ಟೀಮ್ ಇಂಡಿಯಾ ಓಪನರ್ ಕೆಎಲ್ ರಾಹುಲ್ ಒಂದು ಸ್ಥಾನ ಮೇಲೇರಿದ್ದು, ಇಂಗ್ಲೆಂಡ್‌ನ ಎಡಗೈ ಬ್ಯಾಟ್ಸ್‌ಮನ್ ಡಾವಿಡ್ ಮಲಾನ್ ಅವರನ್ನು ಹಿಂದಿಕ್ಕಿ 4ನೇ ರ‍್ಯಾಂಕ್ ಅಲಂಕರಿಸಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಮ್ ಈ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿದ್ದಾರೆ. ರಾಹುಲ್ ಹೊರತಾಗಿ ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕ್ರಮವಾಗಿ 10 ಮತ್ತು 11ನೇ ಸ್ಥಾನದಲ್ಲಿ ಉಳಿದಿದ್ದಾರೆ.
ಆಲ್‌ರೌಂಡರ್‌ಗಳ ವಿಭಾಗದಲ್ಲಿ ಮೊಯೀನ್ ಅಲಿ ಪ್ರಗತಿ ಕಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ಫಲವಾಗಿ ಮೂರು ಸ್ಥಾನ ಪಡೆದು, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಶ್ರೀಲಂಕಾದ ವಾನಿಂದು ಹಸರಂಗ ಅವರಿಗೆ ಸಡ್ಡು ಹೊಡೆದಿದ್ದಾರೆ. ಐದು ಪಂದ್ಯಗಳಲ್ಲಿ 108 ರನ್ ಗಳಿಸಿ, ಬೌಲಿಂಗ್‌ನಲ್ಲಿ 5 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ. ಈ ಪಟ್ಟಿಯಲ್ಲಿ ಮೊಹಮ್ಮದ್ ನಬಿ (1) ಮತ್ತು ಶಕಿಬ್ ಅಲ್ ಹಸನ್ (2) ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಕೊಹ್ಲಿ ಜೊತೆ ಬಾಬರ್ ಹೋಲಿಕೆ ಅನ್ಯಾಯ ಎಂದ ಶಮಿ!
ಇಂಗ್ಲೆಂಡ್ ಎದುರು 5 ಪಂದ್ಯಗಳ ಸರಣಿಯಲ್ಲಿ 15 ವಿಕೆಟ್‌ಗಳನ್ನು ಉರುಳಿಸಿ ಅಬ್ಬರಿಸಿದ ಜೇಸನ್ ಹೋಲ್ಡರ್ ಮತ್ತು ಯುವ ಬೌಲರ್ ಅಕೆಲ್ ಹೊಸೇನ್ ಕೂಡ ಗಣನೀಯ ಪ್ರಗತಿ ಕಂಡಿದ್ದಾರೆ. ಸರಣಿಯ 5ನೇ ಹಾಗೂ ಅಂತಿಮ ಪಂದ್ಯದಲ್ಲಿ 30ಕ್ಕೆ 4 ವಿಕೆಟ್ ಪಡೆದ ಹೊಸೇನ್ 15 ಸ್ಥಾನ ಜಿಗಿದು 18ನೇ ರ‍್ಯಾಂಕ್ ಗಳಿಸಿದರೆ, ಅದೇ ಪಂದ್ಯದಲ್ಲಿ ಹ್ಯಾಟ್ರಿಕ್ ಸಹಿತ 5 ವಿಕೆಟ್ ಸಾಧನೆ ಮೆರೆದ ಹೋಲ್ಡರ್ 4 ಸ್ಥಾನ ಸುಧಾರಿಸಿ 23ನೇ ಶ್ರೇಯಾಂಕ ತಮ್ಮದಾಗಿಸಿಕೊಂಡಿದ್ದಾರೆ.
ವೆಸ್ಟ್ ಇಂಡಿಸ್ ತಂಡ ಈಗ ಭಾರತ ಪ್ರವಾಸ ಕೈಗೊಳ್ಳಲಿದ್ದು, ಆತಿಥೇಯ ಟೀಮ್ ಇಂಡಿಯಾ ಎದುರು ತಲಾ ಮೂರು ಪಂದ್ಯಗಳ ಟಿ20 ಕ್ರಿಕೆಟ್ ಮತ್ತು ಏಕದಿನ ಕ್ರಿಕೆಟ್ ಸರಣಿಗಳಲ್ಲಿ ಪೈಪೋಟಿ ನಡೆಸಲಿದೆ. ಮೊದಲ ಒಡಿಐ ಪಂದ್ಯ ಅಹ್ಮದಾಬಾದ್‌ನಲ್ಲಿ ಫೆ.6ರಂದು ಜರುಗಲಿದೆ.
ಕೊಹ್ಲಿ ಬ್ಯಾಟಿಂಗ್‌ನಲ್ಲಿ ಹಿಂದಿದ್ದ ಖದರ್ ಉಳಿದಿಲ್ಲ ಎಂದ ಚೋಪ್ರಾ!
ಐಸಿಸಿ ಟಿ20-ಐ ಆಲ್‌ರೌಂಡರ್‌ಗಳ ರ‍್ಯಾಂಕಿಂಗ್ ಪಟ್ಟಿ
- ಮೊಹಮ್ಮದ್ ನಬಿ (ಅಹ್ಮದಾಬಾದ್): 265 ರೇಟಿಂಗ್
- ಶಕಿಬ್ ಅಲ್ ಹಸನ್ (ಬಾಂಗ್ಲಾದೇಶ): 231 ರೇಟಿಂಗ್
- ಮೊಯೀನ್ ಅಲಿ (ಇಂಗ್ಲೆಂಡ್): 205 ರೇಟಿಂಗ್
- ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ): 178 ರೇಟಿಂಗ್
- ವಾನಿಂದು ಹಸರಂಗ (ಶ್ರೀಲಂಕಾ): 173 ರೇಟಿಂಗ್
- ಲಿಯಾಮ್ ಲಿವಿಂಗ್‌ಸ್ಟೋನ್ (ಇಂಗ್ಲೆಂಡ್): 171 ರೇಟಿಂಗ್
- ಝೀಶಾನ್ ಮಕ್ಸೂದ್ (ಒಮಾನ್): 160 ರೇಟಿಂಗ್
- ಜೆಜೆ ಸ್ಮಿತ್ (ನಮಿಬಿಯಾ): 158 ರೇಟಿಂಗ್
- ಏಡೆನ್ ಮಾರ್ಕ್ರಮ್ (ದ. ಆಫ್ರಿಕಾ): 156 ರೇಟಿಂಗ್
- ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ): 152 ರೇಟಿಂಗ್
Read more
[wpas_products keywords=”deal of the day gym”]