Karnataka news paper

ರಾಜಸ್ಥಾನದಲ್ಲಿ ಸಚಿವರನ್ನು ಹನಿಟ್ರ್ಯಾಪ್‌ ಖೆಡ್ಡಾಗೆ ಬೀಳಿಸುವಂತೆ ಒತ್ತಡ..! ರೂಪದರ್ಶಿ ಆತ್ಮಹತ್ಯೆ ಯತ್ನ


ಜೈಪುರ (ರಾಜಸ್ಥಾನ):ರೂಪದರ್ಶಿ ಮೇಲೆ ಒತ್ತಡ ಹೇರಿ ರಾಜಸ್ಥಾನದ ಅಶೋಕ್‌ ಗೆಹ್ಲೋಟ್‌ ಸಚಿವ ಸಂಪುಟದ ಪ್ರಭಾವಿ ಸಚಿವರೊಬ್ಬರನ್ನು ಹನಿ ಟ್ರ್ಯಾಪ್‌ ಖೆಡ್ಡಕ್ಕೆ ಕೆಡವಲು ಯತ್ನಿಸಿದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹನಿ ಟ್ರ್ಯಾಪ್‌ ಸಂಚುಕೋರರ ಕೈಗೆ ಸಿಲುಕಿ ಒತ್ತಡಕ್ಕೆ ಒಳಗಾಗಿದ್ದ ರೂಪದರ್ಶಿ, ಜೋಧಪುರ ಹೋಟೆಲ್‌ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಕರಣ ಭೀಕರ ತಿರುವು ಪಡೆದಿದೆ.

ಬಂಧಿತ ಆರೋಪಿಗಳನ್ನು ಅಕ್ಷತ್‌ ಮತ್ತು ದೀಪಾಲಿ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಬಿಲ್ವಾರ ಕ್ಷೇತ್ರದ ಶಾಸಕ ಹಾಗೂ ಗೆಹ್ಲೋಟ್‌ ಸಂಪುಟದ ಪ್ರಭಾವಿ ಸಚಿವರೊಬ್ಬರ ಮೇಲೆ ಕಣ್ಣಿಟ್ಟಿದ್ದರು. ತಮ್ಮ ಪ್ರಾಜೆಕ್ಟ್‌ ಒಂದರ ಫೈಲ್‌ಗಳಿಗೆ ಸಹಿ ಮಾಡುತ್ತಿಲ್ಲ ಎನ್ನುವ ಕಾರಣಕ್ಕೆ ಸಚಿವರನ್ನು ಮಣಿಸಲು ಈ ದುಷ್ಕರ್ಮಿಗಳು ಹನಿ ಟ್ರ್ಯಾಪ್‌ ತಂತ್ರ ಹೂಡಿದ್ದರು.

ಕೋಲಾರದಲ್ಲಿ ಹನಿಟ್ರ್ಯಾಪ್‌ ವಂಚನೆ..! ಹಲವರಿಗೆ ಟೋಪಿ ಹಾಕಿದ್ದ ಖತರ್ನಾಕ್ ಲೇಡಿ ಅಂದರ್..!
ತಮ್ಮ ಕುತಂತ್ರ ಜಾರಿಗೆ ತರಲು ಜೋಧಪುರದ ರೂಪದರ್ಶಿಯನ್ನು ದುರ್ಬಳಕೆ ಮಾಡಿಕೊಂಡಿದ್ದರು. ಫ್ಯಾಷನ್‌ ಶೋ ಆಯೋಜನೆ ನೆಪದಲ್ಲಿ ರೂಪದರ್ಶಿಯನ್ನು ದುಷ್ಕರ್ಮಿಗಳು, ಸಚಿವರು ನೆಲೆಸಿದ್ದ ಬಿಲ್ವಾರಕ್ಕೆ ಕರೆದೊಯ್ದಿದ್ದರು. ಸಚಿವರಿದ್ದ ಹೋಟೆಲ್‌ ಸಮೀಪ ಕರೆ ತಂದ ಬಳಿಕ, ರೂಪದರ್ಶಿಗೆ ತಮ್ಮ ಪಿತೂರಿಯ ಆಯಾಮವನ್ನು ವಿವರಿಸಿದ್ದರು.

‘ಹೇಗಾದರೂ ಮಾಡಿ ನೀನು ಸಚಿವರ ಜತೆ ಮಲಗಿ, ವಿಡಿಯೋ ಮಾಡಿಕೊಂಡು ಬಾ’ ಎಂದು ಒತ್ತಡ ಹೇರಿದ್ದರು. ಇದರಿಂದ ತೀವ್ರ ಇಕ್ಕಟ್ಟಿಗೆ ಸಿಲುಕಿದ ರೂಪದರ್ಶಿ, ಶೌಚಕ್ಕೆ ಹೋಗುವ ನೆಪ ಮಾಡಿ, ಅಕ್ಷತ್‌ – ದೀಪಾಲಿ ಜೋಡಿಯ ಕಪಿ ಮುಷ್ಠಿಯಿಂದ ತಪ್ಪಿಸಿಕೊಂಡಿದ್ದರು.

ಹನಿಟ್ರ್ಯಾಪ್‌ಗೆ ಸಿಲುಕಿದ ಸೇನಾ ಸಿಬ್ಬಂದಿ ಬಂಧನ, 2 ವರ್ಷಗಳಿಂದ ಹಣ ಪಡೆದು ಪಾಕ್‌ಗೆ ಮಾಹಿತಿ!
ಅಲ್ಲಿಂದ ಓಡಿ ಬಂದ ರೂಪದರ್ಶಿ, ತಮ್ಮ ಮನೆಗೆ ತೆರಳುವ ಬದಲು ಹೋಟೆಲ್‌ಗೆ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ಥಳದಲ್ಲಿದ್ದ ಜನರು ರೂಪದರ್ಶಿಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸುವಲ್ಲಿ ನೆರವಾಗಿದ್ದಾರೆ. ಚೇತರಿಸಿಕೊಂಡ ಬಳಿಕ ಸಂತ್ರಸ್ತೆ ನೀಡಿದ ಮಾಹಿತಿ ಆಧರಿಸಿ, ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಲಾಗಿದೆ.

ಹನಿ ಟ್ರ್ಯಾಪ್‌ ದಂಧೆಕೋರರಿಂದ ತಾನು ಒತ್ತಡಕ್ಕೆ ಒಳಗಾಗಿದ್ದರ ಹಿಂದಿನ ಕಾರಣವನ್ನೂ ರೂಪದರ್ಶಿ ಬಿಚ್ಚಿಟ್ಟಿದ್ದಾರೆ. ‘ರೂಪದರ್ಶಿ ಸ್ನಾನ ಮಾಡುವಾಗಿನ ಖಾಸಗಿ ದೃಶ್ಯಗಳನ್ನು ದುಷ್ಕರ್ಮಿಗಳು ಸೆರೆ ಹಿಡಿದಿದ್ದು, ಅದನ್ನು ಜಾಲತಾಣಗಳಿಗೆ ಬಿಡುಗಡೆ ಮಾಡುವುದಾಗಿ ಒತ್ತಡ ಹೇರಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದ ರೂಪದರ್ಶಿ, ಇಕ್ಕಟ್ಟಿನ ಘಳಿಗೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

2019ರ ಲೈಂಗಿಕ ಹಗರಣ: ನಿಮ್ಮ ಬಳಿ ಇರುವ ಸಿಡಿಗಳನ್ನು ನಮಗೆ ನೀಡಿ ಎಂದು ಕಮಲ್ ನಾಥ್‌ಗೆ ಎಸ್‌ಐಟಿ ಸೂಚನೆ



Read more

[wpas_products keywords=”deal of the day sale today offer all”]