ಬೆಂಗಳೂರು: ಖಾಸಗಿ ಸಮಾರಂಭದಲ್ಲಿ ಮದುವೆಯಾದ ಬಾಲಿವುಡ್ ತಾರೆಗಳಾದ ವಿಕ್ಕಿ ಕೌಶಲ್ ಮತ್ತು ಕತ್ರೀನಾ ಕೈಫ್ ಮೊದಲ ಬಾರಿಗೆ ಒಟ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ರಾಜಸ್ಥಾನದ ಫೋರ್ಟ್ ಬರ್ವಾರ ಸಿಕ್ಸ್ ಸೆನ್ಸಸ್ ರೆಸಾರ್ಟ್‌ನಲ್ಲಿ ವಿಕ್ಕಿ–ಕತ್ರೀನಾ ಮದುವೆ ಡಿಸೆಂಬರ್ 9ರಂದು ನಡೆದಿತ್ತು.
ಬಳಿಕ ವಿಕ್ಕಿ–ಕತ್ರೀನಾ ಜೋಡಿ ಮುಂಬೈ ವಿಮಾನ ನಿಲ್ದಾಣದಲ್ಲಿ ಜತೆಯಾಗಿ, ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಮದುವೆಯನ್ನು ಅತ್ಯಂತ ಖಾಸಗಿಯಾಗಿ ನಡೆಸಲಾಗಿದ್ದು, ಸ್ನೇಹಿತರು ಮತ್ತು ಕುಟುಂಬದ ಆಪ್ತರು ಸಮಾರಂಭದಲ್ಲಿ ಭಾಗಿಯಾಗಿದ್ದರು.
ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗುತ್ತಿದೆ ಮೋಹನ್ಲಾಲ್ ಚಿತ್ರ ಮರಕ್ಕಾರ್
ವಿಕ್ಕಿ ಕೌಶಲ್ ಅವರ ಕುಟುಂಬದ ಮನೆಗೆ ತೆರಳುವ ಸಂದರ್ಭದಲ್ಲಿ ಈ ಜೋಡಿ ಜತೆಯಾಗಿ ಕಾಣಿಸಿಕೊಂಡಿದ್ದು, ಅವರ ಫೋಟೊಗಳು ವೈರಲ್ ಆಗಿವೆ.
ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದ ನಟಿ ನಯನತಾರಾ