Karnataka news paper

ಬಜೆಟ್‌ನಲ್ಲಿ ನರೇಗಾ ಅನುದಾನ ಕಡಿತ ಮಾಡಿಲ್ಲ, ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಅನುದಾನ -ಕೇಂದ್ರ ಸ್ಪಷ್ಟನೆ


ಹೊಸದಿಲ್ಲಿ: ಗ್ರಾಮೀಣ ವಲಯದಲ್ಲಿ ಉದ್ಯೋಗ ಸೃಷ್ಟಿಗೆ ಪೂರಕವಾದ ನರೇಗಾ ಯೋಜನೆಗೆ 2022-23ರ ಸಾಲಿನಲ್ಲಿ ಬಜೆಟ್‌ ಅನುದಾನವನ್ನು ಕಡಿತಗೊಳಿಸಿಲ್ಲ ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್‌ ಸ್ಪಷ್ಟನೆ ನೀಡಿದ್ದಾರೆ.

ನರೇಗಾಗೆ 2021-22 ರ ಬಜೆಟ್‌ನಲ್ಲಿ 73,000 ಕೋಟಿ ರೂ. ನಿಗದಿಯಾಗಿತ್ತು ಮತ್ತು 2022-23ರಲ್ಲೂ ಅಷ್ಟೇ ಮೊತ್ತವನ್ನು ಮೀಸಲಿಡಲಾಗಿದೆ. ಆದರೆ 2021ರ ಏಪ್ರಿಲ್‌-ಮೇನಲ್ಲಿ ಕೋವಿಡ್‌ ಬಿಕ್ಕಟ್ಟಿನ ಸಂದರ್ಭವಾದ್ದರಿಂದ ಹೆಚ್ಚುವರಿ ಅನುದಾನವನ್ನು ಮಂಜೂರು ಮಾಡಲಾಗಿತ್ತು ಮತ್ತು ಒಟ್ಟಾರೆ ಅನುದಾನ 98,000 ಕೋಟಿ ರೂ.ಗೆ ಏರಿತ್ತು ಎಂದು ಸೋಮನಾಥನ್‌ ಅವರು ವಿವರಿಸಿದ್ದಾರೆ.
ಇನ್ನು ನಗರಕ್ಕೂ ನರೇಗಾ, ಮೈಸೂರಿನಿಂದಲೇ ಚಾಲನೆ

ಒಂದು ವೇಳೆ ನರೇಗಾಗೆ 2022-23ರಲ್ಲೂ ಹೆಚ್ಚುವರಿ ಅನುದಾನದ ಅಗತ್ಯ ಬಿದ್ದರೆ, ಪರಿಷ್ಕೃತ ಅಂದಾಜಿನಲ್ಲಿ ಸೇರಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಸಂಸತ್ತಿನಲ್ಲಿ ಮಂಡನೆಯಾದ 2022-23ನೇ ಸಾಲಿನ ಕೇಂದ್ರ ಬಜೆಟ್‌ನಿಂದ ವ್ಯವಸ್ಥೆಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಬೇಡಿಕೆ ಮತ್ತು ಉದ್ಯೋಗ ಸೃಷ್ಟಿಯಾಗಲಿದೆ ಬಜೆಟ್‌ ಪ್ರಸ್ತಾಪಗಳಿಂದಾಗಿ ಸಾರ್ವಜನಿಕ ಹೂಡಿಕೆಯಲ್ಲಿ ಹೆಚ್ಚಳ ಉಂಟಾಗಲಿದೆ. ಇದು ಸಿಮೆಂಟ್‌, ಉಕ್ಕು, ಬಂಡವಾಳ ಸರಕುಗಳಿಗೆ ಬೇಡಿಕೆಯನ್ನು ಸೃಷ್ಟಿಸಲಿದೆ. ಮತ್ತು ಉದ್ಯೋಗ ಸೃಷ್ಟಿಸಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್‌ ಸೇಠ್‌ ತಿಳಿಸಿದ್ದಾರೆ.

ನರೇಗಾ ಕೂಲಿ 14 ರೂ. ಹೆಚ್ಚಳ, ಏಪ್ರಿಲ್‌ 1 ರಿಂದಲೇ ಜಾರಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2022-23ರಲ್ಲಿ 7.5 ಲಕ್ಷ ಕೋಟಿ ರೂ. ಸಾರ್ವಜನಿಕ ಹೂಡಿಕೆಯನ್ನು ಘೋಷಿಸಿದ್ದಾರೆ. ಇದು ಬಜೆಟ್‌ನ ಶೇ. 2.9 ಪಾಲಿನಷ್ಟಾಗುತ್ತದೆ. ಸುಮಾರು 350ಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ಆಮದು ಸುಂಕ ವಿನಾಯಿತಿಯನ್ನು ಬಜೆಟ್‌ನಲ್ಲಿ ಹಿಂತೆಗೆದುಕೊಂಡಿರುವುದರಿಂದ ದೇಶಿ ಉತ್ಪಾದನೆ ಹೆಚ್ಚಳವಾಗಲಿದೆ ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ ಮಂಡಳಿ ಸಿಬಿಐಸಿ ಟ್ವೀಟ್‌ ಮಾಡಿದೆ.



Read more…

[wpas_products keywords=”deal of the day”]