Karnataka news paper

ಕೇಂದ್ರ ಬಜೆಟ್‌-2022ರಿಂದ ಗ್ರಾಹಕರ ಮೇಲಾಗುವ ಪರಿಣಾಮವೇನು? ಇಲ್ಲಿದೆ ವಿವರ


ಹೊಸದಿಲ್ಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ 2022-23ರ ಕೇಂದ್ರ ಬಜೆಟ್‌ನಿಂದ ಗ್ರಾಹಕರ ಮೇಲೆ ಉಂಟಾಗುವ 10 ಪರಿಣಾಗಳ ವಿವರ ಇಲ್ಲಿದೆ. ಸ್ಥಳೀಯ ಉತ್ಪಾದನೆ ಹೆಚ್ಚಿಸಲು ಆಮದು ಸುಂಕ ಏರಿಸಲಾಗುತ್ತಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಆದರೆ ಸದ್ಯಕ್ಕೆ ದರ ಏರಿಕೆ ಸನ್ನಿಹಿತವಾಗಿದೆ.

1. ನೀವು ಅಮೂಲ್ಯವಾದ ವಜ್ರಾಭರಣಗಳು, ರತ್ನಗಳನ್ನು, ಬೆಲೆಬಾಳುವ ಶಿಲೆಗಳನ್ನು ಖರೀದಿಸುವುದಿದ್ದರೆ ಬೆಲೆ ಇಳಿಕೆಯ ಅನುಕೂಲ ನಿಮ್ಮದಾಗಲಿದೆ. ಏಕೆಂದರೆ ಪಾಲಿಶ್‌ ಮಾಡಿದ ವಜ್ರಗಳು ಮತ್ತು ರತ್ನಗಳ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ.7.5ರಿಂದ ಶೇ.5ಕ್ಕೆ ಕಡಿತಗೊಳಿಸಲಾಗಿದೆ. ಉದಾಹರಣೆಗೆ ಅರ್ಧ ಕ್ಯಾರಟ್‌ ಸಾಲಿಟೈರ್‌ ವಜ್ರದ ಉಂಗುರದ ಬೆಲೆ 1,30,000 ರೂ. ಇದ್ದರೆ, ಅದರಲ್ಲಿ2,500 ರೂ. ಉಳಿತಾಯ ಸಿಗಲಿದೆ.

2. ಆಮದು ಮಾಡುವ ಕೃತಕ ಜ್ಯುವೆಲ್ಲರಿಗಳು ದುಬಾರಿಯಾಗಲಿದೆ. ಅವುಗಳ ಮೇಲಿನ ಕಸ್ಟಮ್ಸ್‌ ಸುಂಕದಲ್ಲಿ 20 ಪರ್ಸೆಂಟ್‌ ಏರಿಕೆಯಾಗಲಿದೆ. ಅಥವಾ ಕೆ.ಜಿಗೆ 400 ರೂ. ವೃದ್ಧಿಸಲಿದೆ.

Budget 2022- ಶ್ರೀಸಾಮಾನ್ಯರ ಮೇಲೆ ತೆರಿಗೆ ಹೇರಿಕೆ ಸಲ್ಲ : ಮೋದಿ ನಿರ್ದೇಶನ ನೆನಪಿಸಿಕೊಂಡ ನಿರ್ಮಲಾ!

3. ಆರೋಗ್ಯಕರ ಜೀವನಶೈಲಿ ಮತ್ತಷ್ಟು ತುಟ್ಟಿಯಾಗಲಿದೆ. 250 ಗ್ರಾಮ್‌ ಟರ್ಕ್ ಹಝಲ್‌ನಟ್‌ನ ಬೆಲೆಯಲ್ಲಿ 449 ರೂ. ಬದಲಿಗೆ 515 ರೂ.ಗೆ ಏರಿಕೆಯಾಗಲಿದೆ. ಆಮದು ಶೇ.10ರಿಂದ ಶೇ.30 ತನಕ ಏರಿಕೆಯಾಗಲಿದೆ.

4. ಬಿಸಿಲು ಮತ್ತು ಮಳೆಯಿಂದ ರಕ್ಷಣೆಗೆ ಆಮದು ಮಾಡುವ ಕೊಡೆ ಬಳಸುವ ಹಂಬಲ ಇದ್ದರೆ, ಅದಕ್ಕೆ ಬೆಲೆಯೂ ಏರಿಕೆಯಾಗಲಿದೆ. ಆಮದೀಕೃತ ಛತ್ರಿಯ ಮೇಲೆ ಆಮದು ಸುಂಕ ಶೇ.10ರಿಂದ ಶೇ.20ಕ್ಕೆ ಹೆಚ್ಚಳವಾಗುತ್ತಿದೆ. ಈ ಹಿಂದೆ 1,129 ರಊ. ಇದ್ದ ಕೊಡೆಯ ಬೆಲೆಯಲ್ಲಿ 129 ರೂ. ಹೆಚ್ಚಳವಾಗಲಿದೆ.

ಬರಲಿವೆ 400 ವಂದೇ ಭಾರತ್‌ ಟ್ರೇನ್‌, ಇಲ್ಲಿದೆ ₹ 1.4 ಲಕ್ಷ ಕೋಟಿ ರೈಲ್ವೆ ಬಜೆಟ್‌ನ ಕಂಪ್ಲೀಟ್‌ ಡಿಟೇಲ್ಸ್‌

5. ಆಮದು ಮಾಡುವ ಚಳಿಗಾಲದ ವಿಶೇಷ ಉಡುಗೆ ತೊಡುಗೆಗಳ ದರದಲ್ಲಿ ಇಳಿಕೆಯಾಗಲಿದೆ. ಜಾರಾ ಕೋಟ್‌ ದರ 7,990 ರೂ.ಗಳಿಂದ 7,740 ರೂ.ಗೆ ತಗ್ಗಲಿದೆ. ಆಮದು ಮಾಡುವ ಬ್ಲಾಂಕೆಟ್‌ಗಳನ್ನು ಬಳಸುವುದಿದ್ದರೆ ದರದಲ್ಲಿ ಶೇ.25 ಹೆಚ್ಚಿನ ಬೆಲೆ ನೀಡಬೇಕಾಗಿ ಬರಬಹುದು. ಆಮದು ಮಾಡುವ ಹ್ಯಾಂಡ್‌ ಕರ್ಚೀಫ್‌ನ ದರದಲ್ಲಿ ಶೇ.25 ತನಕ ದರ ಇಳಿಕೆಯಾಗಲಿದೆ. ಆಮದು ಸುಂಕ ಕಡಿತವಾಗುತ್ತಿರುವುದು ಇದಕ್ಕೆ ಕಾರಣ.

6. ಮ್ಯೂಸಿಕ್‌ ಮತ್ತು ಪಾಡ್‌ಕಾಸ್ಟ್‌ ದರದಲ್ಲಿ ದರ ಏರಿಕೆಯಾಗಲಿದೆ. ಹೆಡ್‌ಫೋನ್‌ಗಳ ಕಸ್ಟಮ್ಸ್‌ ಸುಂಕದಲ್ಲಿ ಶೇ.15ರಿಂದ ಶೇ.20 ತನಕ ಏರಿಕೆಯಾಗಲಿದೆ. ಎಕೆಜಿವೈ 500 ಹೆಡ್‌ ಫೋನ್‌ ದರ 8,999 ರೂ.ಗಳಿಂದ 9,314 ರೂ.ಗೆ ಏರಿಕೆಯಾಗಲಿದೆ. ಸ್ಮಾರ್ಟ್‌ ವಾಚ್‌ಗಳ ದರದಲ್ಲಿ 100 ರೂ.ಗಳಿಂದ 1000 ರೂ. ತನಕ ಏರಿಕೆಯಾಗಲಿದೆ. ಇವುಗಳ ಕಸ್ಟಮ್ಸ್‌ ಸುಂಕ ವೃದ್ಧಿಸುವುದು ಕಾರಣ.



Read more…

[wpas_products keywords=”deal of the day”]