ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಓಪನರ್ ಖರೀದಿ ಸಲುವಾಗಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್, ಕೆಕೆಆರ್ ಮತ್ತು ಸಿಎಸ್‌ಕೆ ತಂಡಗಳು ಹಣದ ಹೊಳೆ ಹರಿಸುವ ಸಾಧ್ಯತೆ ಇದೆ ಎಂದು ಮಾಜಿ ಚೈನಾಮನ್ ಸ್ಪಿನ್ನರ್ ಹಾಗ್ ಹೇಳಿದ್ದಾರೆ. ಕಳೆದ ವರ್ಷ ಸಿಎಸ್‌ಕೆ ತಂಡದ ತನ್ನ 4ನೇ ಟ್ರೋಫಿ ಗೆಲ್ಲುವಲ್ಲಿ ಫಾಫ್ ಬಹುಮುಖ್ಯ ಪಾತ್ರವಹಿಸಿದ್ದರು. ಟೂರ್ನಿಯಲ್ಲಿ ಎರಡನೇ ಅತ್ಯಧಿಕ ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದರು.
37 ವರ್ಷದ ಅನುಭವಿ ಆಟಗಾರ ಫಾಫ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಆಯ್ಕೆ ಸಮಿತಿಯ ಅವಕೃಪೆಗೆ ಗುರಿಯಾಗಿದ್ದಾರೆ. ಇನ್ನು ಸಿಎಸ್‌ಕೆ ತಂಡ ಐಪಿಎಲ್ 2022 ಟೂರ್ನಿ ಸಲುವಾಗಿ ರವೀಂದ್ರ ಜಡೇಜಾ, ಎಂಎಸ್ ಧೋನಿ, ಮೊಯೀನ್ ಅಲಿ ಮತ್ತು ಋತುರಾಜ್ ಗಾಯಕ್ವಾಡ್ ಅವರನ್ನು ಉಳಿಸಿಕೊಂಡು ಫಾಫ್ ಡು’ಪ್ಲೆಸಿಸ್ ಅವರನ್ನು ಹರಾಜಿಗೆ ಬಿಟ್ಟುಕೊಟ್ಟಿತ್ತು.
ಐಪಿಎಲ್ ಮೆಗಾ ಆಕ್ಷನ್ ಮುನ್ನ ತಿಳಿದುಕೊಳ್ಳಬೇಕಾದ ಮುಖ್ಯ ಅಂಶಗಳಿವು!
“ಈ ಬಾರಿ ಮೆಗಾ ಆಕ್ಷನ್‌ನಲ್ಲಿ ಡು’ಪ್ಲೆಸಿಸ್ ಬಹು ಬೇಡಿಕೆಯ ಬ್ಯಾಟ್ಸ್‌ಮನ್ ಆಗಿರಲಿದ್ದಾರೆ. ಏಕೆಂದರೆ ಅವರಲ್ಲಿ ಉತ್ತಮ ಕ್ಯಾಪ್ಟನ್ ಕೂಡ ಇದ್ದಾರೆ. ಪಂಜಾಬ್, ಬೆಂಗಳೂರು, ಕೋಲ್ಕತಾ ಮತ್ತು ಚೆನ್ನೈ ತಂಡಗಳಿಗೆ ಅವರ ಅಗತ್ಯವಿದೆ. ಅಗ್ರ ಕ್ರಮಾಂಕದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಬ್ಯಾಟ್ಸ್‌ಮನ್. ಅವರಿಗೆ ಹರಾಜಿನಲ್ಲಿ 7-11 ಕೋಟಿ ರೂ. ಲಭ್ಯವಾಗುವುದು ಖಚಿತ. ಏಕೆಂದರೆ ಕಳೆದ ಬಾರಿ ಅಷ್ಟು ಭರ್ಜರಿ ಪ್ರದರ್ಶನ ನೀಡಿದ್ದಾರೆ,” ಎಂದು ಹಾಗ್ ಹೇಳಿದ್ದಾರೆ.
ಶ್ರೇಯಸ್‌ಗಾಗಿ ಬೆಂಗಳೂರು-ಪಂಜಾಬ್ ಪೈಪೋಟಿ
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಬಿಡುಗಡೆ ಆಗಿರುವ ಶ್ರೇಯಸ್ ಅಯ್ಯರ್ ಅವರನ್ನು ಖರೀದಿಸಲು ಬೆಂಗಳೂರು ಮತ್ತು ಪಂಜಾಬ್ ತಂಡಗಳು ಪೈಪೋಟಿ ನಡೆಸಲಿವೆ ಎಂದು ಹಾಗ್ ಹೇಳಿದ್ದಾರೆ.
ಈ ಸ್ಟಾರ್ ಪ್ಲೇಯರ್ ಗೋಸ್ಕರ ಆರ್‌ಸಿಬಿ 20 ಕೋಟಿ ಮೀಸಲಿಟ್ಟಿದೆಯಂತೆ!
“ಶ್ರೇಯಸ್ ಅಯ್ಯರ್ ಅಯ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರಲ್ಲಿ ಒಬ್ಬರು. ಜೊತೆಗೆ ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಅವರಲ್ಲಿದೆ. ಹೀಗಾಗಿ ಆರ್‌ಸಿಬಿ ಮತ್ತು ಪಿಬಿಕೆಎಸ್ ತಂಡಗಳು ಅವರನ್ನು ಖರೀದಿಸಲು ಪೈಫೋಟಿ ನಡೆಸಲಿವೆ. ಕೆಕೆಆರ್ ಕೂಡ ಪ್ರಯತ್ನ ನಡೆಸಬಹುದು. ಅವರಿಗೆ ಕನಿಷ್ಠ 4 ಕೋಟಿ ರೂ. ಆದರೂ ಸಿಗಲಿದೆ. ಇನ್ನು ಇನಿಂಗ್ಸ್‌ನ ಕೊನೇ ಓವರ್‌ಗಳಲ್ಲಿ ಅಪಾಯಕಾರಿ ಬೌಲಿಂಗ್ ಪ್ರದರ್ಶನ ನೀಡುವ ಕಗಿಸೊ ರಬಾಡಗೆ 4-5 ಕೋಟಿ ರೂ. ಸಿಗುವ ಸಾಧ್ಯತೆ ಇದೆ. ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್‌ಗೆ 5-7 ಕೋಟಿ ರೂ. ಸಿಗಲಿದೆ,” ಎಂದಿದ್ದಾರೆ.
ಬೆಂಗಳೂರಿನಲ್ಲಿ ಫೆ.12-13ರಂದು ನಡೆಯಲಿರುವ ಐಪಿಎಲ್ 2022 ಟೂರ್ನಿಯ ಆಟಗಾರರ ಹರಾಜಿನಲ್ಲಿ ಒಟ್ಟಾರೆ 590 ಆಟಗಾರರು ಪಾಲ್ಗೊಳ್ಳಲಿದ್ದಾರೆ.
Read more
[wpas_products keywords=”deal of the day sale today offer all”]