Karnataka news paper

ಕೀಗಳ ಫೋಟೋ ಸಿಕ್ಕಿದ್ರೆ ಸಾಕು, ಮನೆ ಕಳ್ಳತನ ಫಿಕ್ಸ್: ಬೆಂಗಳೂರಿನಲ್ಲಿ ಖದೀಮನ ಬಂಧನ!


The New Indian Express

ಬೆಂಗಳೂರು: ಪಕ್ಕಾ ಪ್ಲ್ಯಾನ್ ಮಾಡಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿ ಮುರಳಿ ಎಂಬಾತನನ್ನು ಆರ್.ಟಿ. ನಗರ ಮತ್ತು ಹೆಬ್ಬಾಳ ಪೊಲೀಸರು ಬಂಧಿಸಿದ್ದು ಆತನಿಂದ ಸುಮಾರು 59 ಲಕ್ಷ ರು. ಮಾಲ್ಯಾದ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.

ಮಕ್ಕಳನ್ನು ಶಾಲೆಗೆ ಬಿಡಲು ಹೋದಪೋಷಕರನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಈತ,  ಅವರ ಕೀಗಳ ಫೋಟೋ ತೆಗೆದುಕೊಳ್ಳುತ್ದಿದ್ದ, ನಂತರ  ನಕಲಿ ಕೀ ಬಳಸಿ ಮನೆಗೆ ಪ್ರವೇಶಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಕಾವಲ್ ಬೈರಸಂದ್ರ ನಿವಾಸಿ ಮುರುಳಿ ಖಾಸಗಿ ಸಂಸ್ಥೆಯೊಂದರಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ನಂತರ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಫಿಂಗರ್‌ಪ್ರಿಂಟ್, ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ಸುಳಿವುಗಳ ಆಧಾರದ ಮೇಲೆ ಡಿಸೆಂಬರ್ 12 ರಂದು ಆರ್‌ಟಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ವರದಿಯಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನ ಬಂಧಿಸಲಾಯಿತು.

ಖದೀಮ 2009ರಿಂದ ಈವರೆಗೆ 14 ಕಡೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.   13 ವರ್ಷಗಳಿಂದ ಕಳ್ಳತನ ಮಾಡ್ತಿದ್ದ ಆರೋಪಿ ಇದುವರೆಗೂ 14 ಕಳ್ಳತನಗಳನ್ನು ಮಾಡಿರುವುದಾಗಿ ತಿಳಿದು ಬಂದಿದೆ. 14ಕೇಸ್ ಗಳಲ್ಲಿ ಆತನ ಫಿಂಗರ್ ಪ್ರಿಂಟ್ ಹೊಂದಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ದ ಮಾಲಗಳನ್ನು ವಿಲೇವಾರಿ ಮಾಡಲು ಸಹಾಯ ಮಾಡುತ್ತಿದ್ದ ಶಿವರಾಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.



Read more

[wpas_products keywords=”deal of the day”]