Karnataka news paper

ಉದ್ಯಮಿ ಜೊತೆಗೆ ಸಪ್ತಪದಿ ತುಳಿದ ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿ ‘ಪವಿತ್ರ ರಿಷ್ತಾ’ ಅಂಕಿತಾ ಲೋಖಂಡೆ


‘ಪವಿತ್ರ ರಿಷ್ತಾ’ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಲೋಖಂಡೆ ಅವರು ಬಿಲಾಸ್ಪುರ್ ಮೂಲದ ಉದ್ಯಮಿ ವಿಕ್ಕಿ ಜೈನ್ ಅವರನ್ನು ಡಿಸೆಂಬರ್ 14ರಂದು ವರಿಸಿದ್ದಾರೆ. ಮುಂಬೈನಲ್ಲಿ ಅದ್ದೂರಿಯಾಗಿ ಈ ವಿವಾಹ ಸಂಭ್ರಮ ನಡೆದಿದೆ. ಡಿಸೆಂಬರ್ 11ರಿಂದ ಈ ಮದುವೆ ಬಗ್ಗೆಯೇ ಬಾಲಿವುಡ್‌ನಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಮಹಾರಾಷ್ಟ್ರದ ಉದ್ಯಮಿಗೂ ಕೂಡ ಅಂಕಿತಾ ಲೋಖಂಡೆ ಜೋಡಿ ಮದುವೆಯ ಮಮತೆಯ ಕರೆಯೋಲೆ ನೀಡಿದ್ದರು.

ಅರಿಷಿಣ ಶಾಸ್ತ್ರ, ಮೆಹೆಂದಿ, ಸಂಗೀತ ಸೇರಿ ಮದುವೆಯ ಎಲ್ಲ ಕಾರ್ಯಕ್ರಮಗಳನ್ನು ಕೂಡ ಅಂಕಿತಾ ಲೋಖಂಡೆ ಸಂಭ್ರಮದಿಂದ ಆಚರಿಸಿಕೊಂಡು, ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬಂಗಾರದ ಬಣ್ಣದ ಡ್ರೆಸ್‌ನಲ್ಲಿ ಅಂಕಿತಾ ಲೋಖಂಡೆ ಮದುಮಗಳಾಗಿ ಮಿಂಚಿದ್ದಾರೆ. ವಿಕ್ಕಿ ಕೂಡ ಬಿಳಿ, ಬಂಗಾರ ಎರಡೂ ಸೇರಿರುವ ಕುರ್ತಾ ಪೈಜಾಮ್ ಹಾಕಿದ್ದರು. ಬಾಲಿವುಡ್‌ನಲ್ಲಿ ಅನೇಕ ಮಂದಿ ಈ ಮದುವೆಗೆ ಸಾಕ್ಷಿಯಾದರು.

ಮದುವೆಗೆ 4 ದಿನ ಇರುವಾಗಲೇ ಕಾಲು ಪೆಟ್ಟು ಮಾಡಿಕೊಂಡ ಧಾರಾವಾಹಿ ನಟಿ ಅಂಕಿತಾ ಲೋಖಂಡೆ

ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ಕೂಡ ಅಂಕಿತಾ ಲೋಖಂಡೆ ಅವರ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದರು. ಶ್ರದ್ಧಾ ಆರ್ಯ, ಮಾಹಿ ಸೇರಿದಂತೆ ಬಾಲಿವುಡ್‌ನ ಕಿರುತೆರೆ ಮಂದಿಯು ಅಂಕಿತಾ ಮದುವೆಯಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದೆ. ಇದರ ಜೊತೆಗೆ ಮದುವೆ ಮಂಟಪವು ತುಂಬ ಅದ್ದೂರಿಯಾಗಿ, ವಿಭಿನ್ನವಾಗಿದೆ ಜನರ ಗಮನ ಸೆಳೆದಿದೆ.

ಕೊರೊನಾ ವೈರಸ್ ಪ್ರಕರಣ ಹೆಚ್ಚುತ್ತಿರುವುದರಿಂದ ಅಂಕಿತಾ ಲೋಖಂಡೆ, ವಿಕ್ಕಿ ಜೈನ್ ಅವರು ಆರತಕ್ಷತೆಯನ್ನು ಕ್ಯಾನ್ಸಲ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಕುಟುಂಬಸ್ಥರು, ಸ್ನೇಹಿತರು ಒಮ್ಮೆ ಸೇರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಂದ ಬ್ರೇಕಪ್ ಮಾಡಿಕೊಂಡ ನಂತರ ಅಂಕಿತಾ ಲೋಖಂಡೆ ವಿಕ್ಕಿಯನ್ನು ಪ್ರೀತಿ ಮಾಡುತ್ತಿದ್ದರು.

ಬಾಲಿವುಡ್‌ನಲ್ಲಿ ಗಟ್ಟಿಮೇಳ; 5 ವರ್ಷಗಳಲ್ಲಿ ಮದುವೆಯಾಗಿ, ತಾಯಿಯಾಗ್ತೀನಿ ಎಂದ ಕಂಗನಾ ರಣಾವತ್



Read more