಿಯಲ್’ ಮ್ಯೂಸಿಕ್ ವಿಡಿಯೋದ ಥೀಮ್ ಪ್ರೀತಿ, ಮದುವೆ ಮತ್ತು ಸಂಬಂಧ. ಈ ಮ್ಯೂಸಿಕ್ ವಿಡಿಯೋಗೆ ಪ್ರಚಾರ ನೀಡುವ ಸಲುವಾಗಿ ದೇವೋಲೀನಾ ಭಟ್ಟಾಚಾರ್ಜಿಗೆ ವ್ರಜದ ಉಂಗುರ ತೊಡಿಸಿ ವಿಶಾಲ್ ಸಿಂಗ್ ಪ್ರಪೋಸ್ ಮಾಡುವ ಪ್ರ್ಯಾಂಕ್ ಮಾಡಿದ್ದಾರೆ.
ವಿಶಾಲ್ ಸಿಂಗ್ ಮತ್ತು ದೇವೋಲೀನಾ ಭಟ್ಟಾಚಾರ್ಜಿ ಮಾಡಿದ ಪ್ರ್ಯಾಂಕ್ ವರ್ಕೌಟ್ ಆಗಿದ್ದು, ಅಭಿಮಾನಿಗಳು ಹಾಗೂ ತಾರೆಯರು ಕೂಡ ಫೂಲ್ ಆಗಿದ್ದಾರೆ. ಇದರಿಂದ ದೇವೋಲೀನಾ ಭಟ್ಟಾಚಾರ್ಜಿ ಮತ್ತು ವಿಶಾಲ್ ಸಿಂಗ್ ಒಟ್ಟಿಗೆ ಕಾಣಿಸಿಕೊಳ್ಳಲಿರುವ ‘ಇಟ್ಸ್ ಅಪೀಶಿಯಲ್’ ಮ್ಯೂಸಿಕ್ ವಿಡಿಯೋಗೆ ಭರ್ಜರಿ ಪ್ರಚಾರ ಸಿಕ್ಕ ಹಾಗಾಗಿದೆ.
‘ಸಾಥ್ ನಿಭಾನಾ ಸಾಥಿಯಾ’ ಧಾರಾವಾಹಿಯಲ್ಲಿ ದೇವೋಲೀನಾ ಭಟ್ಟಾಚಾರ್ಜಿ ಮತ್ತು ವಿಶಾಲ್ ಸಿಂಗ್ ಒಟ್ಟಿಗೆ ಅಭಿನಯಿಸಿದ್ದರು. ಇದೀಗ ‘ಇಟ್ಸ್ ಅಪೀಶಿಯಲ್’ ಮ್ಯೂಸಿಕ್ ವಿಡಿಯೋದಲ್ಲೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ ಮ್ಯೂಸಿಕ್ ಲೋಕದಲ್ಲೂ ದೇವೋಲೀನಾ ಭಟ್ಟಾಚಾರ್ಜಿ ಹಾಗೂ ವಿಶಾಲ್ ಸಿಂಗ್ ಕಮಾಲ್ ಮಾಡಲಿದ್ದಾರೆ.
Read more
[wpas_products keywords=”deal of the day party wear dress for women stylish indian”]