Karnataka news paper

ಹಿಜಾಬ್‌ ಪ್ರಕರಣವನ್ನು ನ್ಯಾಯಾಲಯವೇ ಇತ್ಯರ್ಥಪಡಿಸಲಿ; ಯು.ಟಿ ಖಾದರ್‌


ಮಂಗಳೂರು: ಉಡುಪಿ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರ ಹಿಜಾಬ್‌ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ನ್ಯಾಯಾಲಯವೇ ಇತ್ಯರ್ಥಪಡಿಸಲಿ ಎಂದು ವಿಧಾನಸಭೆಯ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಉಪನಾಯಕ ಯು.ಟಿ. ಖಾದರ್‌ ಹೇಳಿದರು.

ಇದನ್ನು ಕಾಲೇಜು ಆಡಳಿತ ಮಂಡಳಿ, ಪೋಷಕರು, ಸ್ಥಳೀಯ ನಾಯಕರು ತಳಮಟ್ಟದಿಂದಲೇ ಬಗೆಹರಿಸಬೇಕು. ಸದ್ಯದ ಮಾತುಕತೆಗಳು ಫಲಪ್ರದವಾದಂತೆ ಕಾಣುತ್ತಿಲ್ಲ. ವಿದ್ಯಾರ್ಥಿಗಳು ಸಾಂವಿಧಾನಿಕ ಹಕ್ಕಿನ ಪಟ್ಟು ಹಿಡಿದರೆ, ಕಾಲೇಜು ತನ್ನ ನಿಯಮ ಹೇಳುತ್ತಿದೆ. ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯ ಹಾಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು. ಇದೇ ವೇಳೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ನಮಾಝ್‌ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದ ಖಾದರ್, ಕಾನೂನು ಕೈಗೆತ್ತಿಕೊಂಡ ದುಷ್ಕರ್ಮಿಗಳ ವಿರುದ್ಧ ಸರಕಾರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಪ್ರಾರ್ಥನೆ ನಡೆಸಿದ ಬಗ್ಗೆ ರೈಲ್ವೆ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಹಿಜಾಬ್‌ ಧರಿಸಿಯೇ ಬರುತ್ತೇವೆ ಎನ್ನುವವರಿಗೆ ಟಿ.ಸಿ ಕೊಟ್ಟು ಒದ್ದು ಮನೆಗೆ ಕಳಿಸಿ; ಪ್ರಮೋದ್ ಮುತಾಲಿಕ್
ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಎಸ್‌ಡಿಪಿಐ ಕಾರ್ಯಕರ್ತರು ಹಲ್ಲೆ ನಡೆಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ಮೊಬೈಲ್‌ ಮೆಸೇಜ್‌ ವಿಷಯದಲ್ಲೂ ಹಲ್ಲೆಯಾಗುತ್ತಿದೆ. ಕಾಂಗ್ರೆಸ್‌ ಕಾರ್ಯಕರ್ತರ ತಾಳ್ಮೆಯನ್ನು ದೌರ್ಬಲ್ಯ ಎಂದು ಭಾವಿಸಬಾರದು. ನಮ್ಮವರು ಹಲ್ಲೆ ಮಾಡಿದರೆ ನಮಗೂ ಅವರಿಗೂ ವ್ಯತ್ಯಾಸ ಇರುವುದಿಲ್ಲ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಕ್ರಮ ಕೈಗೊಳ್ಳಲು ಇಲಾಖೆ ಇದೆ. ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದರು.

ಮುಖಂಡರಾದ ಮಮತಾ ಡಿ.ಎಸ್‌. ಗಟ್ಟಿ, ಮುಹಮ್ಮದ್‌ ಮೋನು, ಸಂತೋಷ್‌ ಕುಮಾರ್‌ ಶೆಟ್ಟಿ, ಪದ್ಮನಾಭ ನರಿಂಗಾನ, ಅಹ್ಮದ್‌ ಬಾವ, ಸುರೇಶ್‌ ಭಟ್ನಗರ, ಟಿ.ಕೆ. ಸುಧೀರ್‌, ಹಬೀಬುಲ್ಲಾ, ರೋಹಿತ್‌ ಉಳ್ಳಾಲ್‌ ಉಪಸ್ಥಿತರಿದ್ದರು.
ಶಾಲೆಗಳಲ್ಲಿ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಸಮವಸ್ತ್ರದ ಜೊತೆ ಹಿಜಾಬ್‌ ಧರಿಸುವಂತಿಲ್ಲ; ಕೇರಳ ಸರ್ಕಾರ
ಮಗಳೂ ಹಿಜಾಬ್‌ ಹಾಕುತ್ತಾಳೆ
ನನ್ನ ಮಗಳು ಹಗಲು ಮಾತ್ರವಲ್ಲ, ರಾತ್ರಿ ಮಲಗುವಾಗಲೂ ಹಿಜಾಬ್‌ ಹಾಕುತ್ತಾಳೆ. ಅದು ಆಕೆಯ ಅಭ್ಯಾಸ. ನನ್ನ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಕರೆದಾಗಲೂ ಹಿಜಾಬ್‌ ಇಲ್ಲದೆ ಬರುವುದೇ ಇಲ್ಲ ಎಂದಿದ್ದಳು. ಆಕೆಯನ್ನು ಹಿಜಾಬ್‌ ಧರಿಸಲು ಅವಕಾಶವಿರುವ ಶಾಲೆಗೆ ಸೇರಿಸಿದ್ದೇನೆ. ಬೇರೆ ಶಾಲೆಗೆ ಸೇರಿಸಿ ಫೈಟಿಂಗ್‌ ಮಾಡಲು ಹೋಗಿಲ್ಲ ಎಂದು ಶಾಸಕ ಯು.ಟಿ. ಖಾದರ್‌ ಹೇಳಿದರು.



Read more

[wpas_products keywords=”deal of the day sale today offer all”]