Karnataka news paper

ಉಡುಪಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ V/S ಹಿಂದೂ ಹುಡುಗರ ಕೇಸರಿ ಶಾಲು..!


ಉಡುಪಿ:ಹಿಜಾಬ್ ವಿವಾದ ಉಡುಪಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗದಂತೆ ಹಬ್ಬಲಾರಂಭಿಸಿದೆ. ನಗರದ ಸರ್ಕಾರಿ ಕಾಲೇಜಿಗೆ ಸೀಮಿತವಾಗಿದ್ದ ವಿವಾದ, ಈಗ ಕುಂದಾಪುರ ತಾಲೂಕಿಗೂ ವಿಸ್ತರಿಸಿದೆ. ಇಲ್ಲಿನ 25ಕ್ಕೂ ಅಧಿಕ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬಂದಿರುವುದಕ್ಕೆ ಪ್ರತಿಯಾಗಿ ನೂರಾರು ಹುಡುಗರು ಕೇಸರಿ ಶಾಲು ಧರಿಸಿ ಕ್ಲಾಸ್ ಅಟೆಂಡ್ ಆಗಿದ್ದಾರೆ. ಪೋಷಕರಿಗೆ ಮನವರಿಕೆ ಮಾಡಲು ಶಾಸಕರು ಕರೆದ ಸಭೆ ವಿಫಲವಾಗಿದೆ.

ಸೆಕೆಂಡ್ ಪಿಯುಸಿ ಪರೀಕ್ಷೆಗೆ ದಿನ ಹತ್ತಿರ ಬರುತ್ತಿದ್ದರೂ, ಮುಸ್ಲಿಂ ವಿದ್ಯಾರ್ಥಿನಿಯರ ‘ಹಿಜಾಬ್ ನಮ್ಮ ಹಕ್ಕು’ ಹೋರಾಟ ಮುಂದುವರೆದಿದೆ. ಉಡುಪಿ ನಗರಕ್ಕೆ ಸೀಮಿತವಾಗಿದ್ದ ವಿವಾದ ಈಗ ಗ್ರಾಮೀಣ ಪ್ರದೇಶಕ್ಕೂ ಹಬ್ಬಲಾರಂಭಿಸಿದೆ. ಕುಂದಾಪುರ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 25ಕ್ಕೂ ಅಧಿಕ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿದ್ದರು. ಸರಕಾರದ ಆದೇಶದಂತೆ ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿತ್ತು.

ಪ್ರಾಂಶುಪಾಲರ ಸೂಚನೆಯ ಹೊರತಾಗಿಯೂ ವಿದ್ಯಾರ್ಥಿನಿಯರು ಮಾತ್ರ ಹಿಜಾಬ್ ಧರಿಸಿ ಪಾಠ ಕೇಳಲು ತರಗತಿಯಲ್ಲಿ ಕೂರುತ್ತಿದ್ದರು. ಪೋಷಕರಿಗೆ ತಿಳಿ ಹೇಳುವ ಸಲುವಾಗಿ ಬುಧವಾರ ಶಾಸಕರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮುಸ್ಲಿಂ ಪೋಷಕರ ಮನವೊಲಿಸಲು ನಾನಾ ಕಸರತ್ತುಗಳನ್ನು ಮಾಡಿದರು.

ಶಾಲಾ ವಾತಾವರಣದಲ್ಲಿ ಸೌಹಾರ್ದತೆ ಕೆಡಬಾರದು, ಸರಕಾರದ ಮುಂದಿನ ಆದೇಶ ಬರುವ ತನಕ ಹಿಜಾಬ್ ಧರಿಸಿ ಬರಕೂಡದು ಎಂದು ಶಾಸಕರು ವಿನಂತಿಸಿದರು. ಶಾಸಕರ ವಿನಂತಿಗೆ ಮುಸ್ಲಿಂ ಪೋಷಕರು ಒಪ್ಪಲಿಲ್ಲ. ಹಾಗಾಗಿ ಈ ಸಭೆ ಯಾವುದೇ ತೀರ್ಮಾನಕ್ಕೆ ಬರಲಿಲ್ಲ.

ಶಾಲೆಗಳಲ್ಲಿ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌ ಸಮವಸ್ತ್ರದ ಜೊತೆ ಹಿಜಾಬ್‌ ಧರಿಸುವಂತಿಲ್ಲ; ಕೇರಳ ಸರ್ಕಾರ
ಕಾಲೇಜಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದಕ್ಕೆ ಪ್ರತಿಯಾಗಿ ಹಿಂದು ಹುಡುಗರು ಕೇಸರಿ ಶಾಲು ಧರಿಸಿ ಬಂದಿದ್ದರು. ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಹಾಜರಾದರು. ಬಿಡುವಿನ ಅವಧಿಯಲ್ಲಿ ಕೇಸರಿ ಶಾಲು ತೊಟ್ಟು ಕ್ಯಾಂಪಸ್ ತುಂಬಾ ಓಡಾಡಿದರು. ಹಿಂದೂ ಜಾಗರಣ ವೇದಿಕೆಯ ಸೂಚನೆಯಂತೆ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಿದ್ದರು.

ಸರಕಾರದ ನಿಯಮ ಪಾಲಿಸಲು ನಾವು ಬದ್ದರಿದ್ದೇವೆ, ಆದರೆ ಎಲ್ಲಿಯ ತನಕ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಕಾಲೇಜಿಗೆ ಬರುತ್ತಾರೋ ಅಲ್ಲಿಯ ತನಕ ಇನ್ನಷ್ಟು ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬರಲಿದ್ದಾರೆ ಎಂದು ಎಚ್ಚರಿಕೆಯನ್ನು ನೀಡಿದರು. ಶಾಸಕರು ಹಾಗೂ ಕಾಲೇಜು ಆಡಳಿತ ಮಂಡಳಿಯ ಜೊತೆ ಹಿಂದೂ ಜಾಗರಣ ವೇದಿಕೆಯ ಮುಖಂಡರು ಮಾತುಕತೆಯನ್ನು ನಡೆಸಿದರು.

ಹಿಜಾಬ್‌ ಧರಿಸಿಯೇ ಬರುತ್ತೇವೆ ಎನ್ನುವವರಿಗೆ ಟಿ.ಸಿ ಕೊಟ್ಟು ಒದ್ದು ಮನೆಗೆ ಕಳಿಸಿ; ಪ್ರಮೋದ್ ಮುತಾಲಿಕ್
ಕಾಲೇಜು ಕ್ಯಾಂಪಸ್ಸಿನ ಒಳಗೆ ಕೇವಲ ಸಮವಸ್ತ್ರ ಧರಿಸಲು ಮಾತ್ರ ಅವಕಾಶ ಎಂದು ಶಿಕ್ಷಣ ಸಚಿವ ನಾಗೇಶ್ ಅವರು ಕುಂದಾಪುರದ ಪೋಷಕರಿಗೂ‌ ಫೋನ್ ಮೂಲಕ ತಿಳಿಸಿದ್ದಾರೆ.‌ ವಿವಾದ ಮಾತ್ರ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾಲೇಜುಗಳಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ಸಂಘರ್ಷ ತಲೆದೋರಿದರೂ ಅಚ್ಚರಿಯಿಲ್ಲ.

ಸರಕಾರ ಸಮಿತಿ ಮಾಡಿ ಸಮವಸ್ತ್ರದ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಹೇಳುತ್ತಿದೆ. ಸರಕಾರದ ಆದೇಶ ಬರುವುದರೊಳಗೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ಪರೀಕ್ಷೆಗೆ ದಿನ ಸಮೀಪಿಸುತ್ತಿದೆ, ಆದರೂ ಉಡುಪಿ ಜಿಲ್ಲೆಯ ಕಾಲೇಜುಗಳಲ್ಲಿ ಮಾತ್ರ ವಸ್ತ್ರ ಸಂಹಿತೆ ಪ್ರಜಾವಂತರ ಸಂಯಮ ಪರೀಕ್ಷೆ ನಡೆಸುತ್ತಿದೆ.

ಉಡುಪಿ: ಹಿಜಾಬ್ ಧರಿಸಿಯೇ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು, ತರಗತಿ ಪ್ರವೇಶಕ್ಕೆ ನಿರಾಕರಣೆ



Read more

[wpas_products keywords=”deal of the day sale today offer all”]